Harish Kera: ನೆಲವ ಮುತ್ತಿಕ್ಕಿದಂತೆ ನಡೆ ಎಂದ ಸಂತ

ಮನೋಮಗ್ನತೆಯನ್ನು ಪ್ರತಿಪಾದಿಸುತ್ತಿದ್ದ ಅವರು ದಿ ಮಿರಾಕಲ್ಸ್ ಆಫ್ ಮೈಂಡ್‌ ಫುಲ್‌ನೆಸ್, ಪೀಸ್ ಈಸ್ ಎವರಿ ಸ್ಟೆ, ಯೂ ಆರ್ ಹಿಯರ್, ಓಲ್ಡ್ ಪಾತ್ ವೈಟ್ ಕ್ಲೌಡ್ಸ್ ಮೊದಲಾದವು ಇವರ ಜನಪ್ರಿಯ ಕೃತಿಗಳು. ಇವರ ಅಪಾರ ಶಿಷ್ಯ ಬಳಗ ಇವರನ್ನು ಪ್ರೀತಿಯಿಂದ ‘ಥಾಯ್’ ಎಂದು ಕರೆಯುತ್ತಿತ್ತು. ವಿಯೆ ಟ್ನಾಮಿ ಭಾಷೆಯಲ್ಲಿ ಥಾಯ್ ಎಂದರೆ ಗುರು

Harish Kera Column 060225
ಹರೀಶ್‌ ಕೇರ ಹರೀಶ್‌ ಕೇರ Feb 6, 2025 7:30 AM

ಕಾಡುದಾರಿ

ಹರೀಶ್‌ ಕೇರ

ಕೆಲವು ಪದಗಳನ್ನು ಅದರ ಸಂಪೂರ್ಣ ಅರ್ಥ ಬರುವಂತೆ ಇನ್ನೊಂದು ಭಾಷೆಗೆ ಅನುವಾದಿಸು ವುದು ಸುಲಭವಲ್ಲ. ಇಂಗ್ಲಿಷ್‌ನ ‘ಮೈಂಡ್ ಫುಲ್‌ನೆಸ್’ ಎನ್ನುವುದು ಅಂಥ ಪದಗಳಂದು. ಭಿತನ್ಮ ಯತೆಭಿ ಎನ್ನಬಹುದು. ಆದರೆ ‘ತತ್’ ಎಂದರೆ ಅದುಭಿ, ಹೀಗಾಗಿ ‘ತನ್ಮಯತೆ’ ಎಂದರೆ ‘ಅದರಲ್ಲಿ ಮಗ್ನವಾಗಿರುವುದು’. ಇಲ್ಲಿ ಮನಸ್ಸಿಗೂ ಕ್ರಿಯೆಗೂ ಹೊರತಾದ ಬೇರೊಂದು ಇರುತ್ತದೆ. ಮನಸ್ಸು ಹಾಗೂ ಕ್ರಿಯೆಗಳು ಅದರಲ್ಲಿ ಮಗ್ನವಾಗಿರುತ್ತದೆ. ಆದರೆ ಮೈಂಡ್ ಫುಲ್‌ನೆಸ್ ಎಂದರೆ ಮನದ ಮನ ಮಗ್ನವಾಗಿರುವುದು. ಹೀಗಾಗಿ ಇದನ್ನು ಮನೋಮಗ್ನತೆ ಎಂದು ಕರೆಯಬಹುದೇನೋ. ಸದ್ಯ ಈ ಮೈಂಡ್ ಫುಲ್‌ನೆಸ್‌ನ ವಿಚಾರ ಮನಸ್ಸಿಗೆ ಬರಲು ಕಾರಣ, ಅದನ್ನು ಬದುಕಿನುದ್ದಕ್ಕೂ ಪ್ರತಿಪಾ ದಿಸುತ್ತಿದ್ದ ವಿಯೆಟ್ನಾಮಿನ ಝೆನ್ ಗುರು ಥಿಚ್ ನ್ಹಾಟ್ ಹ್ಯಾನ್ ಈ ಬೌದ್ಧ ಸಂತ ತಮ್ಮ 95ನೇ ವಯಸ್ಸಿನಲ್ಲಿ ತೀರಿಕೊಂಡು ಈ ವಾರಕ್ಕೆ ಎರಡು ವರ್ಷಗಳಾಗುತ್ತವೆ. ನೂರಕ್ಕೂ ಹೆಚ್ಚು ಪುಸ್ತಕ ಗಳನ್ನು ಬರೆದ ಅದ್ಭುತ ಬರಹಗಾರ, ಚಿಂತಕ, ಕವಿಯಾದ ಈತ ಜಾಗತಿಕ ಶಾಂತಿಯ, ಮನ ಶ್ಶಾಂತಿಯ ಕುರಿತಾಗಿ ನೀಡಿದ ಬೋಧನೆಗಳು ಜಗದ್ವಿಖ್ಯಾತ.

