ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಉಡುಗೊರೆ ಸಂಸ್ಕೃತಿ

ಜಪಾನಿಯರಿಗೆ ಉಡುಗೊರೆ ಕೊಡಲು ಅಥವಾ ಸ್ವೀಕರಿಸಲು ಯಾವ ನೆಪವೂ ಬೇಕಿಲ್ಲ. ಎರಡು ತಿಂಗಳಿಗೊಮ್ಮೆ ಏನಾದರೂ ಒಂದು ನೆಪ ಹುಡುಕಿಕೊಂಡು ಗಿಫ್ಟ್ ವಿನಿಮಯ ಮಾಡಿಕೊಳ್ಳು ತ್ತಾರೆ. ಜಪಾನಿನಲ್ಲಿ ಹಲವಾರು ಸಂದರ್ಭಗಳಲ್ಲಿ ಉಡುಗೊರೆ ನೀಡುವ ಪರಿಪಾಠ ಇದೆ. ವರ್ಷದ ಮಧ್ಯದಲ್ಲಿ ಅಂದರೆ ಜುಲೈನಲ್ಲಿ ಉಡುಗೊರೆ ಕೊಡುವ ಸಂಪ್ರ‌ ದಾಯಕ್ಕೆ ‘ಒಚುಗೆ’ ಎಂದು ಅವರು ಕರೆಯುತ್ತಾರೆ.

ಉಡುಗೊರೆ ಸಂಸ್ಕೃತಿ

ಸಂಪಾದಕರ ಸದ್ಯಶೋಧನೆ

ಉಡುಗೊರೆ (ಗಿಫ್ಟ್) ಅಂದರೆ ಯಾರಿಗೆ ಇಷ್ಟವಿಲ್ಲ? ಈ ವಿಷಯದಲ್ಲಿ ಜಪಾನಿಯರು ಎಲ್ಲರನ್ನೂ ಮೀರಿಸುವವರು. ಉಡುಗೊರೆ ಕೊಡುವುದು ಮತ್ತು ಸ್ವೀಕರಿಸುವುದೆಂದರೆ ಅವರಿಗೆ ಬಹಳ ಇಷ್ಟ. ಅದಕ್ಕಿಂತ ಮುಖ್ಯವಾಗಿ, ಉಡುಗೊರೆ ಕೊಡುವುದು ಮತ್ತು ಸ್ವೀಕರಿ ಸುವುದು ಅವರ ಜೀವನದಲ್ಲಿ ಒಂದು ಸಂಸ್ಕೃತಿಯಾಗಿ ರೂಪುಗೊಂಡಿದೆ. ‘ಗಿಫ್ಟ್ ಗಿವಿಂಗ್ ಕಲ್ಚರ್’ ಅವರ ಜೀವನದಲ್ಲಿ ಆಳವಾಗಿ ಬೇರೂರಿದೆ. ಇದು ಶುದ್ಧವಾಗಿ ಒಬ್ಬ ವ್ಯಕ್ತಿಯ ಮೇಲಿರುವ ಗೌರವ, ಕೃತಜ್ಞತೆ, ಸ್ನೇಹ ಅಥವಾ ಸಹಕಾರದ ಸಂಕೇತವಾಗಿರುತ್ತದೆ. ಈ ಸಂಸ್ಕೃತಿಯಲ್ಲಿ ಉಡುಗೊರೆ ನೀಡುವುದು ಕೇವಲ ಭಾವನಾತ್ಮಕವಲ್ಲ, ಆದರೆ ಇದು ಸಮಾಜದಲ್ಲಿ ಸ್ನೇಹ, ಸಂಬಂಧ ಮತ್ತು ಬಾಂಧವ್ಯಗಳನ್ನು ಉಳಿಸಿ ಬೆಳೆಸುವ ಒಂದು ಅನನ್ಯ ಮೌಲ್ಯ ಎಂದು ಪರಿಗಣಿತವಾಗಿದೆ.

