IND vs ENG: ರಾಹುಲ್ ಅಥವಾ ರಿಷಭ್; ಯಾರಿಗೆ ಸಿಗಲಿದೆ ಅವಕಾಶ?
ಆಟಗಾರರ ಅಭ್ಯಾಸದ ವೇಳೆ ರಾಹುಲ್ ಬ್ಯಾಟಿಂಗ್ ಜತೆಗೆ ಕೀಪಿಂಗ್ ಅಭ್ಯಾಸ ಕೂಡ ನಡೆಸಿದ್ದರು. ಹೀಗಾಗಿ ಅವರು ಇಂದು ಗ್ಲೌಸ್ ತೊಡುವುದು ಖಚಿತ ಎನ್ನಲಡ್ಡಿಯಿಲ್ಲ. ಕೋಚ್ ಗಂಭೀರ್‌ಗೂ ರಾಹುಲ್ ಮೇಲೆ ಒಲವಿದೆ. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಪಂತ್ ಬೇಜವಾಬ್ದಾರಿ ಬ್ಯಾಟಿಂಗ್ ನಡೆಸಿ ಟೀಕೆಗೆ ಗುರಿಯಾಗಿದ್ದರು.
ನಾಗ್ಪುರ: ಚಾಂಪಿಯನ್ಸ್ ಟ್ರೋಫಿಗೆ ಅಂತಿಮ ಸಿದ್ಧತೆ ಎಂಬಂತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ 3 ಪಂದ್ಯಗಳ ಏಕದಿನ ಸರಣಿ ಇಂದು(ಗುರುವಾರ) ಆರಂಭಗೊಳ್ಳಲಿದೆ. ಇತ್ತಂಡಗಳಿಗೂ ಈ ಸರಣಿ ಅಗ್ನಿಪರೀಕ್ಷೆ ಇದ್ದಂತೆ.
ಭಾರತಕ್ಕೆ ತನ್ನ ಆಡುವ ಬಳಗವನ್ನು ಆಯ್ಕೆ ಮಾಡುವಲ್ಲಿ ಕೆಲ ಗೊಂದಲಗಳೂ ಇವೆ. 5ನೇ ಕ್ರಮಾಂಕದಲ್ಲಿ ಆಡಲಿರುವ ವಿಕೆಟ್ ಕೀಪರ್ ಸ್ಥಾನಕ್ಕೆ ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ರಿಷಭ್ ಪಂತ್ ನಡುವೆ ಪೈಪೋಟಿಯಿದೆ. ಕಳೆದ ಏಕದಿನ ವಿಶ್ವಕಪ್‌ನಲ್ಲಿ ಸ್ಥಾನ ಗಿಟ್ಟಿಸಿ, ಮಿಂಚಿದ್ದ ರಾಹುಲ್‌ಗೆ ಆಯ್ಕೆ ಸಮಿತಿ ಮಣೆ ಹಾಕುವ ಸಾಧ್ಯತೆಯಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ರಾಹುಲ್ ಮೊದಲ ಆಯ್ಕೆಯ ಕೀಪರ್ ಎನ್ನಲಾಗಿದೆ.
ಆಟಗಾರರ ಅಭ್ಯಾಸದ ವೇಳೆ ರಾಹುಲ್ ಬ್ಯಾಟಿಂಗ್ ಜತೆಗೆ ಕೀಪಿಂಗ್ ಅಭ್ಯಾಸ ಕೂಡ ನಡೆಸಿದ್ದರು. ಹೀಗಾಗಿ ಅವರು ಇಂದು ಗ್ಲೌಸ್ ತೊಡುವುದು ಖಚಿತ ಎನ್ನಲಡ್ಡಿಯಿಲ್ಲ. ಕೋಚ್ ಗಂಭೀರ್‌ಗೂ ರಾಹುಲ್ ಮೇಲೆ ಒಲವಿದೆ. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಪಂತ್ ಬೇಜವಾಬ್ದಾರಿ ಬ್ಯಾಟಿಂಗ್ ನಡೆಸಿ ಟೀಕೆಗೆ ಗುರಿಯಾಗಿದ್ದರು.
ಮೊಹಮದ್ ಶಮಿ ಹಾಗೂ ಕುಲ್ದೀಪ್ ಯಾದವ್ ಏಕದಿನಕ್ಕೆ ಮರಳಲು ಸಜ್ಜಾಗಿದ್ದಾರೆ. ಇವರಿಬ್ಬರೂ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡದ ಪ್ರಮುಖ ಆಟಗಾರರಾಗಿದ್ದು, ಲಯ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ IND vs ENG: ಮೊದಲನೇ ಏಕದಿನ ಪಂದ್ಯಕ್ಕೆ ಇಂಗ್ಲೆಂಡ್ ಪ್ಲೇಯಿಂಗ್ XI ಪ್ರಕಟ!
ಇಂಗ್ಲೆಂಡ್ ತಂಡ ಭಾರತದಲ್ಲಿ 41 ವರ್ಷ ಬಳಿಕ ಏಕದಿನ ಸರಣಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಇಂಗ್ಲೆಂಡ್ ತಂಡ 1984-85ರಲ್ಲಿ ಭಾರತದಲ್ಲಿ ನಡೆದ ಸರಣಿಯಲ್ಲಿ 4-1 ಗೆಲುವು ಸಾಧಿಸಿತ್ತು. ಆ ಬಳಿಕ ಒಮ್ಮೆಯೂ ಸರಣಿ ಗೆದ್ದಿಲ್ಲ.
New threads 🧵
— BCCI (@BCCI) February 5, 2025
...And with that - Bright Smiles 😁💙#TeamIndia | #INDvENG | @IDFCFIRSTBank pic.twitter.com/Sgs1gG7rvf
ಪಿಚ್ ರಿಪೋರ್ಟ್
ನಾಗ್ಪುರ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ರಾತ್ರಿ ವೇಳೆ ಮಂಜು ಬೀಳುವ ಕಾರಣ ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಮಂಜು ಇಲ್ಲದಿದ್ದರೆ ಪಂದ್ಯ ಸಾಗಿದಂತೆ ಪಿಚ್ ನಿಧಾನಗತಿ ವರ್ತಿಸಲಿದ್ದು, ಬ್ಯಾಟಿಂಗ್ ಕಷ್ಟವಾಗಲೂಬಹುದು.
ಭಾರತ ಸಂಭಾವ್ಯ ತಂಡ
ರೋಹಿತ್(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್,ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.