ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಪೃಥ್ವಿ ಶಾಗೆ ನಿರಾಶೆ! ರೋಹಿತ್‌ ಶರ್ಮಾ ಶಿಷ್ಯನಿಗೆ ಮಣೆ ಹಾಕಿದ ಚೆನ್ನೈ ಸೂಪರ್‌ ಕಿಂಗ್ಸ್‌!

CSK Sign Ayush Mhatre?: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಮಹತ್ವದ ಬೆಳೆವಣಿಗೆಯೊಂದು ನಡೆಯುತ್ತಿದೆ. ಸಿಎಸ್‌ಕೆ ನಾಯಕ ಋತುರಾಜ್‌ ಗಾಯಕ್ವಾಡ್‌ ಅವರು ಮೊಣಕೈ ಗಾಯದಿಂದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಇದೀಗ ಇವರ ಸ್ಥಾನಕ್ಕೆ ಮುಂಬೈ ಯುವ ಬ್ಯಾಟ್ಸ್‌ಮನ್‌ ಆಯುಷ್‌ ಮ್ಹಾತ್ರೆ ಸೇರ್ಪಡೆಯಾಗಲಿದ್ದಾರೆಂದು ವರದಿಯಾಗಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೇರಲು ಸಜ್ಜಾಗುತ್ತಿರುವ ಆಯುಷ್‌ ಮ್ಹಾತ್ರೆ!

ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಲಿರುವ ಆಯುಷ್‌ ಮ್ಹಾತ್ರೆ.

Profile Ramesh Kote Apr 14, 2025 7:03 PM

ಚೆನ್ನೈ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ಪ್ರದರ್ಶನ ಅತ್ಯಂತ ಹೀನಾಯವಾಗಿದೆ. ಇದರ ನಡುವೆ ಕಳೆದ ವಾರ ಸಿಎಸ್‌ಕೆ ನಾಯಕ ಋತುರಾಜ್‌ ಗಾಯಕ್ವಾಡ್‌ (Ruturaj Gaikwad) ಅವರು ಟೂರ್ನಿಯ ಇನ್ನುಳಿದ ಭಾಗದಿಂದ ಹೊರ ನಡೆದಿದ್ದಾರೆ. ಆ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಭಾರಿ ಹಿನ್ನಡೆ ಅನುಭವಿಸಿದೆ. ಗಾಯಕ್ವಾಡ್‌ ಇಲ್ಲದ ಕಾರಣ ಈ ಟೂರ್ನಿಯ ಇನ್ನುಳಿದ ಭಾಗದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎಂಎಸ್‌ ಧೋನಿ ಮುನ್ನಡೆಸಲಿದ್ದಾರೆ. ಅಂದ ಹಾಗೆ ಗಾಯಕ್ವಾಡ್‌ ಅವರ ಸ್ಥಾನಕ್ಕೆ ಹೊಸ ಆಟಗಾರನನ್ನು ಕರೆತರಲು ಚೆನ್ನೈ ಫ್ರಾಂಚೈಸಿ ಎದುರು ನೋಡುತ್ತಿದೆ. ಅದರಂತೆ ಮುಂಬೈನ ಯುವ ಬ್ಯಾಟ್ಸ್‌ಮನ್‌ ಆಯುಷ್‌ ಮ್ಹಾತ್ರೆ ಸಿಎಸ್‌ಕೆ ಸೇರ್ಪಡೆಯಾಗಲಿದ್ದಾರೆಂದು ವರದಿಯಾಗಿದೆ.

