ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಮಾತಿಗಿರುವ ಮಹತ್ವವನ್ನು ಅರಿಯೋಣ

ಮರುದಿನ ಅದನ್ನು ಪಳಗಿಸಲೆಂದು ಬಂದ ಮತ್ತೊಬ್ಬ ಮಾವುತನನ್ನೂ ಅದು ಸಿಟ್ಟಿನಿಂದ ತುಳಿದು ಬಿಟ್ಟಿತು. ಅದರ ಹತ್ತಿರ ಹೋಗುವುದು ಸಾವಿನ ಬಳಿ ಹೋದಂತೆ ಎಂದು ಭಾವಿಸಿ ಎಲ್ಲರೂ ದೂರ ಉಳಿಯುವಂತಾಯಿತು. ಕೊನೆಗೆ ಹೇಗೋ ಎಲ್ಲರೂ ಸೇರಿ ಕಷ್ಟ ಪಟ್ಟು ಅದನ್ನು ಸರಪಳಿಗಳಿಂದ ಕಟ್ಟಿ ಗಜಶಾಲೆಯಲ್ಲಿ ಬಂಧಿಸಿಟ್ಟರು

Roopa Gururaj Column: ಮಾತಿಗಿರುವ ಮಹತ್ವವನ್ನು ಅರಿಯೋಣ

ಒಂದೊಳ್ಳೆ ಮಾತು

ಬಹಳ ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತನೆಂಬ ರಾಜನಿದ್ದ, ಆಗ ಅವನಿಗೆ ಬೋಧಿಸತ್ವ ಪ್ರಧಾನ ಮಂತ್ರಿಯಾಗಿದ್ದ. ಬ್ರಹ್ಮದತ್ತನ ಬಹಳ ಪ್ರೀತಿಯ ಪಟ್ಟದ ಆನೆ ಮಾಂಗಲೀಕ. ಅದು ಸದಾಚಾರದ ಆನೆಯಾಗಿತ್ತು, ಯಾರಿಗೂ ಯಾವ ತೊಂದರೆಯನ್ನೂ ಕೊಡುತ್ತಿರಲಿಲ್ಲ. ಹೀಗಿದ್ದ ಆ ಶಾಂತ ಸ್ವಭಾ ವದ ಆನೆ, ಒಂದು ಸಲ ಇದ್ದಕ್ಕಿದ್ದಂತೆ ಕೋಪದಿಂದ ಕ್ರೂರತನದಿಂದ ನಡೆದುಕೊಳ್ಳ ತೊಡಗಿತು. ಪ್ರತಿದಿನ ಅದನ್ನು ನೋಡಿಕೊಳ್ಳುತ್ತಿದ್ದ ಮಾವುತ ಸಮಾಧಾನಪಡಿಸಲೆಂದು ಅದರ ಹತ್ತಿರ ಬಂದಾ ಗ, ಅದು ಅವನನ್ನು ತನ್ನ ಸೊಂಡಿಲಿನಿಂದ ಮೇಲಕ್ಕೆತ್ತಿ ನೆಲಕ್ಕೆ ಅಪ್ಪಳಿಸಿತು. ಅವನು ಅ ಸತ್ತು ಬಿದ್ದ. ಇದರಿಂದ ಎಲ್ಲರಿಗೂ ಭಯವಾಗತೊಡಗಿತು. ಆನೆಯ ಈ ರೀತಿಯ ವರ್ತನೆಯನ್ನು ಯಾರೂ ಎಂದೂ ನೋಡೇ ಇರಲಿಲ್ಲ.

ಮರುದಿನ ಅದನ್ನು ಪಳಗಿಸಲೆಂದು ಬಂದ ಮತ್ತೊಬ್ಬ ಮಾವುತನನ್ನೂ ಅದು ಸಿಟ್ಟಿನಿಂದ ತುಳಿದು ಬಿಟ್ಟಿತು. ಅದರ ಹತ್ತಿರ ಹೋಗುವುದು ಸಾವಿನ ಬಳಿ ಹೋದಂತೆ ಎಂದು ಭಾವಿಸಿ ಎಲ್ಲರೂ ದೂರ ಉಳಿಯುವಂತಾಯಿತು. ಕೊನೆಗೆ ಹೇಗೋ ಎಲ್ಲರೂ ಸೇರಿ ಕಷ್ಟ ಪಟ್ಟು ಅದನ್ನು ಸರಪಳಿಗಳಿಂದ ಕಟ್ಟಿ ಗಜಶಾಲೆಯಲ್ಲಿ ಬಂಧಿ ಸಿಟ್ಟರು.

