Saturday, 27th April 2024

ಹೊರಗಿನ ಕಳ್ಳರಿಗೆ ಒಳಗಿನವರ ಬೆಂಬಲ

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ದೇಶಭಕ್ತ ಹೆಡ್ಗೇವಾರರನ್ನು ಶಾಲಾಪಠ್ಯದಲ್ಲಿ ಪರಿಚಯಿಸುವುದನ್ನು ಮಕ್ಕಳಲ್ಲಿ ಜನಾಂಗೀಯ ದ್ವೇಷ ತುಂಬುವ ಕ್ರಮ ಎಂದು ಪ್ರತಿಪಾದಿಸುವ ಬಿಳಿಮಲೆಗೆ ತಮಗೆ ಅನ್ನ-ನೀರು-ವಗೈರೆ ನೀಡಿದ ಕಾಂಗ್ರೆಸ್ ಪಕ್ಷದ ಸಂಸದ ಶಶಿ ತರೂರರನ್ನು ಪುನರ್‌ ಪರಿಚಯಿಸಬೇಕಾದ ತುರ್ತಿದೆ.

ಮನಸೋ ಇಚ್ಛೆ ಸ್ನೇಹ ಬಯಸುವುದು ಮತ್ತು ಸ್ನೇಹದ ಆಹ್ವಾನವನ್ನು ಹಿಂದೆ ಮುಂದೆ ನೋಡದೆ ಒಪ್ಪಿಕೊಳ್ಳುವುದು, ಇವೆರ ಡನ್ನೂ ಫೇಸ್ಬುಕ್ ಸಾಧ್ಯವಾಗಿಸಿದೆ. ವಯಸ್ಸು, ಲಿಂಗ, ರಾಷ್ಟ್ರೀಯತೆ, ಗಡಿಗಳನ್ನು ಮೀರಿ ಸ್ನೇಹ ಪಡೆಯಬಲ್ಲ ವಿಪುಲ ಅವ ಕಾಶಕ್ಕೆ ಫೇಸ್ಬುಕ್ ಸಂಖ್ಯೆಯ ಮಿತಿ ವಿಧಿಸಿದೆ ನಿಜ, ಆದರೆ ಆ ಸವಲತ್ತಿನ ಮಿತಿಯ ನೂರನೇ ಒಂದು ಭಾಗದಷ್ಟೇ ಪ್ರಯೋಜನ ಪಡೆದುಕೊಂಡವರೂ ಕೆಲವೊಮ್ಮೆ ತಮ್ಮ ಸ್ನೇಹ ವೊಂದರ ಮೂಲವನ್ನು ಪತ್ತೆಹಚ್ಚಲಾಗದೆ  ಗಲಿಬಿಲಿ ಗೊಳ್ಳುತ್ತಾರೆ.

ಝುಕರ್‌ಬರ್ಗ್‌ನ ಅನುಪಸ್ಥಿತಿಯ ಪೌರೋಹಿತ್ಯದಿಂದ ಸಂಪಾದಿಸಿದ ಸ್ನೇಹವೊಂದನ್ನು ನೀವೇ ಬಯಸಿದ್ದೆ. ಅವರು ಕೋರಿಕೆ ಸಲ್ಲಿಸಿ ಪಡೆದz ಎಂಬುದನ್ನು ನೆನಪು ಮರೆಮಾ ಚಿಸುತ್ತದೆ. ಮಹತ್ವದ ವಿಷಯಗಳನ್ನು ಮರೆತು, ಬೇಡದ ವಿಷಯಗಳನ್ನು ಜೋಪಾನ ಮಾಡುವುದೇ ಆಧು ನಿಕ ಮನಸ್ಸಿನ ವೈಶಿಷ್ಟ್ಯವಾಗಿದೆ.

