The Devil Teaser : ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬಕೆ ಬಿಗ್ ಗಿಫ್ಟ್; ದಿ ಡೆವಿಲ್ ಸಿನಿಮಾ ಟೀಸರ್ ಔಟ್
ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ದೊರೆಕಿದ್ದು, ದಿ ಡೆವಿಲ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಡೆವಿಲ್ ಸಿನಿಮಾ ತಂಡ ಈ ಮೂಲಕ ದರ್ಶನ್ ಹುಟ್ಟು ಹಬ್ಬಕ್ಕೆ ದೊಡ್ಡ ಉಡುಗೊರೆಯನ್ನೇ ನೀಡಿದೆ. ದರ್ಶನ್ ಲುಕ್, ಆ್ಯಕ್ಷನ್, ಫೈಟಿಂಗ್ ಸೀನ್, ಮ್ಯೂಸಿಕ್ ಎಲ್ಲವೂ ಮಸ್ತ್ ಅಂತಿದ್ದಾರೆ ಫ್ಯಾನ್ಸ್.

ದಿ ಡೆವಿಲ್ ಟೀಸರ್ ಬಿಡುಗಡೆ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Start Darshan) ಅವರಿಗೆ ಇಂದು ಜನ್ಮದಿನದ ಸಂಭ್ರಮ. ಅನಾರೋಗ್ಯದ ಕಾರಣದಿಂದಾಗಿ ಅವರು ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸುತ್ತಿಲ್ಲ. ಸ್ವತಃ ದರ್ಶನ್ ಅವರೇ ಕೆಲ ದಿನಗಳ ಹಿಂದೆ ಈ ಬಗ್ಗೆ ಮಾಹಿತಿ ನೀಡಿದ್ದರು. ಇದರಿಂದ ಅಭಿಮಾನಿಗಳಿಗೆ ಭಾರೀ ನಿರಾಸೆ ಉಂಟಾಗಿತ್ತು. ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ದೊರೆಕಿದ್ದು, ದಿ ಡೆವಿಲ್ (The Devil Teaser) ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಡೆವಿಲ್ ಸಿನಿಮಾ ತಂಡ ಈ ಮೂಲಕ ದರ್ಶನ್ ಹುಟ್ಟು ಹಬ್ಬಕ್ಕೆ ದೊಡ್ಡ ಉಡುಗೊರೆಯನ್ನೇ ನೀಡಿದೆ.
ಇತ್ತೀಚೆಗೆ ದರ್ಶನ್ ಜೈಲಿನಿಂದ ಬಿಡುಗಡೆಯಾಗಿ ಬಂದರ ನಂತರ ಡೆವಿಲ್ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಇದೀಗ ಚಿತ್ರ ತಂಡ ಎಲ್ಲದಕ್ಕೂ ಉತ್ತರ ನೀಡಿದೆ. ದರ್ಶನ್ ಹುಟ್ಟು ಹಬ್ಬದ ಪ್ರಯುಕ್ತ ಇಂದು ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್‌ನಲ್ಲಿ ನಟ ದರ್ಶನ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ಇರುವ ಮ್ಯೂಸಿಕ್ ಕೂಡ ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ. ದರ್ಶನ್ ಲುಕ್, ಆ್ಯಕ್ಷನ್, ಫೈಟಿಂಗ್ ಸೀನ್, ಮ್ಯೂಸಿಕ್ ಎಲ್ಲವೂ ಮಸ್ತ್ ಅಂತಿದ್ದಾರೆ ಫ್ಯಾನ್ಸ್.
ಕಾಟೇರ ಸಿನಿಮಾದ ದೊಡ್ಡ ಯಶಸ್ಸಿನ ನಂತರ ದರ್ಶನ್ ಡೆವಿಲ್ ಚಿತ್ರಕ್ಕೆ ಕೈ ಹಾಕಿದ್ದಾರೆ. ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಿರೀಕ್ಷೆಗೆ ತಕ್ಕಂತೆ ಟೀಸರ್ ಕೂಡ ಇದೆ. ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಚಾಲೆಂಜ್ ಎಂಬ ಡೈಲಾಗ್ ಬಿಟ್ಟರೆ ಬೇರೆ ಯಾವುದೇ ಡೈಲಾಗ್‌ಗಳನ್ನು ತೋರಿಸಲಾಗಿಲ್ಲ. ಚಿತ್ರವನ್ನು ಮಿಲನ ಪ್ರಕಾಶ್ ಅವರು ನಿರ್ದೇಶನ ಮಾಡುತ್ತಿದ್ದು, ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತವಿರಲಿದೆ. ಸದ್ಯ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಟೀಸರ್ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.
ಈ ಸುದ್ದಿಯನ್ನೂ ಓದಿ: Sanam Teri Kasam: ಅಂದು ಫ್ಲಾಪ್ ಇಂದು ಮೆಗಾ ಹಿಟ್; ಬರೋಬ್ಬರಿ 9 ವರ್ಷಗಳ ಬಳಿಕ ರೀ ರಿಲೀಸ್ ಆದ ಸಿನಿಮಾ ಗಳಿಸಿದೆಷ್ಟು?
ಸದ್ಯ ವರ್ಷಕ್ಕೆ ಎರಡು ಚಿತ್ರಗಳನ್ನು ಮಾಡುತ್ತಿರುವ ದರ್ಶನ್ ಕಳೆದ ಬಾರಿ ಕ್ರಾಂತಿ ಹಾಗೂ ಕಾಟೇರದ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಆದರೆ ಈ ಬಾರಿ ಕೊಲೆ ಪ್ರಕರಣದ ಮೇಲೆ ಇಷ್ಟು ದಿನ ಜೈಲಿನಲ್ಲಿದ್ದರು. ಈ ಬಾರಿಯೂ ಡೆವಿಲ್ ಜೊತೆಗೆ ಮತ್ತೊಂದು ಸಿನಿಮಾ ಮಾಡುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಎದುರಾಗಿತ್ತು. ಇದಕ್ಕೆ ಹಿಂಟ್ ಎನ್ನುವಂತೆ ಪ್ರೇಮ್ ಜೊತೆ ಸಿನಿಮಾ ಮಾಡುವ ಬಗ್ಗೆ ದರ್ಶನ್ ಮಾತನಾಡಿದ್ದರು. ಆದರೆ ಈ ಬಗ್ಗೆ ಎಲ್ಲಿಯೂ ಅಧಿಕೃತವಾದ ಮಾಹಿತಿ ಹೊರ ಬಿದ್ದಿಲ್ಲ.