ಇದನ್ನೂ ಓದಿ: Harish Kera Column: ಕವಿತೆಗೆ ಕಾಲುಗಳಿಲ್ಲ, ಆದರೆ ರೆಕ್ಕೆಗಳಿವೆ

ಮನೋಮಗ್ನತೆಯನ್ನು ಪ್ರತಿಪಾದಿಸುತ್ತಿದ್ದ ಅವರು ದಿ ಮಿರಾಕಲ್ಸ್ ಆಫ್ ಮೈಂಡ್‌ ಫುಲ್‌ನೆಸ್, ಪೀಸ್ ಈಸ್ ಎವರಿ ಸ್ಟೆ, ಯೂ ಆರ್ ಹಿಯರ್, ಓಲ್ಡ್ ಪಾತ್ ವೈಟ್ ಕ್ಲೌಡ್ಸ್ ಮೊದಲಾದವು ಇವರ ಜನಪ್ರಿಯ ಕೃತಿಗಳು. ಇವರ ಅಪಾರ ಶಿಷ್ಯ ಬಳಗ ಇವರನ್ನು ಪ್ರೀತಿಯಿಂದ ‘ಥಾಯ್’ ಎಂದು ಕರೆಯುತ್ತಿತ್ತು. ವಿಯೆಟ್ನಾಮಿ ಭಾಷೆಯಲ್ಲಿ ಥಾಯ್ ಎಂದರೆ ಗುರು.

ವಿಯೆಟ್ನಾಂ ಎಂಬುದು ಯದ್ಧದ ಬೆಂಕಿಯ ನಡುವೆ, ಅಮೆರಿಕದ ಸುರಿದ ಬಾಂಬುಗಳ ನಡುವೆ ಅರಳಿದ ದೇಶ. ಇಲ್ಲಿ 1926ರಲ್ಲಿ ಜನಿಸಿದ ಥಿಚ್ ಆರು ವರ್ಷದವರಿದ್ದಾಗ ಪ್ರಶಾಂತ ಬುದ್ಧನ ಚಿತ್ರ ವೊಂದನ್ನು ನೋಡುತ್ತಾರೆ. ಅದೇ ಅವರ ಬದುಕಿನ ಟರ್ನಿಂಗ್ ಪಾಯಿಂಟ್. ತೀವ್ರವಾಗಿ ಅವರನ್ನು ಆಕರ್ಷಿಸಿದ ಈ ಚಿತ್ರ ತಾನೂ ಹಾಗೇ ಆಗಬೇಕೆಂಬ ಬಯಕೆಯನ್ನು ಅವರಲ್ಲಿ ಹುಟ್ಟಿಸಿತು. ‌

ಹದಿನಾರನೇ ವಯಸ್ಸಿಗೇ ಹ್ಯೂ ನಗರದಲ್ಲಿದ್ದ ತುಹಿಯು ಬುದ್ಧ ಮಂದಿರವನ್ನು ಸೇರಿ ವಿಯೆಟ್ನಾಂ ಬೌದ್ಧಧರ್ಮವನ್ನು ನವೀಕರಿಸುವ ಚಳುವಳಿಯಲ್ಲಿ ಪಾಲ್ಗೊಂಡರು. ಅಲ್ಲಿಂದ ಅವರ ಕಲಿಕೆಯ ಪ್ರಯಾಣ ಸೈಗಾನ್ ವಿಶ್ವವಿದ್ಯಾಲಯ, ಪ್ರಿನ್ಸ್‌ಟನ್ ಥಿಯಲಾಜಿಕಲ್ ಸೆಮಿನರಿ, ಕೊಲಂಬಿಯಾ ವಿಶ್ವವಿದ್ಯಾಲಯ ಹೀಗೆ ಸಾಗಿತು. ಮುಂದೆ ವಿಯೆಟ್ನಾಂನಲ್ಲಿ ಅನೇಕಾನೇಕ ಸ್ವಯಂಸೇವಾ ಸಂಸ್ಥೆ ಗಳು, ವಿಶ್ವವಿದ್ಯಾಲಯ, ಪತ್ರಿಕೆಗಳನ್ನೆಲ್ಲ ಸ್ಥಾಪಿಸಿ ತಮ್ಮ ಶಾಂತಿ- ಧ್ಯಾನದ ಚಳವಳಿಯನ್ನು ಮುನ್ನಡೆಸಿದರು.

