Vijayapura (Indi) News: ಅಧ್ಯಕ್ಷರಾಗಿ ಗುರುಪಾದ ಕೋಳಾರಿ, ಉಪಾಧ್ಯಕ್ಷ ಮಲ್ಲಪ್ಪ ಮಿರಗಿ ಆಯ್ಕೆ
ರೈತ ದೇಶದ ಬೆನ್ನೇಲಬು ಇಂದು ರೈತರ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಒಂದು ಕಡೆ ನಿಸರ್ಗದ ಸಮಸ್ಯೆ ಇನ್ನೊಂದು ಕಡೆ ರೈತರು ಬೆಳೆದ ದವಸ ಧಾನ್ಯಗಳಿಗೆ ಸರಿಯಾದ ನಿಯಂತ್ರಿತ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ಇರುವುದು. ರೈತರಿಗೆ ಬರಬೇಕಾದ ಸರಕಾರದ ಸೌಲಭ್ಯಗಳು ಮನೆ ಬಾಗಿಲಿಗೆ ತಲುಪಿಸಬೇಕು.

ಶಿರಶ್ಯಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ,ಉಪಾಧ್ಯಕ್ಷರ ಆಯ್ಕೆ ನಡೆಯಿತು.

ಇಂಡಿ: ತಾಲೂಕಿನ ಶಿರಶ್ಯಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಡೆದ ಚುನಾವಣೆ ಯಲ್ಲಿ ಅಧ್ಯಕ್ಷರಾಗಿ ಗುರುಪಾದ ಕೋಳಾರಿ, ಉಪಾಧ್ಯಕ್ಷ ಮಲ್ಲಪ್ಪ ಮಿರಗಿ ಆಯ್ಕೆಯಾಗಿದ್ದಾರೆ.
ರೈತ ದೇಶದ ಬೆನ್ನೇಲಬು ಇಂದು ರೈತರ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಒಂದು ಕಡೆ ನಿಸರ್ಗದ ಸಮಸ್ಯೆ ಇನ್ನೊಂದು ಕಡೆ ರೈತರು ಬೆಳೆದ ದವಸ ಧಾನ್ಯಗಳಿಗೆ ಸರಿಯಾದ ನಿಯಂತ್ರಿತ ಮಾರುಕಟ್ಟೆ ಯಲ್ಲಿ ಬೆಲೆ ಇಲ್ಲದೆ ಇರುವುದು. ರೈತರಿಗೆ ಬರಬೇಕಾದ ಸರಕಾರದ ಸೌಲಭ್ಯಗಳು ಮನೆ ಬಾಗಿಲಿಗೆ ತಲುಪಿಸಬೇಕು. ಇಂದು ಅಧಿಕಾರ ಅಂತಸ್ತಿಕ್ಕಿಂತ ಸೇವೆ ಮುಖ್ಯ ರೈತರ ಸೇವೆಯಲ್ಲಿ ದೇವರನ್ನು ಕಾಣುವ ಭಾಗ್ಯ ಇಂದು ಬಂದಿದೆ ಎಂದು ನೂತನ ಅಧ್ಯಕ್ಷ ಗುರುಪಾದ ಕೋಳಾರಿ ಹೇಳಿದರು
ಇದನ್ನೂ ಓದಿ: .Indi (Vijayapura) News: ರಕ್ತ ಪೂರೈಸುವ ಕಾರ್ಯ ಅವಳಿ ಸಹೋದರರ ನೇತೃತ್ವದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ
ಕರವೇ ಅಧ್ಯಕ್ಷ ಬಾಳು ಮುಳಜಿ ಕೃಷಿ ಪತ್ತಿನ ಸಹಕಾರಿ ಸಂಘಗಳ ಕುರಿತು ಮಾತನಾಡಿದರು.
ಸದಾಶಿವ ಸಾಹುಕಾರ, ಶ್ರೀಶೈಲ ಸಾಹುಕಾರ ಬಿರಾದಾರ, ಈಶ್ವರಗೌಡ ಬಗಲಿ, ಮುಳಜಿ ಸಂಗಯ್ಯಾ ಹಿರೇಮಠ, ಯಶವಂತ ತೇಲಗ, ಅರವಿಂದ ಬಿರಾದಾರ, ಗ್ರಾ.ಪಂ ಅಧ್ಯಕ್ಷ ಶರಣಬಸು ಕಮತಗಿ , ಮಲ್ಲು ನರಳಿ, ಶರಣು ಪಾಸೋಡಿ ಸೇರಿದಂತೆ ಅನೇಕರಿದ್ದರು.