ಇದನ್ನೂ ಓದಿ: Roopa Gururaj Column: ಬೇಸ್ತು ಬಿದ್ದ ವ್ಯಾಪಾರಿ

ಶಾಂತ ಸ್ವಭಾವದ, ಅತ್ಯಂತ ತಿಳಿವಳಿಕೆಯುಳ್ಳ ತನ್ನ ಪ್ರೀತಿಯ ಪಟ್ಟದಾನೆ ಇದ್ದಕ್ಕಿದ್ದಂತೆ ಹೀಗೆ ಉಗ್ರವಾಗಲು ಕಾರಣವೇನು? ಎಂಬುದು ರಾಜ ಬ್ರಹ್ಮದತ್ತನಿಗೆ ಅರ್ಥವಾಗಲಿಲ್ಲ. ತನ್ನ ರಾಜ್ಯ ದಲ್ಲಿದ್ದ ಪಶು ವೈದ್ಯರನ್ನೆ ಕರೆಸಿ ಕೇಳಿ ನೋಡಿದರೂ ಸಮಸ್ಯೆ ಬಗೆಹರಿಯಲಿಲ್ಲ. ಹೀಗಾಗಿ ರಾಜನಿಗೆ ಏನು ಮಾಡಲೂ ತಿಳಿಯದೇ, ತನ್ನ ಮಂತ್ರಿ ಬೋಧಿಸತ್ವನಿಗೆ “ಇದಕ್ಕೆ ಏನಾದರೂ ಒಂದು ಪರಿಹಾರ ವನ್ನು ಹುಡುಕು" ಎಂದು ಹೇಳಿದ.

ಮರುದಿನವೇ ಬೋಧಿಸತ್ವ, ಸರಪಳಿಗಳಿಂದ ಬಂಧಿತವಾದ ಆನೆ ಮಾಂಗಲೀಕನನ್ನು ನೋಡಲು ಹೋದ. ಅದರ ಕಣ್ಣುಗಳು ಕೆಂಪಾಗಿ ಕಿಡಿಗಾರುವಂತೆ ತೋರುತ್ತಿದ್ದವು. ಅದರ ಮುಖದಲ್ಲಿ ಬಹಳ ಕ್ರೌರ್ಯ ಎದ್ದು ಕಾಣುತ್ತಿತ್ತು. ಅದು ಸರಪಳಿಯನ್ನು ಜಗ್ಗಾಡುತ್ತಾ, ಘೋರವಾಗಿಳಿಡುತ್ತಿತ್ತು. ಈ ಆನೆಯ ಗಜಶಾಲೆ ಎಲ್ಲವುದಕ್ಕಿಂತ ಕೊನೆಯಲ್ಲಿತ್ತು. ಅದರ ಹಿಂದೆ ಕಾಡಿನ ಪ್ರದೇಶವಿತ್ತು.

ಬೋಧಿ ಸತ್ವ ಅ ಕಾದು ಕೂತ. ರಾತ್ರಿ ಒಂದು ಹೊತ್ತಿನಲ್ಲಿ ಕೆಲವು ಕಳ್ಳರು ಅಲ್ಲಿಗೆ ಬಂದು, ತಾವು ಕಳ್ಳತನ ಮಾಡಿದ ರೀತಿಯನ್ನೂ, ಜನರನ್ನು ಹೊಡೆದು, ಬಡಿದು, ಹಿಂಸಿಸಿ ದರೋಡೆ ಮಾಡಿದ ರೀತಿಯನ್ನೂ ಪರಸ್ಪರರಿಗೆ ಹೇಳಿ ಕೊಳ್ಳುತ್ತಿದ್ದರು. ಅವರು ಕುಳಿತು ಮಾತನಾಡುತ್ತಿದ್ದ ಜಾಗವು ಮಾಂಗಲೀಕನನ್ನು ಕಟ್ಟಿ ಹಾಕಿದ ಗಜಶಾಲೆಯ ಹಿಂಭಾಗವಾಗಿತ್ತು.