ವಿಯೆಟ್ನಾಂ ಮೇಲೆ ಅಮೆರಿಕ ನಡೆಸಿದ ಕ್ರೂರ ಯುದ್ಧವನ್ನು ಕೊನೆಗಾಣಿಸಲು ಹಾಗೂ ಸಮರದ ಕಾಲದಲ್ಲಿ ವಿಯೆಟ್ನಾಮಿಗರು ತಮ್ಮ ಮನಶ್ಶಾಂತಿ ಯನ್ನು ಕಾಪಾಡಿಕೊಳ್ಳಲು ಇವರು ನಡೆಸಿದ ಪ್ರಯತ್ನಗಳು ದಂತಕತೆಗಳಾಗಿವೆ. ಅಮೆರಿಕದ ಸಂತಸ್ವರೂಪೀ ಸಾಮಾಜಿಕ ಕಾರ್ಯಕರ್ತ ಮಾರ್ಟಿ ನ್ ಲೂಥರ್ ಕಿಂಗ್ ಜೊತೆಗೆ ಅವರು ಅತ್ಯಂತ ಗಾಢವಾದ, ಪ್ರೀತಿಯ ಸಂಬಂಧವನ್ನು ಹೊಂದಿ ದ್ದರು.

ಇನ್ನೊಬ್ಬ ಬೋಧಿಸತ್ವ ಎಂದೇ ಕಿಂಗ್ ಅವರನ್ನು ಕರೆಯುತ್ತಿದ್ದ ಥಿಚ್ ಅವರ ಜೊತೆಗೂಡಿ ಸಮರದ ಕಲೆಗಳನ್ನು ಬೆಂಕಿಯನ್ನು ನಂದಿಸಲು ಮಾಡಿದ ಕೆಲಸಗಳು ಚರಿತ್ರೆಯಲ್ಲಿ ದಾಖಲಾಗಿವೆ.‌ ನಡೆ, ನೆಲವನ್ನು ಕಾಲುಗಳು ಮುತ್ತಿಕ್ಕಿದಂತೆ ನಡೆ ಎನ್ನುವುದು ಅವರ ಮಾತುಗಳಂದು. ನಡೆಯು ವುದು ಕೂಡ ಧ್ಯಾನದ ಹಾಗೆ. ಅಷ್ಟು ಪ್ರೀತಿ, ಆಳವಾದ ತಲ್ಲೀನತೆಯಿಂದ ನಡೆಯಬೇಕು.

ನುಡಿ, ಕ್ರಿಯೆಗಳು ಕೂಡ ಹಾಗಿರಬೇಕು ಎನ್ನುತ್ತಿದ್ದರು ಅವರು. ಇನ್ನೊಬ್ಬ ವ್ಯಕ್ತಿಯು ನಿಮ್ಮನ್ನು ಬಳಲುವಂತೆ ಮಾಡಿದಾಗ ಅವನು ಕೂಡ ತನ್ನೊಳಗೇ ಆಳವಾಗಿ ನರಳುತ್ತಾನೆ ಮತ್ತು ಅವನ ಸಂಕಟವೂ ಹೆಚ್ಚುತ್ತದೆ. ಅವನಿಗೆ ಶಿಕ್ಷೆಯ ಅಗತ್ಯವಿಲ್ಲ; ಅವನಿಗೆ ಸಹಾಯ ಬೇಕು. ಅದು ಅವನು ನಿಮಗೆ ಕಳುಹಿಸುತ್ತಿರುವ ಸಂದೇಶ ಎಂದ ಥಿಚ್ ಮಾತಿನಲ್ಲಿ ಜಗತ್ತಿನ ಮನುಷ್ಯರ ನಡುವಿನ ಎಲ್ಲ ತಿಕ್ಕಾಟಗಳ ಮೂಲವಿದೆ.

