Friday, 13th December 2024

ಸ್ಯಾಂಡಲ್’ವುಡ್ ಹಿರಿಯ ನಟಿ ಭಾರ್ಗವಿ ನಾರಾಯಣ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಭಾರ್ಗವಿ ನಾರಾಯಣ( 84) ಅವರು ಸೋಮವಾರ ಸಂಜೆ ನಿಧನರಾದರು.

ಸ್ಯಾಂಡಲ್’ವುಡ್ ನ ಖ್ಯಾತ ನಟ, ನಟಿಯರೊಂದಿಗೆ ತೆರೆ ಹಂಚಿಕೊಂಡಿದ್ದ ಹಿರಿಯ ನಟಿ, ಇತ್ತೀಚೆಗೆ ನಿಧನರಾದ ಪುನೀತ್ ರಾಜಕುಮಾರ್ ಅವರ ರಾಜಕುಮಾರ್ ಹಾಗೂ ಇತರ ಖ್ಯಾತ ಚಿತ್ರಗಳಲ್ಲೂ ನಟಿಸಿದ್ದರು.

ಇವರ ಮಕ್ಕಳಾದ ಸುಧಾ ಬೆಳವಾಡಿ (ಸಿನೆಮಾ ಹಾಗೂ ಧಾರಾವಾಹಿ ನಟಿ), ಪ್ರಕಾಶ್ ಬೆಳವಾಡಿ ( ಹಿಂದಿ ಹಾಗೂ ಕನ್ನಡ ಚಿತ್ರರಂಗ) ಹಾಗೂ ಮೊಮ್ಮಗಳು ಸಂಯುಕ್ತಾ ಹೊರನಾಡು ಅವರು ಕೂಡ ನಟಿ..

ಹಿರಿಯ ನಟಿಯ ನಿಧನಕ್ಕೆ ಕನ್ನಡ ಚಿತ್ರರಂಗವು ಸಂತಾಪ ಸೂಚಿಸಿದೆ.