ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

New Visa Rule: ಭಾರತೀಯ ವಿದ್ಯಾರ್ಥಿಗಳಿಗೆ ಹೊಡೆತ ಕೊಡುತ್ತಾ ಕೆನಡಾದ ಈ ಹೊಸ ವೀಸಾ ನೀತಿ?

ಕಳೆದ ವಾರವಷ್ಟೇ ಹೊಸ ವಲಸೆ ನಿಯಮಗಳನ್ನ (New immigration rule) ಜಾರಿಗೆ ತಂದ ಕೆನಡಾ (Canada) ಸರ್ಕಾರ ಅಲ್ಲಿ ಓದಲು ಹೋದ ವಿದ್ಯಾರ್ಥಿಗಳಿಗೆ ಹಾಗೂ ಕೆಲಸಗಾರರಿಗೆ ಶಾಕ್ ನೀಡಿದೆ. ಕೆನಡಾಕ್ಕೆ ಬಂದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ 45% ಮತ್ತು ತಾತ್ಕಾಲಿಕ ವಿದೇಶಿ ಕೆಲಸಗಾರರಲ್ಲಿ 22% ಭಾರತೀಯ ನಾಗರಿಕರು ಇದ್ದರು. ಆದ್ದರಿಂದ, ಹೊಸ ನಿಯಮಗಳು ಭಾರತೀಯರ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆಯಿದೆ.

ಅಮೆರಿಕ ಆಯ್ತು, ಈಗ ಕೆನಡಾದಲ್ಲೂ ಭಾರತೀಯರಿಗೆ ಸಂಕಷ್ಟ..!

Profile Sushmitha Jain Feb 25, 2025 11:24 AM

ಕೆನಡಾ: ಬಹುಮತ ಪಡೆದು ಅಧ್ಯಕ್ಷ ಗಾದಿಗೆ ಏರಿದ ಬೆನ್ನಲೇ ವಲಸೆ ನೀತಿಯಲ್ಲಿ ಬದಲಾವಣೆ ತಂದ ಡೊನಾಲ್ಡ್ ಟ್ರಂಪ್(Donald Trump) ಎಚ್​-4 ಅವಲಂಬಿತ ವೀಸಾ ಪಡೆದು ಅಮೆರಿಕದಲ್ಲಿರುವವರ ಸಂಗಾತಿಗಳ ವೀಸಾ ರದ್ದುಪಡಿಸುವುದರ ಕುರಿತು ನಿರ್ಧಾರ ಕೈಗೊಂಡಿದ್ದಾರೆ. ಟ್ರಂಪ್‌ ಶಾಕಿಂಗ್‌ ನಿರ್ಧಾರದಿಂದ ಅಮೆರಿಕದಲ್ಲಿರುವ ಭಾರತೀಯರು ದೇಶ ಬಿಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಅಮೆರಿಕದಲ್ಲಿರುವ ಸುಮಾರು ಸಾವಿರಾದು ಅಕ್ರಮ ಭಾರತೀಯ ವಲಸಿಗರನ್ನು ಹಿಂದಕ್ಕೆ ಭಾರತ ಕರೆಸಿಕೊಳ್ಳುತ್ತಿದ್ದು, ಈ ಮೂಲಕ ಡೊನಾಲ್ಡ್‌ ಟ್ರಂಪ್‌ ಅನ್ನು ಶಾಂತವಾಗಿಸುವ ಕೆಲಸವನ್ನು ಭಾರತ ಸರ್ಕಾರ ಮಾಡಲು ಮುಂದಾಗಿದೆ. ಆದರೆ, ಈ ಮಧ್ಯೆ ಕೆನಡಾ ಕೂಡ ಇತ್ತ ಕಡೆಯಿಂದ ಭಾರತೀಯರನ್ನು ತನ್ನ ದೇಶದಿಂದ ಗಡಿಪಾರು ಮಾಡುವ ತಂತ್ರ ರೂಪಿಸಿದ್ದು, ಕಳೆದ ವಾರವಷ್ಟೇ ಹೊಸ ವಲಸೆ ನಿಯಮಗಳನ್ನ (New immigration rule) ಜಾರಿಗೆ ತಂದ ಕೆನಡಾ (Canada) ಸರ್ಕಾರ ಅಲ್ಲಿ ಓದಲು ಹೋದ ವಿದ್ಯಾರ್ಥಿಗಳಿಗೆ ಹಾಗೂ ಕೆಲಸಗಾರರಿಗೆ ಶಾಕ್ ನೀಡಿದೆ.