ನೆರೆರಾಷ್ಟ್ರಗಳ ಉಗ್ರರು ಸೀಮೋಲ್ಲಂಘನೆ ಮಾಡಿ ಭಾರತದಲ್ಲಿ ನಡೆಸುವ ಭಯೋತ್ಪಾ ದಕ ಕೃತ್ಯಗಳಿಗೆ ಸ್ಥಳೀಯರ ಕುಮ್ಮಕ್ಕೂ, ಸಹಭಾಗಿತ್ವ, ಸಹಕಾರ, ಪ್ರಾಯೋಜಕತೆ ಇದ್ದೇ ಇರುತ್ತದೆ. ಬಾಗಿಲು ಮುರಿಯದೇ ಅಥವಾ ಕನ್ನ ಹಾಕದೇ ನಡೆಸುವ ಕಳ್ಳತನದ ಪ್ರಕರಣಗಳಲ್ಲೂ ಪೊಲೀಸರು ಶಂಕಿಸುವುದು ಒಳಗಿನವರನ್ನೇ. ವಿಶೇಷವಾಗಿ, ಮನೆಗೆಲಸದವರನ್ನೇ.

ಎಲ್ಲ ಕಳ್ಳತನಗಳಿಗೂ ಮುಸುಕುಧರಿಸಿದ ಕಳ್ಳರೇ ಕಾರಣರಾಗಿರುವುದಿಲ್ಲ. ಉದಾಹರಣೆಗೆ, ಈ ಮಾತಿನ ಅರ್ಥ ಮನೆಕಟ್ಟಿ
ಅನುಭವವಿರುವರಿಗೆ ಬೇಗ ಅರ್ಥವಾಗುತ್ತದೆ. ಅಂಥ ಅನುಭವವುಳ್ಳ ನನ್ನ ಸ್ನೇಹಿತರೊಬ್ಬರು ತನ್ನ ಮನೆ ಕಟ್ಟಿಕೊಟ್ಟ ಕಾಂಟ್ರಾಕ್ಟರ್‌ನ ಸ್ವಗೃಹದ ಉದ್ಘಾಟನೆಗೆ ಹೋಗಿದ್ದರು.

ಗೃಹ ಪ್ರವೇಶದ ಶುಭ ಸಮಾರಂಭದಂದು ಅವರು ಮನೆ ಒಡೆಯನಿಗೆ ನಗುತ್ತ ಹೇಳಿದ್ದು: ಬರಿಗೈಲಿ ಬಂದೆ, ಬೇಕೆಂದೇ ಉಡುಗೊರೆ ತರಲಿಲ್ಲ. ನಿಮಗೂ ಗೊತ್ತು, ನಿಮ್ಮ ಮನೆಗೆ ಈಗಾಗಲೇ ನನ್ನ ದುಡ್ಡು ಹರಿದಿದೆ. ಸಾರಾಂಶವೇನೆಂದರೆ, ದರೋಡೆ ಮಾಡುವವರಿಗೆ
ನಿರ್ದಿಷ್ಟ ಸಮವಸವಿರುವುದಿಲ್ಲ. ಮೈಸೂರಿಗರೂ, ನನ್ನ ಫೇಸ್ಬುಕ್ ಮಿತ್ರರೂ ಆದ ಅರೇನಳ್ಳಿ ಶಿವಶಂಕರ್ ಧರ್ಮೇಂದ್ರ ಕುಮಾರ್ ಬ್ರಿಟಿಷರು (ಅರ್ಥಾತ್ ಕಿರಿಸ್ತಾನರು) ಅಂದಿನ ಮೈಸೂರು ಸಂಸ್ಥಾನದ ಕೋಲಾರದ ಚಿನ್ನದ ಗಣಿಯನ್ನು ಬಗೆದು ವರ್ಷಂಪ್ರತಿ ತಮ್ಮ ದೇಶಕ್ಕೆ ರವಾನಿಸುತ್ತಿದ್ದ ಚಿನ್ನದ ಪ್ರಮಾಣ 10000 ಕಿಲೋ ಎಂದು ದಾಖಲಿಸಿದ್ದಾರೆ. ಈ ಹಗಲು ದರೋಡೆ ಸುಮಾರು ಆರು ದಶಕಗಳ ಕಾಲ ಅವ್ಯಾಹತವಾಗಿ ನಡೆಯಿತು. ಅಂದರೆ, ದೇಶದ ಸಣ್ಣ ಭಾಗವಾದ ಒಂದು ಊರಿನಿಂದ ಅವರು ಕೊಳ್ಳೆ ಹೊಡೆದದ್ದು ಆರು ಲಕ್ಷ ಕಿಲೋ ಬಂಗಾರ.