ಕೆಲವೊಮ್ಮೆ ನಿಮ್ಮ ಸಂತೋಷವೇ ನಿಮ್ಮ ನಗುವಿನ ಮೂಲ, ಆದರೆ ಕೆಲವೊಮ್ಮೆ ನಿಮ್ಮ ನಗುವೇ ನಿಮ್ಮ ಸಂತೋಷದ ಮೂಲ. ಅಂದರೆ ನಿಮ್ಮ ನಗುವನ ಮೂಲಕ ನಿಮ್ಮೊಳಗೂ ಸುತ್ತಮುತ್ತಲೂ ಸಂತೋಷವನ್ನು ಸೃಷ್ಟಿಸಬಹುದು. ಸುಂದರವಾಗಿರುವುದು ಎಂದರೆ ನೀವೇ ಆಗಿರುವುದು. ನಿಮ್ಮನ್ನು ಇತರರು ಒಪ್ಪಿಕೊಳ್ಳುವ ಅಗತ್ಯವಿಲ್ಲ. ಆದರೆ ನಿಮ್ಮನ್ನು ನೀವು ಮೊದಲು ಒಪ್ಪಿಕೊಳ್ಳ ಬೇಕು ಎಂದರು.

ಅವರ ಮುಖ್ಯ ಮಾತುಗಳನ್ನು ನೋಡುತ್ತ ಹೋದರೆ ಅವರ ವಿಸ್ತಾರ ದರ್ಶನದ ಅಲ್ಪ ಪರಿಚಯ ನಮಗೆ ಆಗುತ್ತದೆ: ನೀವು ಪ್ರೀತಿಸುವ ವ್ಯಕ್ತಿಯು ತಾನು ಮುಕ್ತನೆಂದು ಭಾವಿಸುವ ರೀತಿಯಲ್ಲಿ ನೀವು ಪ್ರೀತಿಸಬೇಕು. ಇನ್ನೊಬ್ಬರನ್ನು ನಮ್ಮ ಹಿಡಿತದಿಂದ ಆಚೆ ಹೋಗಲು ಬಿಡುವುದು ನಮಗೂ ಸ್ವಾ ತಂತ್ರ್ಯವನ್ನು ನೀಡುತ್ತದೆ.

ಸಂತೋಷಕ್ಕೆ ಇರುವ ಏಕೈಕ ಷರತ್ತು ಎಂದರೆ ಸ್ವಾತಂತ್ರ್ಯ ಮಾತ್ರ. ನಿಮ್ಮ ಮೇಲಿನ ಪ್ರೀತಿಯ ಮೂಲಕ ನಾನು ಇಡೀ ವಿಶ್ವ, ಇಡೀ ಮಾನವಕುಲ ಮತ್ತು ಎಲ್ಲಾ ಜೀವಿಗಳಿಗೆ ನನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ನಿಮ್ಮೊಂದಿಗೆ ವಾಸಿಸುವ ಮೂಲಕ, ನಾನು ಎಲ್ಲರನ್ನು ಮತ್ತು ಎಲ್ಲಾ ಜೀವಿಗಳನ್ನು ಪ್ರೀತಿಸಲು ಕಲಿಯಲು ಬಯಸುತ್ತೇನೆ. ನಾನು ನಿನ್ನನ್ನು ಪ್ರೀತಿಸುವಲ್ಲಿ ಯಶಸ್ವಿಯಾದರೆ, ನಾನು ಭೂಮಿಯ ಮೇಲಿನ ಎಲ್ಲರನ್ನು ಮತ್ತು ಎಲ್ಲಾ ಜಾತಿಗಳನ್ನು ಪ್ರೀತಿಸಲು ಸಾಧ್ಯವಾಗುತ್ತದೆ.

ಇದು ಪ್ರೀತಿಯ ನಿಜವಾದ ಸಂದೇಶ. ನೀರಿನ ಮೇಲೆ ಅಥವಾ ಗಾಳಿಯಲ್ಲಿ ನಡೆಯುವುದನ್ನು ಪವಾಡವೆಂದು ಜನ ಪರಿಗಣಿಸುತ್ತಾರೆ. ಆದರೆ ನಿಜವಾದ ಪವಾಡವೆಂದರೆ ನೀರಿನ ಮೇಲೆ ಅಥವಾ ಗಾಳಿಯಲ್ಲಿ ನಡೆಯುವುದು ಅಲ್ಲ, ಬದಲು ಭೂಮಿಯ ಮೇಲೆ ನಡೆಯುವುದು. ಪ್ರತಿದಿನ ನಾವು ಕಣ್ಣಿಟ್ಟು ಗುರುತಿಸದ ಪವಾಡಗಳನ್ನು ಕಾಣುತ್ತೇವೆ- ನೀಲಿ ಆಕಾಶ, ಬಿಳಿ ಮೋಡಗಳು, ಹಸಿರು ಎಲೆಗಳು, ಮಗುವಿನ ಕಪ್ಪು ಕುತೂಹಲಕಾರಿ ಕಂಗಳು- ನಮ್ಮ ಸ್ವಂತ ಎರಡು ಕಣ್ಣುಗಳು.

ಎಲ್ಲವೂ ಪವಾಡ. ನೀವು ಲೆಟ್ಯೂಸ್ ಅನ್ನು ನೆಟ್ಟು ಅದು ಚೆನ್ನಾಗಿ ಬೆಳೆಯದಿದ್ದಾಗ ಅದನ್ನು ದೂಷಿಸುವುದಿಲ್ಲ. ಬದಲಾಗಿ ಯಾಕೆ ಹಾಗಾಯ್ತು ಎಂಬುದರ ಕಾರಣಗಳನ್ನು ನೀವು ಹುಡುಕು ತ್ತೀರಿ. ಗೊಬ್ಬರ ಕಡಿಮೆಯಾಯತೇ, ನೀರು ಬೇಕೇ, ಸೂರ್ಯ ಬೆಳಕು ಇನ್ನಷ್ಟು ಬೇಕೆ, ಹೀಗೆ. ಬದಲು ನೀವು ಲೆಟ್ಯೂಸ್ ಅನ್ನು ಎಂದಿಗೂ ದೂಷಿಸುವುದಿಲ್ಲ.

ಆದರೆ ನಾವು ನಮ್ಮ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಸಮಸ್ಯೆಗಳನ್ನು ಹೊಂದಿದ್ದರೆ ನಾವು ಅವರನ್ನು ದೂಷಿಸುತ್ತೇವೆ. ಆದರೆ ಅವರ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಎಂದು ನಮಗೆ ತಿಳಿದಿದ್ದರೆ ಈ ಸಮಸ್ಯೆಗಳು ಉದ್ಭವ ಆಗುವುದಿಲ್ಲ. ಲೆಟ್ಯೂಸ್‌ನಂತೆ ಚೆನ್ನಾಗಿ ಬೆಳೆಯಿರಿ. ದೂಷಿಸು ವುದರಲ್ಲಿ ಗುಣವಿಲ್ಲ. ಇದು ನನ್ನ ಅನುಭವ. ಆಪಾದನೆ ಇಲ್ಲ, ತರ್ಕವಿಲ್ಲ, ವಾದವಿಲ್ಲ, ಕೇವಲ ತಿಳಿವಳಿಕೆ.

ಅರ್ಥ ಮಾಡಿಕೊಳ್ಳಿ ಮತ್ತು ನೀವು ಅರ್ಥ ಮಾಡಿಕೊಂಡಿದ್ದೀರಿ ಎಂದು ತೋರಿಸಿ. ಪರಿಸ್ಥಿತಿ ಬದಲಾ ಗುತ್ತದೆ. ಭಾವನೆಗಳು ಗಾಳಿಯಂತೆ, ಆಕಾಶದಲ್ಲಿನ ಮೋಡಗಳಂತೆ ಬಂದು ಹೋಗುತ್ತವೆ. ಪ್ರಜ್ಞಾ ಪೂರ್ವಕ ಉಸಿರಾಟವೇ ನನ್ನ ಮೂಲ ಆಧಾರ. ಬೆಳಗ್ಗೆ ಎzಗ ನಾನು ನಗುತ್ತೇನೆ. ಇಪ್ಪ ತ್ನಾಲ್ಕು ಹೊಚ್ಚಹೊಸ ಗಂಟೆಗಳು ನನ್ನ ಮುಂದೆ ಇವೆ. ನಾನು ಪ್ರತಿ ಕ್ಷಣದಲ್ಲಿ ಸಂಪೂರ್ಣವಾಗಿ ಬದುಕು ತ್ತೇನೆ ಮತ್ತು ಎಲ್ಲಾ ಜೀವಿಗಳನ್ನು ಸಹಾನುಭೂತಿಯ ಕಣ್ಣುಗಳಿಂದ ನೋಡುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತೇನೆ.