ಹೌದು ಕೆನಡಾ ಸರ್ಕಾರ ಜಾರಿಗೆ ತಂದಿರುವ ಈ ನಿಯಮದ ಪ್ರಕಾರ ತಾತ್ಕಾಲಿಕ ವೀಸಾಗಳನ್ನು ರದ್ದುಗೊಳಿಸಲು ಅಧಿಕಾರಿಗಳಿಗೆ ಅಧಿಕಾರ ನೀಡಿದ್ದು, ಈ ಕ್ರಮವು ತಾತ್ಕಾಲಿಕ ವಲಸೆಯನ್ನು ನಿಯಂತ್ರಿಸಲು ಮತ್ತು ಗಡಿ ಭದ್ರತೆಯನ್ನು ಬಲಪಡಿಸಲು ಕೆನಡಾ ಸರ್ಕಾರ ಕೈಗೊಂಡಿರುವ ಪ್ರಯತ್ನದ ಒಂದು ಭಾಗವಾಗಿದೆ. ವಲಸೆ ನಿಯಮಗಳ ಉಲ್ಲಂಘನೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಮತ್ತು ವಲಸೆ ನಿಯಮಗಳನ್ನು ಎಲ್ಲರೂ ಸರಿಯಾಗಿ ಪಾಲಿಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ.

ಜನವರಿ 31, 2025 ರಿಂದ ಜಾರಿಗೆ ಬಂದಿರುವ ನೂತನ ವಲಸೆ ಮತ್ತು ನಿರಾಶ್ರಿತರ ಸಂರಕ್ಷಣಾ ನಿಯಮಗಳನ್ನು ಕೆನಡಾ ಗೆಜೆಟ್ II ನಲ್ಲಿ ಪ್ರಕಟಿಸಲಾಗಿದ್ದು, ಹೊಸ ನಿಯಮಗಳು ಎಲೆಕ್ಟ್ರಾನಿಕ್ ಪ್ರಯಾಣ ಅಧಿಕಾರಗಳು (eTA ಗಳು), ಕೆಲಸದ ಪರವಾನಗಿಗಳು, ಅಧ್ಯಯನ ಪರವಾನಗಿಗಳು ಮತ್ತು ತಾತ್ಕಾಲಿಕ ನಿವಾಸಿ ವೀಸಾಗಳಿಗೆ (TRV ಗಳು) ಅನ್ವಯಿಸುತ್ತವೆ. ಕೆನಾಡ ಜಾರಿಗೆ ತಂದಿರುವ ಈ ನವೀಕರಣ ವೀಸಾ ನಿಯಮದಿಂದ ಇತರೆ ದೇಶಗಳ ಪ್ರಜೆಗಿಂತ ಭಾರತೀಯರ ಮೇಲೆ ಹೆಚ್ಚು ಪ್ರಭಾನ ಬೀರಲಿದ್ದು, ಬೇರೆ ರಾಷ್ಟ್ರಗಳಿಗೆ ಹೋಲಿಸಿದ್ದರೆ, ಅತಿಹೆಚ್ಚು ಭಾರತೀಯರು ಕೆನಾಡದಲ್ಲಿ ಉದ್ಯೋಗ ಹಾಗೂ ಓದುತ್ತಿದ್ದಾರೆ.

ಅಲ್ಲದೇ ಕೆನಾಡ ತೆಗೆದುಕೊಂಡ ನಿರ್ಧಾರದಿಂದ ಅತಿಹೆಚ್ಚು ಭೀತಿ ಎದುರಿಸುತ್ತಿರುವುದೇ ಭಾರತೀಯರಾಗಿದ್ದು, ಕೆನಾಡ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ 4.2 ವಿದ್ಯಾರ್ಥಿಗಳು ಅಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಇದರ ಹೊರತಾಗಿ ಲಕ್ಷಾಂತರ ಮಂದಿ ಉದ್ಯೋಗ ಹರಸಿ ಅಲ್ಲಿಯೇ ಜೀವನ ನಡೆಸುತ್ತಿದ್ದಾರೆ.

