ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಬಿಳಿ ಸಾಕ್ಸ್‌ ಸ್ವಚ್ಛತೆ ನಿಜವಾ?

ಪಾನ್ ಎಷ್ಟು ಶುದ್ಧವಾಗಿದೆಯೆಂದರೆ, ನೀವು ಬಿಳಿ ಸಾಕ್ಸ್‌ ಧರಿಸಿ ನಡೆದಾಡಿದರೂ ಅದು ಕೊಳೆಯಾಗುವು ದಿಲ್ಲ ಎಂಬ ಮಾತನ್ನು ಅಕ್ಷರಶಃ ಅರ್ಥೈಸು ವುದಕ್ಕೆ ಬದಲಾಗಿ, ಆ ದೇಶದ ಸಾರ್ವಜನಿಕ ಸ್ಥಳಗಳ ಪರಿಪಾಲನೆ, ನಿತ್ಯ ತೊಳೆದಂತೆ ತೋರಿಸುವ ರಸ್ತೆಗಳಿಗೆ ಪ್ರತಿನಿಧಿಯಾಗಿರುವ ಶ್ಲೇಷೆ ಎಂದು ಭಾವಿಸಿದರೆ ಅದು ಹೆಚ್ಚು ಸಮರ್ಪಕ ವಾದೀತು.

ಬಿಳಿ ಸಾಕ್ಸ್‌ ಸ್ವಚ್ಛತೆ ನಿಜವಾ?

ಸಂಪಾದಕರ ಸದ್ಯಶೋಧನೆ

ಜಪಾನಿನ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸುದ್ದಿ ವೈರಲ್ ಆಗಿ ಗಮನ ಸೆಳೆಯುತ್ತದೆ. ಅದೇನೆಂದರೆ, ಜಪಾನಿನಲ್ಲಿ ನೀವು ಬಿಳಿ ಕಾಲುಚೀಲ (ಸಾಕ್ಸ್‌) ಹಾಕಿಕೊಂಡು ನಡೆದರೆ, ಅವು ಸ್ವಲ್ಪವೂ ಕೊಳೆಯಾಗದೇ, ಧರಿಸಿದಾಗ ಹೇಗಿರುವುದೋ ಹಾಗೆಯೇ ಸ್ವಚ್ಛವಾಗಿ ಇರುತ್ತವೆ ಎಂಬ ಮಾತು. ಹಾಗೆ ನೋಡಿದರೆ, ಈ ಮಾತು ಅಥವಾ ನಂಬಿಕೆ ಸಾಕಷ್ಟು ಜನಪ್ರಿಯ ವಾಗಿದೆ. ಇದು ಕೆಲವೊಮ್ಮೆ ಹಾಸ್ಯದಲ್ಲಿ, ಕೆಲವೊಮ್ಮೆ ಅಚ್ಚರಿಯ ಭಾಷ್ಯದಲ್ಲಿ ಹಾಗೂ ಕೆಲವೊಮ್ಮೆ ಜಪಾನಿನ ಸ್ವಚ್ಛತೆಯನ್ನು ಕೊಂಡಾಡುವ ರೀತಿಯಲ್ಲೂ ಬಳಕೆಯಾಗುತ್ತದೆ. ಆದರೆ ಈ ಮಾತು ಎಷ್ಟು ಸತ್ಯ? ಅಥವಾ ಇದು ಅತಿರಂಜಿತವೇ? ಈ ಮಾತನ್ನು ಮೂಲತಃ ಜಪಾನಿನ ನಗರಗಳ ಸ್ವಚ್ಛತೆಗೆ ಸಾಕ್ಷ್ಯ ಎಂಬಂತೆ ಬಳಸಲಾಗುತ್ತದೆ.

ನೀವು ರಸ್ತೆಗಳ ಮೇಲೆ ತ್ಯಾಜ್ಯ, ಪ್ಲಾಸ್ಟಿಕ್ ಚೀಲಗಳು, ಸೇದಿಬಿಟ್ಟ ಸಿಗರೇಟ್ ತುಂಡು, ಚಿಪ್ಸ್ ಪ್ಯಾಕೆಟ್, ತರಕಾರಿ ತ್ಯಾಜ್ಯ ಇತ್ಯಾದಿಗಳನ್ನು ನೋಡಲು ಸಾಧ್ಯವೇ ಇಲ್ಲ ಅಥವಾ ತೀರಾ ಅಂದ್ರೆ ತೀರಾ ಕಡಿಮೆ ಸಂಖ್ಯೆಯಲ್ಲಿ ನೋಡಬಹುದು. ಬಹುತೇಕ ರಸ್ತೆಗಳು ನಿರಂತರ ಸ್ವಚ್ಛವಾಗಿರುತ್ತವೆ. ಹೀಗಾಗಿ ಕೆಲವರು, ಇಲ್ಲಿ ಬಿಳಿ ಸಾಕ್ಸ್‌ ಹಾಕಿಕೊಂಡು ನಡೆದರೂ ಅವು ಕೊಳಕಾಗದು ಎಂದು ಹೇಳುವುದುಂಟು. ‌