ಕಳ್ಳರು ಮಾತನಾಡುವುದು ಅಲ್ಲಿಗೆ ಕೇಳುತ್ತಿತ್ತು. ಅವರು ಮಾತನಾಡುವುದನ್ನು ನೋಡಿದರೆ ಪ್ರತಿ ದಿನ ಅವರೆ ಲ್ಲರೂ ಅಲ್ಲಿಗೆ ಬಂದು ಸೇರುತ್ತಿರುವ ಹಾಗೆ ಕಾಣಿಸಿತು. ಆನೆ ಅಷ್ಟು ಕ್ರೌರ್ಯದಿಂದ ವರ್ತಿಸುತ್ತಿದ್ದುದು ಯಾಕೆ ಎಂಬು ದರ ಸುಳಿವು ಬೋಧಿಸತ್ವನಿಗೆ ಸಿಕ್ಕಿತು. ಮಾರನೆಯ ದಿನವೇ ಬೋಧಿಸತ್ವ, ಕಳ್ಳರು ಬರುವುದನ್ನು ಕಾದಿದ್ದು ಸೈನಿಕರ ನೆರವಿನಿಂದ ಅವರೆಲ್ಲರನ್ನೂ ಬಂಧಿಸಿದ.

ಮರುದಿನದಿಂದಲೇ ನಾಲ್ಕು ಜನ ಸಾಧು ಸಜ್ಜನರನ್ನು ಕರೆಯಿಸಿ ಅವರಿಂದ “ಹಿಂಸೆ ಕೆಟ್ಟದ್ದು, ಅದ ನ್ನು ಮಾಡಬಾರದು; ಕೋಪದಿಂದ ಅನಾಹುತಗಳು ಆಗುತ್ತವೆ, ಆದಷ್ಟೂ ಎಲ್ಲರೊಂದಿಗೆ ಶಾಂತಿ ಪ್ರೀತಿಯಿಂದ ಇರಬೇಕು" ಎಂಬೆಲ್ಲಾ ಒಳ್ಳೆಯ ವಿಷಯಗಳು ಆನೆಗೆ ಕೇಳಿಸುವಂತೆ ಅಲ್ಲಿ ಪ್ರವಚನ ಮಾಡುವಂತೆ ಕೇಳಿಕೊಂಡ. ಅದನ್ನು ಕೇಳುತ್ತಾ ಹೋದಂತೆ ಪಟ್ಟದಾನೆಯ ಕ್ರೂರ ನಡವಳಿಕೆಯೂ ಬದಲಾಗುತ್ತಾ ಹೋಯಿತು, ಅದು ಮೊದಲಿನಂತೆ ಶಾಂತ ಸ್ವಭಾವಕ್ಕೆ ಹಿಂದಿರುಗಿತು.

ಕಥೆ ಕಾಲ್ಪನಿಕವಾಗಿರಬಹುದು, ಆದರೆ ಅದರ ನೀತಿ ಮಾತ್ರ ನಮ್ಮೆಲ್ಲರಿಗೂ ಸಲ್ಲುವಂಥದ್ದು. ನಾವು ದಿನನಿತ್ಯ ಆಡುವಂಥ ಮಾತುಗಳು, ನಮ್ಮ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮವನ್ನು ಉಂಟುಮಾಡಬಹುದೆಂಬುದನ್ನು ಊಹಿಸಿಕೊಳ್ಳಬಹುದು. ನಮ್ಮ ಮಕ್ಕಳು ಒಳ್ಳೆಯ ಗುಣ ನಡತೆ ಯವರಾಗಬೇಕೆಂದು ನಾವು ಬಯಸಿದರೆ, ನಾವು ಅವರ ಮುಂದೆ ಯಾವಾಗಲೂ ಒಳ್ಳೆಯ ಮಾತು ಗಳನ್ನೇ ಆಡುತ್ತಿರಬೇಕು, ಒಳ್ಳೆಯ ಕೆಲಸವನ್ನೇ ಮಾಡುತ್ತಿರ ಬೇಕು, ಅವರಿಗೆ ಒಳ್ಳೆಯ ನಡವಳಿಕೆ ಯನ್ನು ಕಲಿಸಬೇಕು. ಹಾಗಾದಾಗ ಮಾತ್ರ ಮುಂದೆ ಅವರಿಂದ ನಾವು ಒಳ್ಳೆಯ ದನ್ನು ನಿರೀಕ್ಷಿಸಲು ಸಾಧ್ಯ.