Saturday, 14th December 2024

ದಾದಾ ಫಾಲ್ಕೆ ಪ್ರಶಸ್ತಿ 2020 ಸಾಲಿನ ಪುರಸ್ಕೃತರ ಪಟ್ಟಿ ಘೋಷಣೆ

ನವದೆಹಲಿ: ಪ್ರತಿಷ್ಠಿತ ದಾದಾ ಫಾಲ್ಕೆ ಪ್ರಶಸ್ತಿ 2020 ಸಾಲಿನ ಪುರಸ್ಕೃತರ ಪಟ್ಟಿ ಘೋಷಣೆಯಾಗಿದೆ.

ದಕ್ಷಿಣ ಭಾರತದ ಪ್ರಸಿದ್ದ ನಟರಾದ ಅಜಿತ್‌ ಕುಮಾರ್‌, ಧನುಷ್‌, ಮೋಹನ್‌ಲಾ‌ಲ್, ನಾಗಾರ್ಜುನ ಹಾಗೂ ಕನ್ನಡದ ಹ್ಯಾಟ್ರಿಕ್‌ ಹೀರೊ ಶಿವರಾಜ್‌ ಕುಮಾರ್‌ ಮುಂತಾದವರು ಈ ಗೌರವಕ್ಕೆ ಭಾಜನರಾಗಿದ್ದಾರೆ.

ತಮಿಳು ಚಿತ್ರರಂಗದಲ್ಲಿ ಪ್ರಶಸ್ತಿಗೆ ಭಾಜನರಾದವರಿವರು, ಬಹುಮುಖ ನಟರಾಗಿ ಅಜಿತ್‌ ಕುಮಾರ್‌, ಉತ್ತಮ ನಟ ಧನುಷ್ (ಅಸುರನ್‌)‌, ಉತ್ತಮ ನಟಿ ಜ್ಯೋತಿಕಾ (ರಾತ್‌ಚಾಸಿ), ಉತ್ತಮ ನಿರ್ದೇಶಕ ಆರ್‌.ಪಾರ್ತಿಬನ್‌ (ಒತ್ತಾ ಸೆರೆಪ್ಪು ಸೈಜ್‌ 7), ಟೂ ಲೆಟ್‌ (ಉತ್ತಮ ಚಿತ್ರ), ಅನಿರುದ್ದ ರವಿಚಂದರ್‌ (ಉತ್ತಮ ಸಂಗೀತ ನಿರ್ದೇಶಕ).

ಮಲಯಾಳಂನಲ್ಲಿ ಬಹುಮುಖ ನಟರಾಗಿ ಮೋಹನ್‌ ಲಾಲ್‌, ಸೂರಜ್‌ ವೆಂಜರಮೂಡು (ಉತ್ತಮ ನಟ), ಪಾರ್ವತಿ ತಿರುವೊಟು (ಉತ್ತಮ ನಟಿ), ಮಧು ಸಿ ನಾರಾಯಣನ್‌ (ಉತ್ತಮ ನಿರ್ದೇಶಕ), ಉಯ್ಯಾರೆ (ಉತ್ತಮ ಚಿತ್ರ), ದೀಪಕ್ ದೇವ್‌ (ಸಂಗೀತ ನಿರ್ದೇಶಕ).

ತೆಲುಗು ಚಿತ್ರ ರಂಗದಲ್ಲಿ ಬಹುಮುಖ ನಟರಾಗಿ ನಾಗಾರ್ಜುನ ಅಕ್ಕಿನೇನಿ, ನವೀನ್‌ ಪೊಲಿಶೆಟ್ಟಿ (ಉತ್ತಮ ನಟ), ರಶ್ಮಿಕಾ ಮಂದಣ್ಣ (ಉತ್ತಮ ನಟಿ), ಉತ್ತಮ ನಿರ್ದೇಶಕನಾಗಿ ಸುಜೀತ್‌, ಉತ್ತಮ ಚಿತ್ರ ಜರ್ಸಿ, ಉತ್ತಮ ಸಂಗೀತ ನಿರ್ದೇಶಕರಾಗಿ ಎಸ್‌.ಥಾಮನ್‌ ಮತ್ತು

ಕನ್ನಡ ಚಿತ್ರರಂಗದಲ್ಲಿ ಬಹುಮುಖ ನಟರಾಗಿ ಶಿವರಾಜ್‌ ಕುಮಾರ್‌, ರಕ್ಷಿತ್‌ ಶೆಟ್ಟಿ -ಉತ್ತಮ ನಟ, ಉತ್ತಮ ನಟಿ ತನ್ನ ಹೋಪ್, ಉತ್ತಮ ನಿರ್ದೇಶಕ – ರಮೇಶ್‌ ಇಂದಿರಾ( ಪ್ರೀಮಿಯರ್‌ ಪದ್ಮಿನಿ), ಮೂಕಜ್ಜಿಉ ಕನಸುಗಳು- ಉತ್ತಮ ಚಿತ್ರ ಹಾಗೂ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಮುಂತಾದವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.