RCB Forever 'ಈ ಸಲ ಕಪ್ ನಮ್ದೇ'; ಮಹಾ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ ಆರ್‌ಸಿಬಿ ಅಭಿಮಾನಿ
17 ಆವೃತ್ತಿ ಕಳೆದರೂ ಐಪಿಎಲ್‌ನಲ್ಲಿ ಆರ್‌ಸಿಬಿ ಇದುವರೆಗೂ ಒಂದೇ ಒಂದು ಕಪ್ ಗೆದಿಲ್ಲ. ಆದರೆ ತಂಡದ ಮೇಲೆ ಅಭಿಮಾನಿಗಳಿರುವ ಪ್ರೀತಿ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ. ಇಂದಲ್ಲದಿದ್ದರೂ ನಾಳೆ ಕಪ್ ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸದಲ್ಲಿ ಪ್ರತಿ ಬಾರಿಯ ಆವೃತ್ತಿಯಲ್ಲಿಯೂ 'ಈ ಸಲ ಕಪ್ ನಮ್ದೇ' ಎಂಬ ಘೋಷಣೆಯೊಂದಿಗೆ ತಂಡಕ್ಕೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಬೆಂಬಲ ಸೂಚಿಸುತ್ತಲೇ ಬಂದಿದ್ದಾರೆ.
ಪ್ರಯಾಗರಾಜ್: ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಆರ್‌ಸಿಬಿ(RCB Forever) ಅಭಿಮಾನಿಯೊಬ್ಬ ಈ ಬಾರಿಯಾದರೂ ತಂಡ ಕಪ್ ಗೆಲ್ಲುವಂತಾಗಲಿ ಎಂದು 'ಈ ಸಲ ಕಪ್ ನಮ್ದೇ. ಜೈ ಆರ್‌ಸಿಬಿ' ಎಂಬ ಪೋಸ್ಟರ್ ಹಿಡಿದು ಪುಣ್ಯಸ್ನಾನ ಮಾಡಿದ್ದಾನೆ. ಈ ವಿಡಿಯೊ ವೈರಲ್ ಆಗಿದೆ.
ಕೆಲ ದಿನಗಳ ಹಿಂದೆ ಬೆಂಗಳೂರು ಮೂಲಕ RCB ಅಭಿಮಾನಿಯೊಬ್ಬರು ಕುಂಭಮೇಳದಲ್ಲಿ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ RCB ಜೆರ್ಸಿಗೆ ಸ್ನಾನ ಮಾಡಿಸಿದ್ದರು. ತಂಡದ ಸಕಲ ಕಷ್ಟಗಳು ಕಳೆದು ಈ ಸಲ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲಲಿ ಎಂದು ಫ್ರಾರ್ಥಿಸಿದ್ದರು. ಇದೀಗ ಮತ್ತೊಬ್ಬ ಅಭಿಮಾನಿ ಕೂಡ ಆರ್‌ಸಿಬಿ ಕಪ್ ಗೆಲ್ಲಲಿ ಎಂದು ಪುಣ್ಯಸ್ನಾನ ಮಾಡಿದ್ದಾನೆ.
Prayagraj #Mahakumbh alli namma #RCB ❤️ @RCBTweets 💥
— Sandy (@DbossD60) February 4, 2025
Jai #ShreeRam
Jai #RCB
Jai #DBoss
RCB Forever 🚩 pic.twitter.com/HsZvJpNjcX
17 ಆವೃತ್ತಿ ಕಳೆದರೂ ಐಪಿಎಲ್‌ನಲ್ಲಿ ಆರ್‌ಸಿಬಿ ಇದುವರೆಗೂ ಒಂದೇ ಒಂದು ಕಪ್ ಗೆದಿಲ್ಲ. ಆದರೆ ತಂಡದ ಮೇಲೆ ಅಭಿಮಾನಿಗಳಿರುವ ಪ್ರೀತಿ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ. ಇಂದಲ್ಲದಿದ್ದರೂ ನಾಳೆ ಕಪ್ ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸದಲ್ಲಿ ಪ್ರತಿ ಬಾರಿಯ ಆವೃತ್ತಿಯಲ್ಲಿಯೂ 'ಈ ಸಲ ಕಪ್ ನಮ್ದೇ' ಎಂಬ ಘೋಷಣೆಯೊಂದಿಗೆ ತಂಡಕ್ಕೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಬೆಂಬಲ ಸೂಚಿಸುತ್ತಲೇ ಬಂದಿದ್ದಾರೆ.
ಆರ್‌ಸಿಬಿ ತಂಡ
ವಿರಾಟ್ ಕೊಹ್ಲಿ,ರಜತ್ ಪಾಟೀದಾರ್, ಯಶ್ ದಯಾಳ್,ಜೋಶ್ ಹ್ಯಾಸಲ್ವುಡ್, ಫಿಲ್ ಸಾಲ್ಟ್, ಜಿತೇಶ್ ಶರ್ಮ, ಲಿಯಾಮ್ ಲಿವಿಂಗ್ಸ್ಟೋನ್, ರಸಿಕ್ ಸಲಾಂ, ಸುಯಶ್ ಶರ್ಮ, ಭುವನೇಶ್ವರ್ ಕುಮಾರ್,ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ನುವಾನ್ ತುಷಾರ, ರೊಮಾರಿಯೊ ಶೆರ್ಡ್, ಸ್ವಪ್ನಿಲ್ ಸಿಂಗ್, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕರ, ಮೋಹಿತ್ ರಾಥೀ, ಅಭಿನಂದನ್ ಸಿಂಗ್, ಲುಂಗಿ ಎನ್ಗಿಡಿ.