ಹಲವು ಜನ ಉತ್ಸಾಹೋದ್ರೇಕವನ್ನೇ ಸಂತೋಷವೆಂದು ಭಾವಿಸುತ್ತಾರೆ. ಆದರೆ ನೀವು ಉತ್ಸುಕ ರಾಗಿರುವಾಗ ಶಾಂತರಾಗಿರುವುದಿಲ್ಲ. ನಿಜವಾದ ಸಂತೋಷವು ಶಾಂತಿಯನ್ನು ಆಧರಿಸಿದೆ. ನಮ್ಮ ಹೃದಯದಲ್ಲಿ ನಾವು ಕೋಪ, ಆತಂಕ ಅಥವಾ ಆಸ್ತಿ ಇವುಗಳಿಗೆ ಅಂಟಿಕೊಂಡೇ ಇದ್ದರೆ ನಾವು ಮುಕ್ತರಾಗಲು ಸಾಧ್ಯವಿಲ್ಲ.

ಜನರು ತಮ್ಮ ದುಃಖವನ್ನು ಬಿಡಲು ಕಷ್ಟಪಡುತ್ತಾರೆ. ಅಜ್ಞಾತವನ್ನು ಎದುರಿಸುವುದರ ಭಯ ಕ್ಕಿಂತಲೂ ಅವರು ಪರಿಚಿತವಾದ ದುಃಖವನ್ನೇ ಬಯಸುತ್ತಾರೆ. ನಿಮ್ಮ ಚಹಾವನ್ನು ನಿಧಾನವಾಗಿ ಮತ್ತು ತಲ್ಲೀನತೆಯಿಂದ ಕುಡಿಯಿರಿ, ಭೂಮಿಯು ತನ್ನ ಅಕ್ಷದ ಸುತ್ತ ಸುತ್ತುತ್ತಿರುವಂತೆ ನಿಧಾನ ವಾಗಿ, ಸಮವಾಗಿ. ಅದು ಭವಿಷ್ಯದ ಕಡೆಗೆ ಧಾವಿಸುತ್ತಿರುವುದಿಲ್ಲ. ಉಸಿರಾಟದ ಮೂಲಕ ದೇಹ ಮತ್ತು ಮನಸ್ಸನ್ನು ಶಾಂತಗೊಳಿಸಿ. ಉಸಿರಾಡುವಾಗ ನಾನು ನಗುತ್ತೇನೆ.

ಯಾಕೆಂದರೆ ಈ ಕ್ಷಣದಲ್ಲಿ ವಾಸಿಸುವ ನನಗೆ ಈ ಕ್ಷಣವೊಂದೇ ಸತ್ಯ ಎಂದು ತಿಳಿದಿದೆ. ಜೀವನವು ಪ್ರಸ್ತುತ ಕ್ಷಣದಲ್ಲಿ ಮಾತ್ರ ನಿಮಗೆ ಲಭ್ಯವಿದೆ. ನಾವು ಪ್ರತ್ಯೇಕ ಎಂಬ ಭ್ರಮೆಯಿಂದ ಎಚ್ಚರ ಗೊಳ್ಳುವುದಕ್ಕಾಗಿ ಮಾತ್ರ ನಾವು ಇಲ್ಲಿದ್ದೇವೆ. ಮನಸ್ಸು ಸಾವಿರ ದಿಕ್ಕುಗಳಲ್ಲಿ ಧಾವಿಸಬಹುದು. ಆದರೆ ಈ ಸುಂದರ ಹಾದಿಯಲ್ಲಿ ನಾನು ಶಾಂತಿಯಿಂದ ನಡೆಯುತ್ತೇನೆ. ಪ್ರತಿ ಹೆಜ್ಜೆಗೂ ಗಾಳಿ ಬೀಸುತ್ತದೆ. ಪ್ರತಿ ಹೆಜ್ಜೆಯಲ್ಲೂ ಒಂದು ಹೂವು ಅರಳುತ್ತದೆ.