ಈ ಮಾನದಂಡದ ಆಧಾರದ ಮೇಲೆ ರದ್ದಾಗಲಿದೆ ವೀಸಾ

ತಪ್ಪು ಮಾಹಿತಿ ನೀಡುವುದು, ಕ್ರಿಮಿನಲ್ ಹಿನ್ನೆಲೆ ಹೊಂದಿರುವುದು ಅಥವಾ ಪ್ರವೇಶಕ್ಕೆ ಅನರ್ಹತೆ ಹೊಂದಿರುವ ವ್ಯಕ್ತಿಯನ್ನು ಅನರ್ಹ ಎಂದು ಪರಿಗಣಿಸಲಾಗುತ್ತದೆ. ಹಾಗೇ ಅನುಮತಿಸಲಾದ ಅವಧಿ ಮೀರಿದ ನಂತರವೂ ಕೆನಡಾದಲ್ಲಿ ಉಳಿಯುವ ವ್ಯಕ್ತಿಗಳ ವೀಸಾಗಳನ್ನು ರದ್ದುಗೊಳಿಸುವ ಅಧಿಕಾರವನ್ನು ಹೊಂದಿದೆ. ವೀಸಾ ನೀತಿಗೆ ವಿರೋಧವಾಗಿ ಅಂದರೆ ಅನುಮತಿಯಿಲ್ಲದೆ ಕೆಲಸ ಮಾಡುವುದು, ಪೂರ್ವಾನುಮೋದನೆಯಿಲ್ಲದೆ ಉದ್ಯೋಗದಾತರು ಅಥವಾ ಸಂಸ್ಥೆಗಳನ್ನು ಬದಲಾಯಿಸುವುದು ಸೇರಿದಂತೆ ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದರೆ ವೀಸಾ ಕ್ಯಾನ್ಸಲ್ ಆಗಲಿದೆ. ಸರಿಯಾದ ದಾಖಲೆಗಳನ್ನು ಸಲ್ಲಿಸದಿದ್ದರೆ ಅಥವಾ ದಾಖಲೆಗಳು ಕಳೆದುಹೋದರೆ, ವ್ಯಕ್ತಿ ಮರಣ ಹೊಂದಿದರೆ, ಆಡಳಿತಾತ್ಮಕ ದೋಷದಿಂದ ದಾಖಲೆಯನ್ನು ನೀಡಿದ್ದರೆ ವೀಸಾವನ್ನು ರದ್ದುಗೊಳಿಸುವ ಅಧಿಕಾರವನ್ನು ವಲಸೆ ಅಧಿಕಾರಿಗಳಿಗೆ ನೀಡಲಾಗಿದೆ.

ಇನ್ನು ಪ್ರವಾಸಿಗರಿಗೆ, ಉದ್ಯೋಗ ನಿಮಿತ್ತ ಬರುವವರಿಗೆ, ಕೆಲಸ ಮಾಡಲು ಮತ್ತು ಅಧ್ಯಯನ ಮಾಡಲು ಕೆನಡಾ ಅವಕಾಶ ನೀಡಲಿದ್ದೂ, ಸಂದರ್ಶಕರು, ಕೆಲಸಗಾರರು ಅಥವಾ ವಿದ್ಯಾರ್ಥಿಗಳಾಗಿ ತಾತ್ಕಾಲಿಕ ಆಧಾರದ ಮೇಲೆ ಕೆನಡಾಕ್ಕೆ ಬರುವ ವಿದೇಶಿ ಪ್ರಜೆಗಳು ವಲಸೆ ಮತ್ತು ನಿರಾಶ್ರಿತರ ಸಂರಕ್ಷಣಾ ಕಾಯ್ದೆ (IRPA) ಮತ್ತು ನಿಯಮಗಳ ಅಡಿಯಲ್ಲಿ ಪ್ರವೇಶ ಮತ್ತು ಅರ್ಹತಾನಿಯಮಗಳನ್ನು ಪಾಲಿಸಬೇಕು ಎಂದು IRCC ಹೇಳಿದೆ.

ಭಾರತೀಯರ ಮೇಲೆ ಪ್ರಭಾವ ಹೆಚ್ಚು

2024 ರ ಮೂರನೇ ತ್ರೈಮಾಸಿಕ ವರದಿಯ ಪ್ರಕಾರ ಕೆನಡಾದಲ್ಲಿ ಸುಮಾರು 3 ಮಿಲಿಯನ್ ವಲಸೆ ನಿವಾಸಿಗಳಿದ್ದು, ಇದರಲ್ಲಿ ಕೆಲಸಕ್ಕೆ ತೆರಳಿದವರು, ವಿದ್ಯಾಭ್ಯಾಸ ನಿಮಿತ್ತ ಹೋದವರು ಮತ್ತು ಆಶ್ರಯದ ಹಕ್ಕುದಾರರು ಸೇರಿದ್ದಾರೆ. ಭಾರತವು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ತಾತ್ಕಾಲಿಕ ವಿದೇಶಿ ಕೆಲಸಗಾರರಿಗೆ ನಿರಂತರವಾಗಿ ಪ್ರಮುಖ ಮೂಲ ದೇಶವಾಗಿದೆ. 2022 ರಲ್ಲಿ, ಕೆನಡಾಕ್ಕೆ ಬಂದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ 45% ಮತ್ತು ತಾತ್ಕಾಲಿಕ ವಿದೇಶಿ ಕೆಲಸಗಾರರಲ್ಲಿ 22% ಭಾರತೀಯ ನಾಗರಿಕರು ಇದ್ದು, ಆದ್ದರಿಂದ, ಹೊಸ ನಿಯಮಗಳು ಭಾರತೀಯರ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆಯಿದೆ.