'ಬೊಜ್ಜು ಹೊಂದಿರುವ 5 ಭಾರತೀಯರಲ್ಲಿ 2 ಜನರಿಗೆ ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಮಧುಮೇಹ ಇರುವುದು ಪತ್ತೆ': ಏಷ್ಯಾ-ಪೆಸಿಫಿಕ್ ಅಧ್ಯಯನ ಬಹಿರಂಗ
40% ಗಿಂತ ಹೆಚ್ಚು ಜನರು ತಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಶ್ರಮಿಸುತ್ತಿದ್ದು, ದೀರ್ಘಕಾಲೀನ ತೂಕ ನಿರ್ವಹಣೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಧ್ಯಯನದ ಸಂಶೋಧನೆಗಳು ಬೊಜ್ಜು ಹೊಂದಿರುವ ಅನೇಕ ಭಾರತೀಯರಿಗೆ ತಮ್ಮ ಸ್ಥಿತಿಯ ತೀವ್ರತೆಯ ಅರಿವಿನ ಕೊರತೆಯಿದೆ ಎಂದು ತೋರಿಸುತ್ತವೆ, ಇದು ಬೊಜ್ಜನ್ನು ದೀರ್ಘಕಾಲದ ಕಾಯಿಲೆಯಾಗಿ ಪರಿಹರಿಸಲು ಸಂಯೋಜಿತ ಆರೋ ಗ್ಯ ರಕ್ಷಣಾ ಪ್ರಯತ್ನಗಳ ಅಗತ್ಯವನ್ನು ಒತ್ತಿಹೇಳುತ್ತದೆ.
ಬೆಂಗಳೂರು: 2,000 ಕ್ಕೂ ಹೆಚ್ಚು ಬೊಜ್ಜು ಹೊಂದಿರುವ ವ್ಯಕ್ತಿಗಳು (ಪಿಡ ಬ್ಲ್ಯುಓ) ಮತ್ತು 300 ಆರೋಗ್ಯ ತಜ್ಞರನ್ನು (ಹೆಚ್ ಸಿ ಪಿ ಗಳು) ಒಳಗೊಂಡ ನೋವೊ ನಾರ್ಡಿಸ್ಕ್ ಇತ್ತಿಚಿಗೆ ನಡೆಸಿದ ಅಧ್ಯ ಯನದ ಪ್ರಕಾರ, ಭಾರತದಲ್ಲಿ ಪಿಡಬ್ಲ್ಯುಓ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಪ್ರಮುಖ ಒಳ ನೋಟಗಳನ್ನು ಬಹಿರಂಗಪಡಿಸಿದೆ. ಈ ಅಧ್ಯಯನವು ಬೊಜ್ಜಿನ ಬಗ್ಗೆ ಅರಿವು, ತಿಳುವಳಿಕೆ ಮತ್ತು ನಿರ್ವಹಣೆಯ ನಡುವಿನ ಗಮನಾರ್ಹ ಸಂಪರ್ಕ ಕಡಿತವನ್ನು ಎತ್ತಿ ತೋರಿಸುತ್ತದೆ.
ಇದನ್ನೂ ಓದಿ: Roopa Gururaj Column: ಸಿಟ್ಟು ಎರಡು ಬದಿಯ ಗರಗಸದಂತೆ
ಇದು ಚಿಕಿತ್ಸೆಗೆ ಸಮಗ್ರ, ದೀರ್ಘಕಾಲೀನ ವಿಧಾನದ ಅಗತ್ಯದ ಪ್ರಾಮುಖ್ಯತೆ ತಿಳಿಸುತ್ತದೆ. ಇದು ಭಾರತದಲ್ಲಿ ಬೊಜ್ಜು ನಿರ್ವಹಣೆಗೆ ಸಮಗ್ರ ವಿಧಾನದ ಹೆಚ್ಚುತ್ತಿರುವ ಅಗತ್ಯವನ್ನು ಒತ್ತಿಹೇಳುತ್ತದೆ. ಭಾರತದಲ್ಲಿ ಪಿಡಬ್ಲ್ಯುಓ ದ ಮೂರನೇ ಒಂದು ಭಾಗದಷ್ಟು ವ್ಯಕ್ತಿಗಳು ತಮ್ಮ ಸ್ಥಿತಿಯ ತೀವ್ರತೆಯನ್ನು ಗುರುತಿಸುವುದಿಲ್ಲ, ಅವರು ಕೇವಲ ಅಧಿಕ ತೂಕ ಅಥವಾ ಸಾಮಾನ್ಯ ತೂಕ ಹೊಂದಿದ್ದಾರೆಂದು ನಂಬುತ್ತಾರೆ ಎಂದು ಅಧ್ಯಯನವು ಗುರುತಿಸಿದೆ. ಬೊಜ್ಜು ಹೊಂದಿರುವುದನ್ನು ನಿರಾಕರಿಸುವ ವ್ಯಾಪಕವಾದ ತಪ್ಪು ಕಲ್ಪನೆಗಳು ಮತ್ತು ಅದರ ಪರಿಣಾಮಗಳ ಬಗ್ಗೆ ಅರಿವಿನ ಕೊರತೆಯನ್ನು ಪ್ರತಿಬಿಂಬಿಸುತ್ತದೆ, ಇದು ಚಿಕಿತ್ಸೆ ವಿಳಂಬವಾಗಲು ಮತ್ತು ಆರೋಗ್ಯ ಫಲಿತಾಂಶ ಗಳು ಹದಗೆಡಲು ಕಾರಣವಾಗುತ್ತದೆ.
