Friday, 13th December 2024

ಕಾಫಿಗೆ ಕರೋನಾ ತಂದ ಆಪತ್ತು

ಇಂದು ಆರನೇ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ

ವಿಶ್ವವ್ಯಾಪಿ ಕಪ್ಪು ಸುಂದರಿಗೆ ಸಂಕಷ್ಟದ ದಿನಗಳಿವು

ಅರೇಬಿಕಾ ಮತ್ತು ರೋಬಸ್ಟಾ ಎಂಬ ಎರಡು ತಳಿಗಳಲ್ಲಿ ಬೆಳಸಲಾಗುವ ಕಾಫಿಯನ್ನು ಭಾರತದಲ್ಲಿ 3.46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.

ಭಾರತದ ಕಾಫಿ ವಹಿವಾಟು ವಾರ್ಷಿಕ 3.25 ಲಕ್ಷ ಮೆಟ್ರಿಕ್ ಟನ್‌ಗಳಷ್ಟಿದೆ.

ವಿಶ್ವದಲ್ಲಿ ತೈಲ ಬಿಟ್ಟರೆ ಅತ್ಯಧಿಕ ವಹಿವಾಟು ನಡೆಯುವುದು ಕಾಫಿ ಉದ್ಯಮದಲ್ಲಿಯೇ.

ನೀರು ಬಿಟ್ಟರೆ ಕಾಫಿಯನ್ನೇ ಹೆಚ್ಚಾಗಿ ಜಾಗತಿಕ ಮಟ್ಟದಲ್ಲಿ ಜನ ಸೇವಿಸುತ್ತಾರೆ ಎಂಬುದೂ ಕಾಫಿಯ ಹೆಗ್ಗಳಿಕೆ.

ಜಗತ್ತಿನ 84 ದೇಶಗಳಲ್ಲಿ ಕಾಫಿ ಬೆಳೆಸಲಾಗುತ್ತಿದ್ದು, 600 ಮಿಲಿಯನ್ ಮಂದಿ ಕಾಫಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಜಗತ್ತಿನ ಜನಸಂಖ್ಯೆಯ ಶೇ.10 ರಷ್ಟು ಮಂದಿ ಕಾಪಿ ಉದ್ಯಮದಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಸಕ್ರಿಯರಾಗಿದ್ದಾರೆ.

ಪ್ರತಿನಿತ್ಯ ಜಗತ್ತಿನಾದ್ಯಂತ 235 ಬಿಲಿಯನ್ ಲೋಟದಷ್ಟು ಕಾಫಿ ಸೇವನೆಯಾಗುತ್ತಿದ್ದು, ಪ್ರತಿ ಗಂಟೆಗೆ 93,75,000 ಲೋಟಗಳಷ್ಟು
ಕಾಫಿಯನ್ನು ವಿಶ್ವವ್ಯಾಪಿ ಸೇವಿಸಲಾಗುತ್ತಿದೆ.

ಯುರೋಪ್‌ನ ಫಿನ್‌ಲ್ಯಾಂಡ್ ನಲ್ಲಿ ಪ್ರತಿ ವ್ಯಕ್ತಿ ವಾರ್ಷಿಕ 12 ಕಿಲೋ ಕಾಫಿ ಸೇವಿಸುವ ಮೂಲಕ ಜಗತ್ತಿನಲ್ಲಿಯೇ ಅತ್ಯಧಿಕ ಕಾಫಿ
ಬಳಕೆದಾರ ದೇಶ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಭಾರತ ಮೊದಲಿನಿಂದಲೂ ಚಹಾ ಪ್ರಿಯದೇಶವಾಗಿತ್ತು. ಆದರೆ 1970 ರ ನಂತರ ದೇಶದಲ್ಲಿ ಕಾಫಿ ಜನಪ್ರಿಯವಾಗತೊಡಗಿತು. ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ಕಾಫಿ ಸೇವಿಸುವವರ ಸಂಖ್ಯೆ ಹೆಚ್ಚಾಗತೊಡಗಿದ್ದು, ಕಾಫಿಯ ಪ್ರಗತಿಗೆ ಕಾರಣವಾಯಿತು. ಯಾವಾಗ ಫಿಲ್ಟರ್ ಕಾಫಿ ಪರಿಚಿತವಾಯಿತೋ ಕಾಫಿಯ ಸ್ವಾದ ಮತ್ತಷ್ಟು ಹೆಚ್ಚಾಯಿತು.

ಭಾರತದಲ್ಲಿ ನಿತ್ಯ 150 ಲಕ್ಷ ಟನ್ ಹಾಲು ಉತ್ಪಾದನೆಯಾಗುತ್ತಿದೆ. ಉತ್ತರ ಭಾರತದ ಬಹುತೇಕ ಗ್ರಾಮಗಳಲ್ಲಿ ಹಾಲು ಸೇವಿಸು ವವರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಕಾಫಿಗೆ ಹಾಲು ಕೂಡ ಶತ್ರುವಾಗಿ ಪರಿಣಮಿಸಿದೆ. ಭಾರತದಲ್ಲಿ ಶೇ.73ರಷ್ಟು ಮಂದಿ ಕಾಫಿ ಸೇವಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಶೇ.27 ಕಾಫಿ ಸೇವಿಸುವವರು ಇದ್ದಾರೆ.