ಇದನ್ನೂ ಓದಿ: Vishweshwar Bhat Column: ಉಡುಗೊರೆ ಸಂಸ್ಕೃತಿ

ಇದು ನಿಜಕ್ಕೂ ಒಂದು ಶ್ಲೇಷೆಯ ಅಥವಾ ಅತಿಶಯೋಕ್ತಿಯೆನಿಸುವ ಉದಾಹರಣೆ ಇದ್ದಿರಬಹುದು. ಆದರೆ ಈ ಮಾತು ನೂರಕ್ಕೆ ನೂರು ಸತ್ಯವಿರಲಿಕ್ಕಿಲ್ಲ. ಜಪಾನಿಯರು ಸ್ವಚ್ಛತೆಯ ಪಥವನ್ನು ಆರಂಭದಲ್ಲಿಯೇ ಮನೆಯಿಂದ ಶುರುವಾಗಿ ಶಾಲೆಯವರೆಗೆ ಶಿಕ್ಷಣ ಹಂತದಲ್ಲಿಯೇ ಪಡೆಯುತ್ತಾರೆ. ಮಕ್ಕಳಿಗೆ ‘ಶುಚಿತ್ವ’ ಒಂದು ವೈಯಕ್ತಿಕ ಹೊಣೆಗಾರಿಕೆ ಎಂಬುದನ್ನು ಬೋಧಿಸಲಾಗುತ್ತದೆ. ಶಾಲೆಗಳಲ್ಲಿ ಮಕ್ಕಳೇ ಕ್ಲಾಸ್‌ರೂಮ್ ತೊಳೆಯಬೇಕು, ಆಹಾರ ಸೇವಿಸಿದ ನಂತರ ತಮ್ಮ ಪಾತ್ರೆ ಗಳನ್ನು ಸ್ವಚ್ಛಗೊಳಿಸಬೇಕು.

ಜಪಾನಿನಲ್ಲಿ ರಸ್ತೆ ಮೇಲೆ ತ್ಯಾಜ್ಯ ಎಸೆಯುವುದು ಕಾನೂನಿಗೆ ವಿರುದ್ಧವಾಗಿದೆ. ಎಸೆದರೆ ದಂಡ ಗ್ಯಾರಂಟಿ. ಜತೆಗೆ ನಗರಾಡಳಿತ ಹಾಗೂ ಸ್ಥಳೀಯ ಸಮಿತಿಗಳೂ ರಸ್ತೆಗಳ ಸ್ವಚ್ಛತೆಗೆ ವಿಶೇಷ ಗಮನ ನೀಡುತ್ತವೆ. ಜಗತ್ತಿನ ಬಹುತೇಕ ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯಗಳು ಕೊಳಕುಮಯ ವಾಗಿರುತ್ತವೆ. ಆದರೆ ಜಪಾನಿನಲ್ಲಿ ಅಂಥ ಶೌಚಾಲಯಗಳನ್ನು ಎಲ್ಲಿಯೂ ನೋಡಲು ಸಾಧ್ಯವಿಲ್ಲ.

ಜಪಾನಿನಲ್ಲಿ ಸಾಕಷ್ಟು ಕಡೆಗಳಲ್ಲಿ ಕಸದ ಬುಟ್ಟಿಗಳೇ ಇರುವುದಿಲ್ಲ. ಜನರು ತ್ಯಾಜ್ಯವನ್ನು ತಮ್ಮ ಮನೆಯವರೆಗೆ ಎತ್ತಿಕೊಂಡು ಹೋಗುತ್ತಾರೆ. ಕೆಲವು ಸಲ ತಮ್ಮ ಪ್ಯಾಕೆಟ್‌ನಲ್ಲಿ ಇಟ್ಟುಕೊಂಡಿರು ತ್ತಾರೆ. ಹಾಗಾದರೆ ಬಿಳಿ ಸಾಕ್ಸ್‌ ಸ್ವಚ್ಛ ಇರುತ್ತವೆ ಎನ್ನುವುದು ಎಷ್ಟು ನಿಜ? ಈ ಪ್ರಶ್ನೆಯು ಸ್ವತಃ ವ್ಯಕ್ತಿಯ ನಡವಳಿಕೆ, ಪರಿಸ್ಥಿತಿ ಮತ್ತು ನಿರ್ದಿಷ್ಟ ಸ್ಥಳ (ಲೊಕೇಶನ್)ವನ್ನು ಅವಲಂಬಿಸಿದೆ.

