ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

1990s Movie: ಫೆ.28 ರಂದು ತೆರೆಗೆ ಬರಲಿದೆ ನಂದಕುಮಾರ್ ಸಿ.ಎಂ. ನಿರ್ದೇಶನದ ʼ1990sʼ ಚಿತ್ರ

1990s Movie: ನಂದಕುಮಾರ್ ಸಿ.ಎಂ. ನಿರ್ದೇಶಿಸಿರುವ ಹಾಗೂ ಅರುಣ್ - ರಾಣಿ ವರದ್ ನಾಯಕ, ನಾಯಕಿಯಾಗಿ ನಟಿಸಿರುವ ʼ1990sʼ ಸಿನಿಮಾ ಫೆಬ್ರವರಿ 28 ರಂದು ಬಿಡುಗಡೆಯಗುತ್ತಿದೆ. ಈಗಾಗಲೇ ಮಹಾರಾಜ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಚಿತ್ರದ ಹಾಡುಗಳಿಗೆ ಮೆಚ್ಚುಗೆ ದೊರಕಿದೆ. ಈ ಕುರಿತ ವಿವರ ಇಲ್ಲಿದೆ.

ಫೆ.28 ರಂದು ತೆರೆಗೆ ಬರಲಿದೆ ನಂದಕುಮಾರ್ ಸಿ.ಎಂ. ನಿರ್ದೇಶನದ ʼ1990sʼ ಚಿತ್ರ

Profile Siddalinga Swamy Feb 24, 2025 5:39 PM

ಬೆಂಗಳೂರು: ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ ಸಿ.ಎಂ. ನಿರ್ದೇಶಿಸಿರುವ ಹಾಗೂ ಅರುಣ್ - ರಾಣಿ ವರದ್ ನಾಯಕ, ನಾಯಕಿಯಾಗಿ ನಟಿಸಿರುವ ʼ1990sʼ ಸಿನಿಮಾ (1990s Movie) ಈ ವಾರ (ಫೆಬ್ರವರಿ 28 ರಂದು) ಬಿಡುಗಡೆಯಗುತ್ತಿದೆ. ಈಗಾಗಲೇ ಮಹಾರಾಜ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಚಿತ್ರದ ಹಾಡುಗಳಿಗೆ ಮೆಚ್ಚುಗೆ ದೊರಕಿದೆ. 90ರ ಕಾಲಘಟ್ಟದ ಕಥೆಯ ಟೀಸರ್ ಹಾಗೂ ಟ್ರೇಲರ್ ಸಹ ಎಲ್ಲರಿಗೂ ಪ್ರಿಯವಾಗಿದೆ ಎನ್ನುತ್ತಾರೆ ನಿರ್ಮಾಪಕರಲ್ಲೊಬ್ಬರಾದ ಅರುಣ್. ಹಾಲೇಶ್ ಛಾಯಾಗ್ರಹಣ, ಕೃಷ್ಣ ಸಂಕಲನ, ಅಶೋಕ್ ಸಾಹಸ ನಿರ್ದೇಶನ ಹಾಗೂ ಸಾದಿಕ್ ಸರ್ದಾರ್ ನೃತ್ಯ ನಿರ್ದೇಶನ ʼ1990sʼ ಚಿತ್ರಕ್ಕಿದೆ.

ಹಲವು ವರ್ಷಗಳಿಂದ ಚಿತ್ರರಂಗದೊಂದಿಗೆ ಒಡನಾಟವಿರುವ ನನಗೆ ನಿರ್ದೇಶಕನಾಗಿ ಇದು ಚೊಚ್ಚಲ ಚಿತ್ರ. ಇದು 1990ರಲ್ಲಿ ನಡೆಯುವ ಪ್ರೇಮಕಥೆ. ಚಿತ್ರದ ಕಥೆ ನಡೆಯುವುದು ಈ ಕಾಲಘಟ್ಟದಲ್ಲಾದರೂ ನಾಯಕನ ಕಲ್ಪನೆ 35 ವರ್ಷಗಳ ಹಿಂದಿನದ್ದಾಗಿರುತ್ತದೆ. ಈವರೆಗೂ ಸಾಕಷ್ಟು ಪ್ರೇಮಕಥೆಗಳು ಬಂದಿವೆಯಾದರೂ ನಮ್ಮ ಚಿತ್ರದ ಕಥೆ ವಿಭಿನ್ನ. ಚಿತ್ರದಲ್ಲಿ 1990s ಭಾಗ 90% ಇರುತ್ತದೆ. ಮಿಕ್ಕ 10% ಮಾತ್ರ ಈ ಕಾಲಘಟ್ಟದ್ದು ಎಂದು ನಿರ್ದೇಶಕ ನಂದಕುಮಾರ್ ಸಿ.ಎಂ. ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Pinafore Dress Fashion 2025: ಮುಂಬರುವ ಸೀಸನ್‌ಗೆ ಈಗಲೇ ಲಗ್ಗೆ ಇಟ್ಟ ಪೈನಾಪೋರ್ ಔಟ್‌ಫಿಟ್ಸ್!

1990s ಚಿತ್ರದಲ್ಲಿ ಪ್ರೇಮಕಥೆಯೇ ಪ್ರಧಾನವಾದರೂ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದು ನಿರ್ದೇಶಕ ಸಿ.ಎಂ. ನಂದಕುಮಾರ್ ತಿಳಿಸಿದ್ದಾರೆ.