ನಮ್ಮ ಸಮೃದ್ಧ ದೇಶವನ್ನು ದೋಚುವುದು, ಬಾಚುವುದು ಬ್ರಿಟಿಷರಿಂದ ಆರಂಭವಾಗಲಿಲ್ಲ. ತುರುಕರು ಆ ಮೊದಲೇ ಕೊಳ್ಳೆ ಹೊಡೆದಾಗಿತ್ತು. ಯುರೋಪಿನಿಂದ ಬಂದ ಕಿರಿಸ್ತಾನರು ಕೊಳ್ಳೆಯಲ್ಲಿ ಪ್ರತಿಸ್ಪರ್ಧಿಗಳಾದರು. ಬ್ರಿಟಿಷರು ಕಾಲ್ತೆಗೆದ ಮೇಲೂ ಲೂಟಿ ಮುಂದುವರಿಯಿತು – ಈ ಬಾರಿ ಕಾಂಗ್ರೆಸಿನಿಂದ. ಅದೆಷ್ಟೋ ತಲೆಮಾರುಗಳು ತಿಂದು ತೇಗುವಷ್ಟು ತುರುಕರು/ಕಿರಿಸ್ತಾನರು ಕೊಳ್ಳೆಹೊಡೆದ ನಂತರವೂ ತಿರುವನಂತಪುರದ ದೇವಸ್ಥಾನದಲ್ಲಿ ಬಂಗಾರದ ಬೃಹತ್ ಕೋಠಿಗಳಿವೆ. ಅದೇ ತಿರುವನಂತಪುರದ, ಅದೇ ಕಾಂಗ್ರೆಸ್ ಪಕ್ಷದ ಸದಸ್ಯರಾದ ಶಶಿ ತರೂರ್ ಆಕ್ಸ್ ಫರ್ಡ್ ಯೂನಿಯನ್ನನ್ನು ದ್ದೇಶಿಸಿ ಅಮೋಘ ಉಪನ್ಯಾಸ ನೀಡಿ ಸರಿಯಾಗಿ ಏಳು ವರ್ಷಗಳಾಗುತ್ತಿದೆ (ಮೇ ೨೮).

ಸುಮಾರು ಎರಡು ಶತಮಾನಗಳ ಕಾಲ ಭಾರತವನ್ನು ಬರ್ಬಾದು ಮಾಡಿದ ಬ್ರಿಟಿಷರ ದುರಾಡಳಿತವನ್ನು ಶಶಿ ಸಮರ್ಥ ಇಂಗ್ಲಿಷ್‌ ನಲ್ಲಿ ವಿವರಿಸಿದ್ದಾರೆ. ಭಾರತಕ್ಕೆ ಬ್ರಿಟಿಷರು ಕಾಲಿಟ್ಟಾಗ ವಿಶ್ವದ ಒಟ್ಟು ಆರ್ಥಿಕ ವ್ಯವಸ್ಥೆಯ ಗಾತ್ರದಲ್ಲಿ ಭಾರತದ ಕೊಡುಗೆ ಶೇಕಡಾ ೨೩ರಷ್ಟಿದ್ದು, ಅವರು ತೊಲಗಿದಾಗ ಶೇಕಡಾ ನಾಲ್ಕಕ್ಕೆ ಕುಸಿದಿತ್ತು.

ರಸ್ತೆ ಮತ್ತು ರೈಲು ಮಾರ್ಗಗಳನ್ನು ಅವರು ನಿರ್ಮಿಸಿದ್ದು ಲೂಟಿ ಹೊಡೆದದ್ದನ್ನು ತಮ್ಮ ರಾಣಿಯ ಬೊಕ್ಕಸವನ್ನು ತುಂಬಿ
ಸಲು ಸರಾಗವಾಗಿ ಸಾಗಿಸುವುದಕ್ಕೆ. ಭಾರತೀಯರ ಅನುಕೂಲಕ್ಕಲ್ಲ. ತನ್ನ ದೇಶದ ಶ್ರೀಮಂತರಿಗೆ ಮತ್ತಷ್ಟು ಧನಿಕರಾಗುವ ಅವಕಾಶ ಕೊಡುವ ಏಕೈಕ ಉದ್ದೇಶದಿಂದ ರೈಲ್ ಲೈನುಗಳನ್ನು ಧಾರಾಳವಾಗಿ ಎಳೆಯಲು ಗುತ್ತಿಗೆ ನೀಡಲಾಯಿತು. ಇದನ್ನು ಶಶಿ ಇಂಗ್ಲೆಂಡ್‌ನಲ್ಲಿ ಹೇಳಿದ್ದಾರೆ. ಅವರ ಭಾಷಣದುದ್ದಕ್ಕೂ ಅವರ ವಿಚಾರಗಳನ್ನು ಅನುಮೋದಿಸುವಂತೆ ಕರತಾಡನವಾಗುತ್ತದೆ. ಮಂತ್ರಮುಗ್ಧರಾಗಿ ಅವರ ಮಾತನ್ನು ಆಲಿಸುತ್ತ ಚಪ್ಪಾಳೆ ತಟ್ಟುವವರು ಬ್ರಿಟಿಷ್ ಸಭಿಕರೇ.