2025ರ ಐಪಿಎಲ್‌ ಟೂರ್ನಿಯ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್‌ ಆಗಿದ್ದ ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಿಸಿಕೊಳ್ಳಬಹುದೆಂದು ಕಳೆದ ವಾರ ವರದಿಯಾಗಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳನ್ನು ಆಧರಿಸಿ ಕ್ರಿಕ್‌ಬಝ್‌ ಸಿಎಸ್‌ಕೆ ತಂಡದಲ್ಲಿನ ಮಹತ್ವದ ಬೆಳವಣಿಗೆಗಳನ್ನು ವರದಿ ಮಾಡಿದೆ. ಮುಂಬೈನ ಯುವ ಬ್ಯಾಟ್ಸ್‌ಮನ್‌ ಆಯುಷ್‌ ಮ್ಹಾತ್ರೆಗೆ ಅವಕಾಶ ನೀಡಿದೆ ಎಂದು ಕ್ರಿಕ್‌ಬಝ್‌ ವರದಿ ಮಾಡಿದೆ. 2024-25ರ ಸಾಲಿನಲ್ಲಿ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆಯುಷ್‌ ಮ್ಹಾತ್ರೆ, ಮುಂಬೈ ಪರ 7 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 504 ರನ್‌ಗಳನ್ನು ದಾಖಲಿಸಿದ್ದಾರೆ. ಇನ್ನು 7 ಲಿಸ್ಟ್‌ ಎ ಪಂದ್ಯಗಳಿಂದ 4458 ರನ್‌ಗಳನ್ನು ಗಳಿಸಿದ್ದಾರೆ. ಆದರೆ, ದೇಶಿ ಕ್ರಿಕೆಟ್‌ನಲ್ಲಿ ಇನ್ನೂ ಟಿ20 ಪಂದ್ಯವನ್ನು ಆಡಿಲ್ಲ.

CSK vs KKR: ಸೋಲಿನಿಂದ ಹಲವು ಅನಗತ್ಯ ದಾಖಲೆ ಬರೆದ ಚೆನ್ನೈ ಸೂಪರ್‌ ಕಿಂಗ್ಸ್‌

ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿರುವ ಸಿಎಸ್‌ಕೆ

ಚೆನ್ನೈ ಸೂಪರ್‌ ಕಿಂಗ್ಸ್‌ ಪ್ರಸಕ್ತ ಐಪಿಎಲ್‌ ಟೂರ್ನಿಯಲ್ಲಿ ಆಡಿದ 6 ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು, ಇನ್ನುಳಿದ ಐದರಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲಿ ಐದು ಬಾರಿ ಚಾಂಪಿಯನ್‌ ಕೊನೆಯ ಸ್ಥಾನಕ್ಕೆ ಕುಸಿದಿದೆ. ತನ್ನ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಗೆದ್ದಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌, ನಂತರ ಸತತವಾಗಿ ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.

ಸಿಎಸ್‌ಕೆ ನಾಯಕತ್ವಕ್ಕೆ ಮರಳಿದ ಎಂಎಸ್‌ ಧೋನಿ

ಋತುರಾಜ್‌ ಗಾಯಕ್ವಾಡ್‌ ಅವರು 2025ರ ಐಪಿಎಲ್‌ ಟೂರ್ನಿಯ ಇನ್ನುಳಿದ ಭಾಗದಿಂದ ಹೊರ ನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಎಂಎಸ್‌ ಧೋನಿ 683 ದಿನಗಳ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕತ್ವಕ್ಕೆ ಮರಳಿದ್ದಾರೆ. ಗಾಯಕ್ವಾಡ್‌ ನಾಯಕತ್ವದಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಸೋತಿದ್ದ ಸಿಎಸ್‌ಕೆ, ಧೋನಿ ನಾಯಕತ್ವದಲ್ಲಿ ಕಳೆದ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ದ ಸೋಲು ಅನುಭವಿಸಿತ್ತು.‌

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕತ್ವಕ್ಕೆ ಮರಳಿದ ಎಂಎಸ್‌ ಧೋನಿ! ಋತುರಾಜ್‌ ಗಾಯಕ್ವಾಡ್‌ ಔಟ್‌

ಚೆನ್ನೈಗೆ ಮುಂದಿನ ಎದುರಾಳಿ ಲಖನೌ

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಸದ್ಯ ಲಖನೌದಲ್ಲಿದೆ. ಏಪ್ರಿಲ್‌ 14 ರಂದು ರಿಷಭ್‌ ಪಂತ್‌ ನಾಯಕತ್ವದ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ ತನ್ನ ಮುಂದಿನ ಪಂದ್ಯವನ್ನು ಆಡಲಿದೆ. ಎಲ್‌ಎಸ್‌ಜಿ ತಂಡ ಇಲ್ಲಿಯ ತನಕ ಆಡಿದ 6 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಪಡೆದು ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಒಂದು ಸೋಮವಾರ ಸಿಎಸ್‌ಕೆ ವಿರುದ್ಧ ಗೆದ್ದರೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಲಿದೆ.