Wednesday, 11th December 2024

ಗೆಲುವಿನ ಸಿಹಿಯುಂಡ ‘ಡಿಜೆ ಟಿಲ್ಲು’ ಸಿನಿಮಾ

ಹೈದರಾಬಾದ್: ‘ಡಿಜೆ ಟಿಲ್ಲು’ ಸಿನಿಮಾ ರಿಲೀಸ್ ಆಗಿ ಗೆಲುವು ಕಂಡಿದೆ. ಮಾರ್ಚ್ 29ರಂದು ರಿಲೀಸ್ ಆಗಿರುವ ‘ಟಿಲ್ಲು ಸ್ಕ್ವೇರ್’ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ.

ಸ್ಟಾರ್ ಹೀರೋಗಳ ಜೊತೆ ಯುವ ಹೀರೋಗಳ ಸಿನಿಮಾಗಳೂ ಆಗಾಗ ಸದ್ದು ಮಾಡುತ್ತವೆ. ಇದಕ್ಕೆ ಹೊಸ ಸೇರ್ಪಡೆ ಡಿಜೆ ಟಿಲ್ಲು’ ಸಿನಿಮಾ. ಸಿದ್ದು ಜೊನ್ನಲ ಗಡ್ಡ ಹಾಗೂ ನಟಿ ಅನುಪಮಾ ಪರಮೇಶ್ವರನ್ ಒಟ್ಟಾಗಿ ಕಾಣಿಸಿಕೊಂಡಿರುವ ‘ಡಿಜೆ ಟಿಲ್ಲು’ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ.

ಈ ಮೂಲಕ ಸಿನಿಮಾ ದಾಖಲೆ ಬರೆದಿದೆ.

ದೊಡ್ಡ ಸ್ಟಾರ್ ಹೀರೋಗಳ ಸಿನಿಮಾಗಳು 100 ಕೋಟಿ ಕ್ಲಬ್ ಸೇರುವುದು ದೊಡ್ಡ ವಿಚಾರ ಅಲ್ಲ. ಆದರೆ, ಎರಡನೇ ಟಯರ್ ದರ್ಜೆಯ ಹೀರೋಗಳ ಸಿನಿಮಾ ಇಷ್ಟು ಮೊತ್ತದ ಕಲೆಕ್ಷನ್ ಮಾಡೋದು ಎಂದರೆ ನಿಜಕ್ಕೂ ದೊಡ್ಡ ವಿಚಾರ. ಸಿದ್ದು ಅವರು ‘ಟಿಲ್ಲು ಸ್ಕ್ವೇರ್’ ಮೂಲಕ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.