Sunday, 19th May 2024

ಲೆಫ್ಟಿನೆಂಟ್‌ ಕರ್ನಲ್‌ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ಕರ್ನಲ್‌ ಆಗಿ ಬಡ್ತಿ

ವದೆಹಲಿ: ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್‌ ಕರ್ನಲ್‌ ಆಗಿ ಸೇವೆ ಸಲ್ಲಿಸುತ್ತಿರುವ ಮಹಿಳೆಯ ರಿಗೆ ಕರ್ನಲ್‌ ಆಗಿ ಬಡ್ತಿ ನೀಡುವ ಕೆಲಸವನ್ನು ಇದೀಗ ಭಾರತೀಯ ಸೇನೆ ಮಾಡುತ್ತಿದೆ. ಒಟ್ಟಾರೆ ಯಾಗಿ 108 ಮಹಿಳೆಯರನ್ನು ಕರ್ನಲ್‌ ಆಗಿ ಬಡ್ತಿ ನೀಡಲಾಗುತ್ತಿದೆ.

1992ರಿಂದ 2006ನೇ ಬ್ಯಾಚಿನ ಮಹಿಳಾ ಅಧಿಕಾರಿಗಳಿಗೆ ಈ ಬಡ್ತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಸೇನೆಯ ವಿವಿಧ ಶಸ್ತ್ರಾಸ್ತ್ರ ಮತ್ತು ಸೇವೆಗಳಲ್ಲಿ (ಎಂಜಿನಿಯರ್ಸ್, ಸಿಗ್ನಲ್‌ಗಳು, ಆರ್ಮಿ ಏರ್ ಡಿಫೆನ್ಸ್, ಇಂಟೆಲಿಜೆನ್ಸ್ ಕಾರ್ಪ್ಸ್, ಆರ್ಮಿ ಸರ್ವಿಸ್ ಕಾರ್ಪ್ಸ್, ಆರ್ಮಿ ಆರ್ಡನೆನ್ಸ್‌ ಕಾರ್ಪ್ಸ್, ಎಲೆಕ್ಟ್ರಿಕಲ್‌ ಆಂಡ್‌ ಮೆಕಾನಿಕಲ್‌ ಎಂಜಿನಿಯರ್ಸ್) ಬಡ್ತಿ ನಡೆಯುತ್ತಿದೆ. ಪ್ರತಿ ಮಹಿಳಾ ಅಧಿಕಾರಿಗೆ ಈ ಪ್ರಕ್ರಿಯೆಯಲ್ಲಿ ಮೂರು ಹಂತದಲ್ಲಿ ಬಡ್ತಿ ಪಡೆಯುವುದಕ್ಕೆ ಅವಕಾಶವಿದೆ.

ಆಯ್ಕೆ ಮಂಡಳಿಯಿಂದ ʼಫಿಟ್‌ʼ ಎಂದು ಘೋಷಿಸಲ್ಪಡುವ 108 ಮಹಿಳಾ ಅಧಿಕಾರಿಗಳನ್ನು ವಿವಿಧ ಕಮಾಂಡ್ ಅಸೈನ್‌ಮೆಂಟ್‌ಗಳಲ್ಲಿ ನಿಯೋಜಿಸಲಾಗುವುದು. ನೇಮಕಾತಿಗಳ ಮೊದಲ ಸೆಟ್ ಅನ್ನು ಜನವರಿ 2023 ರ ಅಂತ್ಯದ ವೇಳೆಗೆ ನೀಡಲಾಗುವುದು. ಕರ್ನಲ್‌ ಆಗುವ ಅಧಿಕಾರಿಗಳು ತಮ್ಮ ತಂಡಗಳನ್ನು ಮುನ್ನಡೆಸುವ ಜವಾಬ್ದಾರಿ ಹೊಂದಿರಲಿದ್ದಾರೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

108 ಕರ್ನಲ್‌ ಪೋಸ್ಟ್‌ಗಳು ಖಾಲಿಯಿದ್ದು, ಅದಕ್ಕೆಂದು 244 ಮಹಿಳಾ ಅಧಿಕಾರಿಗಳು ಬಡ್ತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.

 

error: Content is protected !!