ಜಗತ್ತಿನಲ್ಲಿ ಕಾಫಿ ಉತ್ಪಾದನೆಯಲ್ಲಿ 7 ನೇ ಸ್ಥಾನದಲ್ಲಿರುವ ಭಾರತವು ಕಾಫಿ ಸೇವಿಸುವವರ ಸಂಖ್ಯೆಯಲ್ಲಿ 6 ನೇ ಸ್ಥಾನದಲ್ಲಿದೆ.

ಹೀಗಿದ್ದರೂ ಭಾರತದಲ್ಲಿ ಬೆಳೆಸಲಾಗುವ ವಾರ್ಷಿಕ 3.20 ಮೆಟ್ರಿಕ್ ಟನ್ ಕಾಫಿ ಪೈಕಿ 70 ಸಾವಿರ ಮೆಟ್ರಿಕ್ ಟನ್‌ಗಳಷ್ಟು ಮಾತ್ರ
ಆಂತರಿಕ ಬಳಕೆಗೆ ಉಪಯೋಗಿಸಲ್ಪಡುತ್ತಿದೆ. ಉಳಿದ ಕಾಫಿಯನ್ನು ವಿದೇಶೀ ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡುವ ಅನಿವಾರ್ಯತೆಯಿದೆ.

ಭಾರತೀಯ ಕಾಫಿ ಗುಣಮಟ್ಟದಲ್ಲಿ, ಸ್ವಾದದಲ್ಲಿ ಉತ್ತಮ ಹೆಸರು ಪಡೆದಿದ್ದರೂ ವಹಿವಾಟಿನ ವಿಚಾರ ಪರಿಗಣಿಸಿದಾಗ ಇಂದಿಗೂ ಜಾಗತಿಕ ಮಾರುಕಟ್ಟೆಯನ್ನೇ ಇದು ಅವಲಂಭಿಸಬೇಕಾದ ದುರ್ದೈವವಿದೆ.

ಅಂತಾರಾಷ್ಟ್ರೀಯ ಕಾಫಿ ಮಾರುಕಟ್ಟೆಯಲ್ಲಿ ಯಾವ ದರ ಇದೆಯೋ, ಇದೇ ಭಾರತದ ಕಾಫಿ ಬೆಳೆಗಾರನಿಗೂ ದೊರಕುತ್ತದೆ.

ಐಷಾರಾಮಿ ಶಾಪ್‌ನಲ್ಲಿ ಕಾಫಿ ಸೇವನೆಯ ಗಮ್ಮತ್ತು!

ಶ್ರೀಮಂತರ ಪಾನೀಯ ಎಂಬ ಹೆಗ್ಗಳಿಕೆಯೊಂದಿಗೆ ಆರೋಗ್ಯಕ್ಕೂ ಕಾಫಿ ಹಿತಕರ ಎಂಬುದೂ ಕಾಫಿಗಿರುವ ಗುಣಾತ್ಮಕ ಅಂಶಗಳು.

71% ಕಾಫಿ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಸ್ವಾದಿಷ್ಟ ಪೇಯವಾಗಿ ವಿಶ್ವದಾದ್ಯಂತ ಖ್ಯಾತವಾಗಿರುವ ಕಾಫಿಗೆ ಇಂದು ವಿಶೇಷ ದಿನ. ಅಕ್ಟೋಬರ್ 1 ನ್ನು ಜಾಗತಿಕವಾಗಿ ಕಾಫಿ ದಿನವನ್ನಾಗಿ ಆಚರಿಸುವ ಸಂಭ್ರಮ. ಯಾವುದೇ ಪಾನೀಯಕ್ಕೆ ಸಿಗದ ಮಾನ್ಯತೆ ಕಾಫಿಗೆ ದೊರಕಿರುವುದು ಕಾಫಿಗೆ ಇರುವ ಪ್ರತಿಷ್ಟೆಯೂ ಹೌದು.

ಲಕ್ಷಾಂತರ ಕೃಷಿಕರ ಪಾಲಿಗೆ ಜೀವನ ಮಾರ್ಗವಾಗಿರುವ ಕಾಫಿ ಕರ್ನಾಟಕದ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ
ಪ್ರಮುಖ ಬೆಳೆಯಾಗಿದೆ. ಭಾರತದ ಕಾಫಿ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ.71 ರಷ್ಟಿದೆ. ಉಳಿದಂತೆ ಕೇರಳ, ತಮಿಳು ನಾಡು, ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಕಾಫಿ ಬೆಳೆಯಲಾಗುತ್ತಿದೆ.

ಕಾಫಿ ಭಾರತಕ್ಕೆ ಹೇಗೆ ಬಂತು? ಅರಬ್‌ನಲ್ಲಿ ದೊರಕಿದ 7 ಕಾಫಿ ಬೀಜಗಳನ್ನು ತನ್ನ ಗಡ್ಡದಲ್ಲಿ ಅಡಗಿಸಿಕೊಂಡು ಭಾರತಕ್ಕೆ ತಂದು
ಚಿಕ್ಕಮಗಳೂರಿನ ಚಂದ್ರಗಿರಿ ಬೆಟ್ಟದಲ್ಲಿ 1,840 ರಲ್ಲಿ ಬಾಬಾ ಬುಡನ್ ಎಂಬ ಸಂತ ನೆಟ್ಟಿದ್ದರು. ಅಲ್ಲಿಂದೀಚಿಗೆ ಭಾರತದಲ್ಲಿ ಕಾಫಿ ಕೃಷಿ ಪ್ರಾರಂಭವಾಯಿತು ಎಂಬ ದಾಖಲೆಗಳಿದೆ.