ಮಧ್ಯಪ್ರಾಚ್ಯದ ನಾನಾ ಭಾಗಗಳಿಂದ ಬಂದ ಮೃಗಸ್ವಭಾವದ ತುರುಕರು ಮತ್ತು ತುರಕರೇತರರು ನಡೆಸಿದ ಬರ್ಬರ ಕೃತ್ಯಗಳ ಕಿರುಪರಿಚಯ ಇದೀಗಷ್ಟೆ ಕೆಲವಾದರೂ ಸಾಮಾನ್ಯ ಭಾರತೀಯ ಓದುಗರಿಗೆ ಆಗಲಾರಂಭಿಸಿದೆ. ಕಿರಿಸ್ತಾನರು ನಡೆಸಿದ ದಾಂಧಲೆಗೆ ಹೆಚ್ಚು ಪ್ರಚಾರ ಸಿಕ್ಕಿಲ್ಲ. ಸಿಕ್ಕಿದ್ದರೂ (ದಿನದ ಎಲ್ಲ ಕಾಲದಲ್ಲೂ ಡಿಕೆ ಶಿವಕುಮಾರ್‌ಗೆ ಸರಿಯಾಗಿ ಉಚ್ಚರಿಸಲಾಗದ) ಜಲಿಯನ್ ವಾಲಾಬಾಗ್ ಅಥವಾ ಗೋವಾದಲ್ಲಿ ಪೋರ್ಚುಗೀಸರಿಂದ ನಡೆದ ಹತ್ಯಾಕಾಂಡಗಳ ಬಗ್ಗೆ ಮಾತ್ರ ತುಸು ಅರಿವಿದೆ. ಬಂಗಾಳದಲ್ಲಿ ಸಂಭವಿಸಿದ ಭೀಕರ ಕ್ಷಾಮಕ್ಕೆ ಕಾರಣ ಅಂದಿನ ಬ್ರಿಟಿಷ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಎಂಬುದು ತಿಳಿದಿಲ್ಲ.

ಯುರೋಪಿಯನ್ನರ ತುಂಬಿದ ಹೊಟ್ಟೆಯನ್ನು ಮತ್ತಷ್ಟು ತುಂಬಿಸುವ ಸಲುವಾಗಿ ಭಾರತದಿಂದ ತನ್ನ ದೇಶಕ್ಕೆ ಧವಸ
ಧಾನ್ಯ ಗಳನ್ನು ಸಾಗಿಸಿ ಕಳ್ಳದಾಸ್ತಾನು ಮಾಡಿದ ಚರ್ಚಿಲ್ ಕೋಟಿಗಟ್ಟಲೆ ಭಾರತೀಯರು ಹೊಟ್ಟೆಗಿಲ್ಲದೆ ಸಾಯುವುದನ್ನು ನೋಡಿಯೂ ನಿರಾತಂಕವಾಗಿರುತ್ತಾನೆ. ಜನ ಸಾಯುತ್ತಿದ್ದಾರೆ ಎಂದು ಅವನ ಗಮನಕ್ಕೆ ತಂದಾಗ ಅದು ಹೇಗೆ ಗಾಂಧಿ ಇನ್ನೂ ಸತ್ತಿಲ್ಲ? ಎಂದು ಕೇಳುತ್ತಾನೆ.