ಬೊಜ್ಜು ದೇಹದ ಪ್ರತಿಯೊಂದು ಭಾಗದ ಮೇಲೆ ಪರಿಣಾಮ ಬೀರುವ ದೈಹಿಕ, ಚಯಾಪಚಯ, ಹೃದಯರಕ್ತನಾಳ, ಕ್ಯಾನ್ಸರ್-ಸಂಬಂಧಿತ, ಮಾನಸಿಕ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ ಎನ್ನುವುದನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ. ಐದು ಪಿಡಬ್ಲ್ಯುಓ ಗಳಲ್ಲಿ ಇಬ್ಬರು ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಮಧುಮೇಹದಂತಹ ಸ್ಥಿತಿಗಳಿಂದ ಬಳಲು ತ್ತಿದ್ದಾರೆ.
ಅನೇಕ ಪಿಡಬ್ಲ್ಯುಓ ಗಳು ಅಧಿಕ ರಕ್ತದೊತ್ತಡ (32%), ಅಧಿಕ ಕೊಲೆಸ್ಟ್ರಾಲ್ (27%), ತಿನ್ನುವ ಅಸ್ವ ಸ್ಥತೆ (23%) ಮತ್ತು ಹೃದಯರಕ್ತನಾಳದ ಕಾಯಿಲೆಗಳಂತಹ (19%) 1 ರಿಂದ 4 ಸಹವರ್ತಿ ಕಾಯಿಲೆ ಗಳನ್ನು ಹೊಂದಿರುತ್ತಾರೆ ಎಂದು ಹೆಚ್ ಸಿ ಪಿ ಗಳು ವರದಿ ಮಾಡಿದ್ದಾರೆ; ಬೊಜ್ಜು ವೈದ್ಯಕೀಯ ಹಸ್ತಕ್ಷೇಪದ ಅಗತ್ಯವಿರುವ ದೀರ್ಘಕಾಲದ ಕಾಯಿಲೆಯಾಗಿದೆ ಎಂದು ದೃಢವಾಗಿದೆ.
ನೊವೊ ನಾರ್ಡಿಸ್ಕ್ ಇಂಡಿಯಾದ ವೈದ್ಯಕೀಯ, ನಿಯಂತ್ರಕ ಮತ್ತು ಔಷಧ ಮೇಲ್ವಿಚಾರಣೆ ಉಪಾ ಧ್ಯಕ್ಷೆ ಡಾ. ಮಾಯಾ ಶರ್ಮಾ, ಈ ಸಮಸ್ಯೆಯನ್ನು ಪರಿಹರಿಸುವುದರ ಪ್ರಾಮುಖ್ಯತೆಯನ್ನು ವಿವರಿ ಸಿದ್ದಾರೆ, "ಇದು ದೀರ್ಘಕಾಲೀನ ಖಾಯಿಲೆ ಎಂದು ಅರ್ಥಮಾಡಿ ಕೊಳ್ಳುವುದು ಬೊಜ್ಜು ನಿರ್ವಹಣೆಯ ಮೊದಲ ಹೆಜ್ಜೆಯಾಗಿದೆ. ತೂಕ ಇಳಿಸಿಕೊಳ್ಳಲು ಮಾತ್ರ ವಲ್ಲದೇ ಸಮಯ ಕಳೆದಂತೆ ಆ ನಷ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಸಾಧನ ಗಳೊಂದಿಗೆ ನಾವು ಪಿಡಬ್ಲ್ಯುಓ ಬೆಂಬಲಿಸಬೇಕಾಗಿದೆ."