ಜಪಾನಿಯರಿಗೆ ಉಡುಗೊರೆ ಕೊಡಲು ಅಥವಾ ಸ್ವೀಕರಿಸಲು ಯಾವ ನೆಪವೂ ಬೇಕಿಲ್ಲ. ಎರಡು ತಿಂಗಳಿಗೊಮ್ಮೆ ಏನಾದರೂ ಒಂದು ನೆಪ ಹುಡುಕಿಕೊಂಡು ಗಿಫ್ಟ್ ವಿನಿಮಯ ಮಾಡಿಕೊಳ್ಳುತ್ತಾರೆ. ಜಪಾನಿನಲ್ಲಿ ಹಲವಾರು ಸಂದರ್ಭಗಳಲ್ಲಿ ಉಡುಗೊರೆ ನೀಡುವ ಪರಿಪಾಠ ಇದೆ. ವರ್ಷದ ಮಧ್ಯದಲ್ಲಿ ಅಂದರೆ ಜುಲೈನಲ್ಲಿ ಉಡುಗೊರೆ ಕೊಡುವ ಸಂಪ್ರ‌ ದಾಯಕ್ಕೆ ‘ಒಚುಗೆ’ ಎಂದು ಅವರು ಕರೆಯುತ್ತಾರೆ.

ಇದನ್ನೂ ಓದಿ: Vishweshwar Bhat Column: ಗಂಡನನ್ನು ಹೇಗೆ ಕರೆಯುವುದು ?

ಇದನ್ನು ಕುಟುಂಬ, ಸ್ನೇಹಿತರು, ಆಫೀಸಿನಲ್ಲಿ ಸಹೋದ್ಯೋಗಿಗಳು ಅಥವಾ ಗುರುಗಳಿಗೆ ನೀಡಲಾಗುತ್ತದೆ. ಡಿಸೆಂಬರ್ ಅಂತ್ಯದಲ್ಲಿ ವರ್ಷದ ಕೊನೆಯಲ್ಲಿ ನೀಡಲೆಂದು ‘ಒಸೇಬೊ’ ಎಂಬ ಸಂಪ್ರದಾಯವನ್ನು ಆಚರಿಸುತ್ತಾರೆ.

ಇಡೀ ವರ್ಷವನ್ನು ಸಂತೋಷದಿಂದ ಕಳೆದಿದ್ದಕ್ಕೆ ಕೃತಜ್ಞತೆಯ ಸೂಚಕವಾಗಿ ಇದನ್ನು ನೀಡಲಾಗುತ್ತದೆ. ಹೊಸ ವರ್ಷದ ಅಂತ್ಯಕ್ಕೆ ಉಡುಗೊರೆ ಕೊಟ್ಟ ಮೇಲೆ, ಹೊಸ ವರ್ಷದ ಆರಂಭಕ್ಕೂ ಗಿಫ್ಟ್ ಕೊಡಲೇಬೇಕಲ್ಲ? ಯಾರದ್ದಾದರೂ ಮನೆಗೆ ಆಹ್ವಾನಿತರಾಗಿ ಹೋದರೆ, ಖಾಲಿ ಕೈಯಲ್ಲಿ ಯಾರೂ ಹೋಗುವುದಿಲ್ಲ. ಆ ಮನೆಯನ್ನು ಅಲಂಕರಿಸುವ, ಗಮನ ಸೆಳೆಯುವ ಉಡುಗೊರೆಯನ್ನು ತೆಗೆದುಕೊಂಡು ಹೋಗುತ್ತಾರೆ.

ಪ್ರವಾಸದಿಂದ ಮರಳುವಾಗಂತೂ ಮನೆ-ಮಂದಿಗೆ ಮತ್ತು ಆಫೀಸಿನ ಸಹೋದ್ಯೋಗಿಗಳಿಗೆ ಉಡುಗೊರೆಯನ್ನು ತೆಗೆದುಕೊಂಡು ಹೋಗಲೇಬೇಕು. ಇನ್ನು ಹುಟ್ಟುಹಬ್ಬ, ಮದುವೆ, ಪುಣ್ಯತಿಥಿ, ವಾರ್ಷಿತೋತ್ಸವ.. ಹೀಗೆ ಎಲ್ಲ ಸಂದರ್ಭಗಳೂ ಉಡುಗೊರೆ ಕೊಡುವ-ಸ್ವೀಕರಿ ಸುವ ಸಂದರ್ಭಗಳೇ. ಉಡುಗೊರೆ ಯಾವುದು ಎಂಬುದಕ್ಕಿಂತ, ಅದನ್ನು ಹೇಗೆ ಕೊಡಲಾಗು ತ್ತಿದೆ ಎಂಬುದಕ್ಕೆ ಜಪಾನಿಯರು ಹೆಚ್ಚು ಮಹತ್ವ ನೀಡುತ್ತಾರೆ.