ಶಶಿ ಪ್ರಸ್ತಾಪಿಸಿರುವ ಮತ್ತೊಂದು ಆಸಕ್ತಿಕರ ವಿಚಾರವೊಂದಿದೆ. ಭಾರತವನ್ನು ಹಿಗ್ಗಾಮುಗ್ಗಾ ಲೂಟಿ ಮಾಡುವುದರ ಜತೆಗೆ ಹಿಂದಿಯಿಂದ ಅನಾಮತ್ತು ಎತ್ತಿಹಾಕಿಕೊಂಡು ಹೋಗಿ ತಮ್ಮ ಭಾಷೆಯಲ್ಲಿ ಸಲೀಸಾಗಿ ಸೇರಿಸಿಕೊಂಡ ಪದ ಯಾವುದು ಗೊತ್ತೇ? Loot. ತಾನು ನಿರ್ಗಮಿಸಿದ ನಂತರವೂ ದುರಾಡಳಿತ ನಡೆಸಿದ ಅದರ ವಸಾಹತುಗಳಲ್ಲಿ ಇನ್ನೂ ನೆಲೆಸಿರುವ ಕೆಲವು ತೀವ್ರತೆರ ನಾದ ಸಮಸ್ಯೆಗಳಿಗೆ ಬ್ರಿಟನ್ ಹೊಣೆ ಹೊರಬೇಕೆಂದು ಶಶಿ ಆಗ್ರಹಿಸುತ್ತಾರೆ. ಅಂತಹ ಜ್ವಲಂತ ಸಮಸ್ಯೆಗಳಲ್ಲಿ ಜನಾಂಗೀಯ ದ್ವೇಷ, ಮತೀಯ ಅಸಹನೆ ಸೇರಿದೆ ಎನ್ನುತ್ತಾರೆ ಶಶಿ.

ಇವೆಲ್ಲ ವಿಚಾರಗಳನ್ನೂ ಬ್ರಿಟಿಷರ ಮುಂದೆಯೇ, ತಾನು ಜನ್ಮ ತಳೆದ ಇಂಗ್ಲೆಂಡ್‌ನ, ನಿರರ್ಗಳವಾಗಿ ಮಂಡಿಸಿದ ಶಶಿಯನ್ನು ಯಾವುದೇ ಹೆಮ್ಮೆಯ ಭಾರತೀಯ ಒಪ್ಪಿಕೊಳ್ಳಬೇಕು, ಮುಕ್ತವಾಗಿ ಪ್ರಶಂಸಿಸಬೇಕು. ಭಾರತವನ್ನು ವಿದೇಶೀ ದಾಳಿಕೋರರೂ, ವಸಾಹತು ಶಾಹಿಗಳೂ ಆ ಮಟ್ಟಿಗೆ ಗೋರಿದ ದೇಶ ಅದು ಹೇಗೆ ಬಡರಾಷ್ಟ್ರವಾಗಿದ್ದೀತು? ಶ್ರೀಮಂತ ರಾಷ್ಟ್ರವೆಂದ ಮೇಲೆ ಆ ಶ್ರೀಮಂತಿಕೆಗೆ ವಿದ್ಯೆ ಮತ್ತು ಜ್ಞಾನಗಳೂ ಕಾರಣವಾಗಿದ್ದವೆಂಬುದನ್ನು ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಓಲೈಸಿಕೊಂಡೇ ಹೊಟ್ಟೆ ಹೊರೆದುಕೊಂಡ ಪರಾವಲಂಬಿಗಳಷ್ಟೇ ನಿರಾಕರಿಸಬಲ್ಲರು.