ತೂಕ ಇಳಿಸುವ ಪ್ರಯಾಣದಲ್ಲಿ ಪಿಡಬ್ಲ್ಯುಓ ವ್ಯಕ್ತಿಗಳು ಅನೇಕ ಪ್ರಮುಖ ಅಡಚಣೆಗಳನ್ನು ಎದುರಿಸುತ್ತಾರೆ ಮತ್ತು ತೂಕ ಇಳಿಸುವಿಕೆಯನ್ನು ಕಾಯ್ದುಕೊಳ್ಳುವಲ್ಲಿ ಬಹಳ ತೊಂದರೆಗಳನ್ನು ಎದುರಿಸುತ್ತಾರೆ. ಸಮೀಕ್ಷೆಗೆ ಒಳಗಾದ ಅರ್ಧಕ್ಕಿಂತ ಹೆಚ್ಚು ಜನ ತಮ್ಮ ಪ್ರಯತ್ನಗಳ ಹೊರತಾಗಿ ಯೂ ಹಳೆಯ ಆಹಾರ ಪದ್ಧತಿಗೆ ಮರಳುತ್ತಿದ್ದಾರೆ ಎಂದು ವರದಿ ಮಾಡಿದ್ದಾರೆ.
ಪ್ರೋತ್ಸಾಹದ ಕೊರತೆ, ವೈಫಲ್ಯದ ಭಯ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆಯನ್ನು ಸಾಮಾನ್ಯ ಅಡಚಣೆಗಳೆಂದು ಉಲ್ಲೇಖಿಸಲಾಗಿದೆ. ಆತಂಕಕಾರಿ ಅಂಶವೆಂದರೆ, 44% ಜನ ಆರು ತಿಂಗಳೊಳಗೆ ಕಳೆದುಹೋದ ತೂಕವನ್ನು ಮರಳಿ ಪಡೆಯುತ್ತಾರೆ, ಇದು ಜೀವನ ಶೈಲಿಯ ಹೊಂದಾಣಿಕೆಗಳನ್ನು ಮೀರಿದ ಹೆಚ್ಚು ಸುಸ್ಥಿರ, ದೀರ್ಘಕಾಲೀನ ಪರಿಹಾರಗಳ ಅಗತ್ಯ ವನ್ನು ಒತ್ತಿ ಹೇಳುತ್ತದೆ.
ಪಿಡಬ್ಲ್ಯುಓ ರೋಗಿಗಳಲ್ಲಿ 70% ಗಿಂತ ಹೆಚ್ಚು ಜನ ಬೊಜ್ಜನ್ನು ದೀರ್ಘಕಾಲೀನ ಖಾಯಿಲೆ ಎಂದು ಗುರುತಿಸುತ್ತಾರೆ, ಆದರೆ ಅನೇಕರು ಇನ್ನೂ ತಮ್ಮ ತೂಕವನ್ನು ನಿರ್ವಹಿಸುವುದು ತಮ್ಮ ಏಕೈಕ ಜವಾಬ್ದಾರಿ ಎಂದು ಭಾವಿಸುತ್ತಾರೆ. ಇದು ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಂತಹ ಇತರ ದೀರ್ಘಕಾಲದ ಖಾಯಿಲೆಗಳನ್ನು ಹೇಗೆ ಗ್ರಹಿಸಲಾಗುತ್ತದೆ ಎನ್ನುವುದಕ್ಕೆ ವ್ಯತಿರಿಕ್ತವಾಗಿದೆ, ಇದರಲ್ಲಿ ವೈದ್ಯಕೀಯ ಮಧ್ಯಪ್ರವೇಶವನ್ನು ಸಾಮಾನ್ಯವಾಗಿ ಪ್ರೋತ್ಸಾಹದಾಯಕವಾಗಿ ಸ್ವೀಕರಿಸಲಾಗುತ್ತದೆ, ಐದು ಹೆಚ್ ಸಿ ಪಿ ಗಳಲ್ಲಿ ನಾಲ್ಕು ತಜ್ಞರು ತಮ್ಮ ರೋಗಿಗಳೊಂದಿಗೆ ತೂಕದ ಬಗ್ಗೆ ಆರಾಮ ದಾಯಕವಾಗಿ ಚರ್ಚಿಸುತ್ತಾರೆ ಮತ್ತು ಈ ಚರ್ಚೆಗಳನ್ನು ನಡೆಸಿದ ಪಿಡಬ್ಲ್ಯುಓ ಗಳಲ್ಲಿ, ಹೆಚ್ಚಿನವರು ಸಕಾರಾತ್ಮಕ ಅನುಭವಗಳನ್ನು ವರದಿ ಮಾಡುತ್ತಾರೆ.