ನಿಮ್ಮಲ್ಲಿ ದುಃಖದ ಬೀಜವು ಎಷ್ಟೇ ಬಲವಾಗಿರಬಹುದು. ಆದರೆ ನೀವು ಸಂತೋಷವಾಗಿರಲು ಈಗಲೇ ಅನುಮತಿ ನೀಡಿಕೊಳ್ಳಿ. ಅದಕ್ಕಾಗಿ ನೀವು ಇನ್ನೊಂದು ದುಃಖದ ಕ್ಷಣವನ್ನು ಹೊಂದು ವವರೆಗೆ ಕಾಯಬೇಡಿ. ಸಂಕಟಗಳು ಸಾಕೆನಿಸುವುದಿಲ್ಲ. ಜೀವನವು ಏಕಕಾಲಕ್ಕೆ ಭಯಾನಕವೂ ಅದ್ಭುತವೂ ಆಗಿದೆ. ತುಂಬಾ ದುಃಖದಿಂದ ತುಂಬಿರುವಾಗ ನಾನು ಹೇಗೆ ನಗಲು ಸಾಧ್ಯ? ಇದು ಸಾಧ್ಯ.

ಯಾಕೆಂದರೆ ನಿಮ್ಮ ದುಃಖದ ಕುರಿತೇ ನೀವು ನಗುವ ಅಗತ್ಯವಿದೆ. ಏಕೆಂದರೆ ನಿಮ್ಮ ದುಃಖಕ್ಕಿಂತ ನೀವು ಭಿನ್ನ. ಪ್ರಸ್ತುತ ಕ್ಷಣವನ್ನು ಸಹಿಸಿಕೊಳ್ಳಲು, ಕಡಿಮೆ ಕಷ್ಟಕರವಾಗಿಸಲು ಭರವಸೆ ಮುಖ್ಯ. ನಾಳೆ ಉತ್ತಮವಾಗಿರುತ್ತದೆ ಎಂದು ನಾವು ನಂಬಿದರೆ ಇಂದು ಕಷ್ಟವನ್ನು ಸಹಿಸಿಕೊಳ್ಳಬಹುದು. ನನ್ನ ಕ್ರಿಯೆಗಳೇ ನನ್ನ ಏಕೈಕ ನಿಜವಾದ ಆಸ್ತಿ. ನಾವು ಸಾಮಾನ್ಯವಾಗಿ ಶಾಂತಿ ಎಂದರೆ ಯುದ್ಧದ ಅನುಪಸ್ಥಿತಿ ಎಂದು ಭಾವಿಸುತ್ತೇವೆ.

ಶಕ್ತಿಶಾಲಿ ದೇಶಗಳು ಶಸ್ತ್ರಾಸ್ತ್ರಗಳನ್ನು ಕಡಿಮೆಗೊಳಿಸಿದರೆ ನಾವು ಶಾಂತಿಯನ್ನು ಹೊಂದಬಹುದು. ಆದರೆ ನಾವು ಆಯುಧಗಳನ್ನು ಆಳವಾಗಿ ನೋಡಿದರೆ, ನಾವು ನಮ್ಮ ಸ್ವಂತ ಮನಸ್ಸನ್ನೇ ನೋಡಿ ದಂತೆ. ನಮ್ಮದೇ ಆದ ಪೂರ್ವಗ್ರಹಗಳು, ಭಯಗಳು ಮತ್ತು ಅeನಗಳು ಅವು. ನಾವು ಎಲ್ಲಾ ಬಾಂಬ್‌ ಗಳನ್ನು ಚಂದ್ರನಲ್ಲಿಗೆ ಸಾಗಿಸಿದರೂ, ಯುದ್ಧದ ಬೇರುಗಳು ನಮ್ಮ ಹೃದಯ ಮತ್ತು ಮನಸ್ಸಿನಲ್ಲಿ ಇನ್ನೂ ಇರುತ್ತವೆ. ಶಾಂತಿಗಾಗಿ ಕೆಲಸ ಮಾಡುವುದೆಂದರೆ ನಮ್ಮ ಹೃದಯದಿಂದ ಯುದ್ಧವನ್ನು ಕಿತ್ತು ಹಾಕುವುದು.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?