Friday, 13th December 2024

ಬೋನಿನ್ ದ್ವೀಪಗಳಲ್ಲಿ 6.5 ತೀವ್ರತೆಯ ಭೂಕಂಪ

ಟೊಕಿಯೋ: ಜಪಾನ್‌ನ ಬೋನಿನ್ ದ್ವೀಪಗಳಲ್ಲಿ 6.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಶನಿವಾರ ವರದಿ ಮಾಡಿದೆ.

ಭೂಕಂಪವು 503.2 ಕಿ.ಮೀ (312.7 ಮೈಲಿ) ಆಳದಲ್ಲಿ ಸಂಭವಿಸಿದೆ. ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಯಾವುದೇ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ ಎಂದು ಯುಎಸ್ ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರ ದೃಢಪಡಿಸಿದೆ.