ಅಂತಿಮವಾಗಿ, ನೊವೊ ನಾರ್ಡಿಸ್ಕ್ ಇಂಡಿಯಾದ ಕಾರ್ಪೊರೇಟ್ ಉಪಾಧ್ಯಕ್ಷ ಶ್ರೀ ವಿಕ್ರಾಂತ್ ಶ್ರೋತ್ರಿಯ ಹೀಗೆ ಹೇಳಿದ್ದಾರೆ, “ಇತ್ತೀಚಿನ ಸಂಶೋಧನೆಯು ಭಾರತದಲ್ಲಿ ಬೊಜ್ಜಿನೊಂದಿಗೆ (ಪಿಡಬ್ಲ್ಯುಓ) ವಾಸಿಸುವ ಜನರು ಎದುರಿಸುತ್ತಿರುವ ಗ್ರಹಿಕೆಗಳು ಮತ್ತು ಸವಾಲುಗಳ ಮೇಲೆ ಬೆಳಕು ಚೆಲ್ಲಿದೆ. ಹೆಚ್ಚುತ್ತಿರುವ ಜಾಗೃತಿಯ ಹೊರತಾಗಿಯೂ, ಇನ್ನೂ ಅನೇಕ ತಪ್ಪು ಕಲ್ಪನೆಗಳು ಮತ್ತು ಅಡಚಣೆಗಳನ್ನು ಪರಿಹರಿಸಬೇಕಾಗಿದೆ. ಆದ್ದರಿಂದ, ಭಾರತದಲ್ಲಿ ಬೆಳೆಯುತ್ತಿರುವ ಬೊಜ್ಜು ಸವಾ ಲನ್ನು ಪರಿಹರಿಸುವಲ್ಲಿ ಸರ್ಕಾರದ ತೊಡಗುವಿಕೆ ನಿರ್ಣಾಯಕವಾಗಿದೆ. ಬೊಜ್ಜು ಕೇವಲ ವೈಯಕ್ತಿಕ ಸಮಸ್ಯೆಯಲ್ಲ ಆದರೆ ಆರೋಗ್ಯ ಸಂಪನ್ಮೂಲಗಳು, ಆರ್ಥಿಕ ಉತ್ಪಾದಕತೆ ಮತ್ತು ನಮ್ಮ ಸಮಾಜದ ಒಟ್ಟಾರೆ ಯೋಗಕ್ಷೇಮದ ಮೇಲೆ ಪರಿಣಾಮ ಬೀರುವ ಪ್ರಮುಖ ಸಾರ್ವಜನಿಕ ಆರೋಗ್ಯ ಕಾಳಜಿಯಾಗಿದೆ. ಈ ಸಂಕೀರ್ಣ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸಲು ನಿಯಮದ ಮಧ್ಯಸ್ಥಿಕೆಗಳು, ಜಾಗೃತಿ ಕಾರ್ಯಕ್ರಮಗಳು ಮತ್ತು ಪ್ರವೇಶಲಭ್ಯ ಆರೋಗ್ಯ ಪರಿಹಾರಗಳನ್ನು ಒಳಗೊಂಡ ಬಹುಮುಖಿ ವಿಧಾನ ಅಗತ್ಯವಾಗಿದೆ.”
ಬೊಜ್ಜು ದೀರ್ಘಕಾಲೀನ ಖಾಯಿಲೆ ಎನ್ನುವ ಅರಿವು ಮತ್ತು ತಿಳುವಳಿಕೆಯನ್ನು ಹೆಚ್ಚಿಸುವ ಅಗತ್ಯ ನಿರಂತರವಾಗಿ ನಡೆಯುತ್ತಿದೆ. ತಪ್ಪು ಕಲ್ಪನೆಗಳನ್ನು ಪರಿಹರಿಸುವುದು, ಪಿಡಬ್ಲ್ಯುಓ ಗೆ ನಿರಂತರ ಬೆಂಬಲ ನೀಡುವುದು ಮತ್ತು ವೈದ್ಯಕೀಯ, ನಡವಳಿಕೆ ಹಾಗೂ ಜೀವನಶೈಲಿಯ ಮಧ್ಯಸ್ಥಿಕೆಗಳನ್ನು ಸಂಯೋಜಿಸುವುದು ತೂಕ ನಿರ್ವಹಣೆಗೆ ಪರಿಣಾಮಕಾರಿಯಾಗಿದೆ.