ಯಾವುದೇ ನಗರ ಎಷ್ಟೇ ಸ್ವಚ್ಛವಾಗಿದ್ದರೂ ಅಲ್ಲಿ ನಡೆದಾಡಿದ ಬಳಿಕ ಧರಿಸಿದ ಸಾಕ್ಸ್‌ ಸ್ವಚ್ಛ ವಾಗಿರುವುದು ಸಾಧ್ಯವಿಲ್ಲ ಎಂಬುದು ಜನಪ್ರಿಯ ನಂಬಿಕೆ. ಜಪಾನಿನಲ್ಲಿ ಕೆಲವು ಕಡೆಗಳಲ್ಲಿ ನಡೆದರೆ ಬಿಳಿ ಸಾಕ್ಸ್‌ ಧರಿಸಿದಂತೆಯೇ ಇರುವುದರಲ್ಲಿ ಅತಿಶಯೋಕ್ತಿಯೇನಿಲ್ಲ. ಆದರೆ ಈ ಮಾತು ಎಲ್ಲ ಪ್ರದೇಶಗಳಿಗೂ ಅನ್ವಯಿಸುವುದಿಲ್ಲ. ಜಪಾನ್ ಎಷ್ಟು ಶುದ್ಧವಾಗಿದೆಯೆಂದರೆ, ನೀವು ಬಿಳಿ ಸಾಕ್ಸ್‌ ಧರಿಸಿ ನಡೆದಾಡಿದರೂ ಅದು ಕೊಳೆಯಾಗುವುದಿಲ್ಲ ಎಂಬ ಮಾತನ್ನು ಅಕ್ಷರಶಃ ಅರ್ಥೈಸು ವುದಕ್ಕೆ ಬದಲಾಗಿ, ಆ ದೇಶದ ಸಾರ್ವಜನಿಕ ಸ್ಥಳಗಳ ಪರಿಪಾಲನೆ, ನಿತ್ಯ ತೊಳೆದಂತೆ ತೋರಿಸುವ ರಸ್ತೆಗಳಿಗೆ ಪ್ರತಿನಿಧಿಯಾಗಿರುವ ಶ್ಲೇಷೆ ಎಂದು ಭಾವಿಸಿದರೆ ಅದು ಹೆಚ್ಚು ಸಮರ್ಪಕ ವಾದೀತು.

ಟೋಕಿಯೋ, ಒಸಾಕಾ, ಕ್ಯೋಟೋ ಮೊದಲಾದ ನಗರಗಳಲ್ಲಿ ಪಾದಚಾರಿ ಮಾರ್ಗಗಳು ನಿಜಕ್ಕೂ ಸ್ವಚ್ಛವಾಗಿರುತ್ತವೆ. ಪಾದಚಾರಿ ಮೇಲ್ಮೈ ಸಾಮಾನ್ಯವಾಗಿ ಪ್ಲಾಸ್ಟಿಕ್ ಟೈಲ್ಸನಿಂದ ಕೂಡಿರುತ್ತದೆ. ಅಲ್ಲಿ ನಡೆದರೆ ಸಾಕ್ಸ್‌ ಸ್ವಚ್ಛವಾಗಿರುತ್ತದೆ. ಅನೇಕರಿಗೆ ಜಪಾನ್ ಅಂದರೆ ಸ್ವಚ್ಛತೆ, ಶಿಸ್ತಿನ ಸಂಕೇತವಾಗಿ ಕಾಣುತ್ತದೆ.

ತಮ್ಮ ಈ ಮಾತಿನ ಮರ್ಮವನ್ನು ಬಣ್ಣಿಸಿ ಹೇಳುವಾಗ ಬಿಳಿ ಸಾಕ್ಸ್‌ ನಿದರ್ಶನ ತಕ್ಷಣ ನೆರವಿಗೆ ಬರಬಹುದು. ಬಿಳಿ ಸಾP ಉದಾಹರಣೆ ಸುಲಭವಾಗಿ ನಂಬಿಸಬಹುದಾದ ನಯವಾದ ಶ್ಲೇಷೆ ಎಂಬುದು ಅನೇಕರ ಅಭಿಮತ. ಜಪಾನಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆಗೆ ಮಾರು ಹೋದವರು ಹಬ್ಬಿಸಿದ ಮತ್ತು ನಂಬಿಸಿದ ಒಂದು ಸುಂದರ ಕಲ್ಪನೆ ಇದು ಎಂದೂ ಹೇಳುವವರಿದ್ದಾರೆ.