ಬ್ರಿಟಿಷರು ಭಾರತದಿಂದ ಕಾಲ್ಕಿತ್ತ ಮಾತ್ರಕ್ಕೆ ಮಿಷನರಿಗಳ ಪ್ರಾಬಲ್ಯ ಇಲ್ಲಿ ಕಡಿಮೆಯಾಗಿಲ್ಲ. ನಾನಾ ರೂಪದಲ್ಲಿ ಅವರಿಂದ ಸಾಂಸ್ಕೃತಿಕ ದುರಾಕ್ರಮಣ ಮುಂದುವರಿದಿದೆ. ಅದಕ್ಕೆ ಒಳಗಿನವರ ಕುಮ್ಮಕ್ಕೂ ಇದ್ದೇ ಇದೆ. ಮಿಷನರಿಗಳು ಕರ್ನಾಟಕಕ್ಕೆ ಕಾಲಿಡದಿದ್ದಿದ್ದರೆ ಆಧುನಿಕ ವಿದ್ಯಾಭ್ಯಾಸ ಕ್ರಮ ನಮ್ಮಿಂದ ದೂರವಿರುತ್ತಿತ್ತು. ಇದು ಪುರುಷೋತ್ತಮ ಬಿಳಿಮಲೆ ಎಂಬ JNUವಿನ ಪಾಪದ ಕೂಸಿನ ಥಿಯರಿ. ದೆಹಲಿಯ ಕರ್ನಾಟಕ ಭವನದ ಕೊಠಡಿಯಲ್ಲಿ ಅಂದು ಅವೇಳೆಯಲ್ಲಿ ಸಮಾನ ಮನಸ್ಕರೊಟ್ಟಿಗೆ ಹರಟುತ್ತ ಕುಳಿತ ವ್ಯಕ್ತಿಗೆ ಪಕ್ಕದ ಕೋಣೆಯಲ್ಲಿದ್ದ ನ್ಯಾಯಾಧೀಶರು ಮಾತನ್ನು ಪೂರ್ಣಗೊಳಿಸಲು ಅಡ್ಡ ಬಂದುದ್ದರಿಂದ ಇದೀಗ ಅದನ್ನು ಹೇಳಲು ಪುರುಸೊತ್ತಾಗಿರಬೇಕು.

ದೇಶಭಕ್ತ ಹೆಡ್ಗೇವಾರರನ್ನು ಶಾಲಾಪಠ್ಯದಲ್ಲಿ ಪರಿಚಯಿಸುವುದನ್ನು ಮಕ್ಕಳಲ್ಲಿ ಜನಾಂಗೀಯ ದ್ವೇಷ ತುಂಬುವ ಕ್ರಮ ಎಂದು ಪ್ರತಿಪಾದಿಸುವ ಬಿಳಿಮಲೆಗೆ ತಮಗೆ ಅನ್ನ-ನೀರು- ವಗೈರೆ ನೀಡಿದ ಕಾಂಗ್ರೆಸ್ ಪಕ್ಷದ ಸಂಸದ ಶಶಿ ತರೂರರನ್ನು ಪುನರ್‌ ಪರಿಚಯಿಸಬೇಕಾದ ತುರ್ತಿದೆ. ಮಿಷನರಿಗಳ ಋಣಕ್ಕೆ ಒಳಗಾಗಿ ಅವರ ಪರವಾಗಿ ಹೇಳಿಕೆ ನೀಡಿದ್ದಾರೇನೋ ಅಂತ ಅನುಮಾನ ಹುಟ್ಟಿಸುವ ಬಿಳಿಮಲೆ ಅದೇ ಉಸಿರಿನಲ್ಲಿ ಮುಸ್ಲಿಮರಿಂದಲೇ ಕರ್ನಾಟಕಕ್ಕೆ ಭೂಪಟದಲ್ಲಿ ಅಷ್ಟಗಲ ಜಾಗ ಸಿಕ್ಕಿತು ಎಂದಿದ್ದಾರೆ. ಇತಿಹಾಸ, ಭೂಗೋಳ ಶಾಸ್ತ್ರಗಳ ತಮ್ಮ ವಿದ್ವತ್ತಿನ ಶಾಕ್‌ನಿಂದ ಚೇತರಿಸಿಕೊಳ್ಳುವ ಮೊದಲೇ ಮಾನವಶಾಸ್ತ್ರವೂ ತಮಗೆ ಟುಕದ ವಿಷಯವೇನಲ್ಲ ಎಂಬಂತೆ ಕರ್ನಾಟಕದ ಮೂಲನಿವಾಸಿಗಳು ದಲಿತರು ಎಂಬ ಹೊಳಹನ್ನು ಹರಿಸಿದ್ದಾರೆ!

ತನ್ಮೂಲಕ ತಮ್ಮ ಒಲವಿನ ಪಕ್ಷದ ಚುನಾವಣಾ ಪ್ರಣಾಳಿಕೆಯ ಕರಡನ್ನೇನಾದರೂ ಸಿದ್ಧಪಡಿಸಿದ್ದಾರೇನೋ ಎನ್ನುವ ಗುಮಾನಿಗೆ ಕಾರಣರಾಗಿದ್ದಾರೆ. ಬಿಳಿಮಲೆಯವರಿಗಿಂತ ಹೆಚ್ಚು ಓದಿರುವ, ಓದಿಕೊಂಡಿರುವ, ಅವರ ಕಲ್ಪನೆಗೆ ಮೀರಿ ಸಾಧಿಸಿರುವ ಶಶಿ ತರೂರಿಗೂ, ಬಿಳಿಮಲೆಗೂ ಒಂದೇ ವಯಸ್ಸು – ೬೫. ಆದರೆ, ಶಶಿಗೆ ಮರೆವು ಅಡರಿಕೊಂಡಿಲ್ಲ. ಬಿಳಿಮಲೆಗೆ ಮರೆವೋ, ಮರುಳೋ ಕಾಣೆ. ಆ ರೀತಿ ಮಾತನಾಡುತ್ತಾರೆ. ಅವು ರಾಜಕೀಯ ಕಾರಣದಿಂದ ಹೊರಟ ಮಾತುಗಳಲ್ಲದಿದ್ದರೆ, ಅವರ ಗಮನಕ್ಕೆ ಒಂದು ವಿಷಯವನ್ನು ತರುತ್ತೇನೆ. ಶಶಿಗೆ ಉಪನಿಷತ್ತುಗಳ ಪರಿಚಯವಿದೆ. ಸಂಸ್ಕೃತ ಶ್ಲೋಕಗಳನ್ನು ಕಂಠಪಾಠ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ, ಧೀಶಕ್ತಿಯೂ ವೃದ್ಧಿಸುತ್ತದೆ.

ಆದರೆ, ಭಗವದ್ಗೀತೆಯನ್ನು ವಿರೋಧಿಸುವ ಬಿಳಿಮಲೆಗೆ ಅದು ಪಥ್ಯವಾಗಲಾರದು. ಅವರು ತಮ್ಮ ಸ್ವಂತ ಲಾಭಕ್ಕಾಗಿಯಾದರೂ ಗೀತೆಯನ್ನು ಬಾಯಿಪಾಠ ಮಾಡಿದರೆ ನಾನಂತೂ ‘ಭೂತದ ಬಾಯಲ್ಲಿ ಭಗವದ್ಗೀತೆ’ ಎಂದು ಆಡಿಕೊಳ್ಳುವುದಿಲ್ಲ.
ಪುರುಷೋತ್ತಮನೆಂಬ ಹೆಸರಿಗೆ ನ್ಯಾಯ ಒದಗಿಸಲಿಕ್ಕಾಗದರೂ ಅವರು ಗೀತೆ ಕಲಿಯಲಿ. ಕಲಿಕೆಗೆ ವಯಸ್ಸು ಅಡ್ಡ ಬರಬಾರದು. ಮರೆಗುಳಿತನಕ್ಕೂ, ಆತ್ಮೋದ್ಧಾರಕ್ಕೂ ಅದು ಸೂಕ್ತ ಚಿಕಿತ್ಸೆ. ಅವರ ೬೦ ಸ್ನೇಹಿತ-ಸ್ನೇಹಿತೆಯರು ಆ ಕಾರಣಕ್ಕಾಗಿ ಅವರನ್ನು unfriend ಮಾಡಬಹುದು.

ಆದರೆ, ತಮ್ಮದೇ ಪಕ್ಷದ, ತಮ್ಮದೇ ವಯಸ್ಸಿನ, ಶಶಿ ತರ್ರ‍ೂ ಕಂಪನಿ ಸಿಗುತ್ತದೆ. ಶಶಿ ಲಲನೆಯರ ಸಾಂಗತ್ಯವನ್ನಷ್ಟೇ  ಅಪೇಕ್ಷಿಸು ತ್ತಾರೆ ಎಂದು ದೂರಬಾರದು, ನೋಡಿ. ಫೇಸ್‌ಬುಕ್‌ನ ಸ್ನೇಹಬೇಡಿರಿ. ಪರಿವರ್ತಿತರಾದ ನಿಮ್ಮ ಕೋರಿಕೆಯನ್ನು ಅವರು ತೆಗೆದು ಹಾಕಲಾರರು.

error: Content is protected !!