ಬೇಕಾಬಿಟ್ಟಿ ಪ್ಯಾಕಿಂಗ್ ಮಾಡುವುದಿಲ್ಲ. ಆಕರ್ಷಕವಾದ ಕಾಗದ, ರಿಬ್ಬನ್ ಅಥವಾ ಫುರೊಶಿಕಿ (traditional wrapping cloth) ಬಟ್ಟೆ ಬಳಸಿ ಪ್ಯಾಕ್ ಮಾಡಬೇಕು. ಕೆಲವು ಸಲ ಉಡುಗೊರೆ ಸ್ವೀಕರಿಸುತ್ತಿದ್ದಂತೆ ಪ್ರತಿಯಾಗಿ ಉಡುಗೊರೆ ನೀಡುವುದೂ ಉಂಟು. ಯಾರು ಒಳ್ಳೆಯ ಉಡುಗೊರೆ ನೀಡುತ್ತಾರೆ ಎಂಬ ಬಗ್ಗೆ ಪೈಪೋಟಿ ನಡೆಯುವು ದುಂಟು.

ಉದಾಹರಣೆಗೆ, ಸಹೋದ್ಯೋಗಿಗಳಿಂದ ಅಥವಾ ಹಿರಿಯರಿಂದ ಬಂದ ಉಡುಗೊರೆಗೆ ಪ್ರತಿ ಯಾಗಿ, ಅದೇ ಮಟ್ಟದ ಅಥವಾ ಸ್ವಲ್ಪ ಹೆಚ್ಚಿನ ಮೌಲ್ಯದ ಉಡುಗೊರೆಯನ್ನು ಕೊಡು ವುದೂ ಉಂಟು. ಇದು ಋಣಭಾರವನ್ನು ಅಲ್ಲಿಯೇ ತೀರಿಸುವ ವಿಧಾನ.

ಸಾಮಾನ್ಯವಾಗಿ ಯಾರೇ ಉಡುಗೊರೆ ನೀಡಿದರೂ ಅದನ್ನು ನಿರಾಕರಿಸುವುದಿಲ್ಲ. ಹಾಗೆ ನಿರಾಕರಿಸುವುದು ಒರಟು ಅಥವಾ ಅಸೌಜನ್ಯದ ವರ್ತನೆ ಎಂದು ಎನಿಸಿಕೊಳ್ಳುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ, ಆನ್‌ಲೈನ್ ಭರಾಟೆಯಿಂದಾಗಿ ಉಡುಗೊರೆ ನೀಡುವ ಸಂಸ್ಕೃತಿಯಲ್ಲಿ ಕೆಲವು ಸೌಕರ್ಯಮಯ ಬದಲಾವಣೆಗಳು ಬಂದಿವೆ. ಒಂದಂತೂ ನಿಜ, ಜಪಾನಿಯರು ಉಡುಗೊರೆ ಕೊಡುವುದರಲ್ಲಿ-ಸ್ವೀಕರಿಸುವುದರಲ್ಲಿ ನಿಸ್ಸೀಮರು.

ಉಡುಗೊರೆ ಖರೀದಿಸುವುದು ಅವರಿಗೆ ಕಷ್ಟವಲ್ಲ. ಆದರೆ ಉಡುಗೊರೆ ಯಾವತ್ತೂ ನೀಡುವ ಸಂತೋಷವನ್ನು ಬಣ್ಣಿಸಲು ಸಾಧ್ಯವಿಲ್ಲ. ದೈನಂದಿನ ಜೀವನದಲ್ಲಿ ಸಣ್ಣ ಸಣ್ಣ ಕಾರಣಕ್ಕೂ ಬದುಕಿನ ಕ್ಷಣಗಳನ್ನು ಆನಂದಿಸುವುದು ಈ ಸಂಸ್ಕೃತಿಯ ಹಿಂದಿರುವ ಆಶಯ.