Friday, 13th December 2024

ಪಂಜಾಬ್‌ಗೆ ಭರ್ಜರಿ ಆರಂಭ

ಚಂಡೀಗಢ: ಪಿಎಲ್ 2024ರ ಸೀಸನ್ ಆರಂಭವಾಗಿದ್ದು, ಪಂಜಾಬ್‌ಗೆ ಭರ್ಜರಿ ಆರಂಭ ಸಿಕ್ಕಿದ್ದರೆ, ದೆಹಲಿಗೆ ಮೊದಲ ಪಂದ್ಯದಲ್ಲೇ ಸೋಲಿನ ಆಘಾತ ಎದುರಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ದೆಹಲಿ ತಂಡ 174 ರನ್ ಗಳಿಸಿ ಸವಾಲಿನ ಮೊತ್ತವನ್ನೇ ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ತಂಡ ಆರಂಭಿಕ ಆಘಾತದಿಂದ ಸುಧಾರಿಸಿಕೊಂಡು ಕೊನೆಗೂ ಗುರಿ ಮುಟ್ಟಿತು.

ದೆಹಲಿ ತಂಡದ ಪರವಾಗಿ ಡೇವಿಡ್ ವಾರ್ನರ್ ಆರಂಭದಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿ ಗಮನ ಸೆಳೆದರು. ಆದರೆ 20 ರನ್ ಗಳಿಸಿದ್ದ ಮಿಚ್ಚೆಲ್ ಮಾರ್ಷ್ ಔಟ್ ಆದರು & ಆ ನಂತರ ಡೇವಿಡ್ ವಾರ್ನರ್ ಕೂಡ 29 ರನ್‌ಗೆ ಔಟಾಗಿ ಪೆವಿಲಿಯನ್ ಹಾದಿ ಹಿಡಿದರು.

ಶಾಯ್ ಹೋಪ್ 33 ರನ್‌ಗೆ ತೃಪ್ತಿಪಟ್ಟರು, ರಿಷಬ್ ಪಂತ್ 13 ಬಾಲ್‌ನ ಆಡಿ 18 ರನ್ ಗಳಿಸಿದರು. ಅಂತಿಮವಾಗಿ ಅಕ್ಸರ್ ಪಟೇಲ್ 21 ರನ್ & ಅಬಿಷೇಕ್ ಪೋರೆಲ್ 32 ರನ್ ಗಳಿಸಿ ದೆಹಲಿ ತಂಡ 174 ರನ್ ಗಳಿಸಲು ಸಹಾಯ ಮಾಡಿದರು.

ಇನ್ನಿಂಗ್ಸ್ ಆರಂಭ ಮಾಡಿದ ಪಂಜಾಬ್ ತಂಡ 177 ರನ್ ಚಚ್ಚಿತು. ಶಿಖರ್ ಧವನ್ 22 ರನ್ ಗಳಿಸಿ ಔಟಾದರು. ನಂತರ ಪ್ರಭ್‌ ಸಿಮ್ರಾನ್ ಸಿಂಗ್ ಹಾಗೂ ಸ್ಯಾಮ್ ಕರನ್ ಅವರು ಉತ್ತಮ ಜೊತೆಯಾಟ ನೀಡಿದರು.

ಪ್ರಭ್‌ಸಿಮ್ರಾನ್ ಸಿಂಗ್, 17 ಬಾಲ್ ಆಡಿ 26 ರನ್‌ಗಳನ್ನ ಗಳಿಸಿದರು. ಈ ಆಟದಲ್ಲಿ 5 ಬೌಂಡರಿ ಕೂಡ ಬಾರಿಸಿದರು. ಸ್ಯಾಮ್ ಕರನ್ 47 ಬಾಲ್‌ಗಳನ್ನ ಆಡಿ 6 ಬೌಂಡರಿ 1 ಸಿಕ್ಸರ್ ಬಾರಿಸಿ ಭರ್ಜರಿ ಆಟ ಪ್ರದರ್ಶನ ಮಾಡಿದ್ದರು. ಲಿವಿಂಗ್ಸ್‌ಟನ್ ಅವರು ಕೇವಲ 21 ಬೌಲ್ ಆಡಿ 38 ರನ್ ಚಚ್ಚಿದರು.

2 ಬೌಂಡರಿ & 3 ಸಿಕ್ಸರ್ ಬಾರಿಸಿದ ಲಿವಿಂಗ್ಸ್‌ಟನ್ ಪಂಜಾಬ್ ಪಾಲಿಗೆ ಹೀರೋ ಆದರೆ, ದೆಹಲಿ ತಂಡಕ್ಕೆ ವಿಲನ್ ಆದರು. ಅಂತಿಮವಾಗಿ ದೆಹಲಿ ತಂಡ ತನ್ನ ಮೊದಲ ಪಂದ್ಯದಲ್ಲಿ ಸೋತು ಸುಣ್ಣವಾಗಿದೆ.