Monday, 20th May 2024

ಕೊರೋನಾ ಮತ ಕೇಳಲು ನಿಮ್ಮ ಮನೆ ಬಾಗಿಲಿಗೆ ಬಂದರೆ ಹೇಗನ್ನಿಸಬೇಡ !

ಕೊಲ್ಲಂ (ಕೇರಳ): ಪ್ರಿಯ ಓದುಗರೇ, ಕೊರೋನಾ, ಕೋವಿಡ್ ಮಾರಿ ಕುರಿತು ಕೇಳಿದರೆ ಬೆಚ್ಚಿ ಬೀಳುವುದು, ಕೂಡಲೇ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮುಂತಾದವು ಎಲ್ಲೆಡೆಯೂ ಸಂಭವಿಸುತ್ತಿದೆ. ಆದರೆ, ಕೊರೋನಾ ಎಂದು ಹೇಳಿಕೊಂಡು ಮತ ಕೇಳಲು ನಿಮ್ಮ ಮನೆ ಬಾಗಿಲಿಗೆ ಬಂದರೆ ಹೇಗನ್ನಿಸಬೇಡ !

ಇಂಥ ಒಂದು ಘಟನೆ ದಕ್ಷಿಣ ಭಾರತದ ಕೇರಳ ರಾಜ್ಯದ ಕೊಲ್ಲಂ ಎಂಬಲ್ಲಿ ಬೆಳಕಿಗೆ ಬಂದಿದೆ. ಅದು ಸ್ಥಳೀಯ ಚುನಾವಣೆ ಪ್ರಚಾರದ ವೇಳೆ. ಏನೆಂದರೆ, ಕೊರೋನಾ ಥಾಮಸ್ ಎಂಬಾಕೆ ಸ್ಥಳೀಯ ಚುನಾವಣೆಗೆ ಬಿಜೆಪಿ ಪಕ್ಷದಿಂದ ಸ್ಫರ್ಧೆಗೆ ಇಳಿದಿದ್ದು, ಮತ ಯಾಚನೆಯಲ್ಲಿ ತೊಡಗಿದ್ದಾರೆ. ಈಕೆ ಕೊಲ್ಲಂ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮಥಿಲಿಲ್ ಕ್ಷೇತ್ರದಿಂದ ಚುನಾವಣೆಗೆ ಸ್ಫರ್ಧಿಸುತ್ತಿದ್ದಾರೆ.

ಅದು ಬೇರ‍್ಯಾರೂ ಅಲ್ಲ. ಹೆಸರು ಕೊರೋನಾ ಥಾಮಸ್‌. ವಯಸ್ಸು ೨೪. ಕಳೆದ ಅಕ್ಟೋಬರ್‌ ತಿಂಗಳಲ್ಲಿ ಕೋವಿಡ್ ಮಹಾ ಮಾರಿಗೆ ಈಕೆಯ ಕುಟುಂಬ ತತ್ತರಿಸಿದ ಸಂದರ್ಭ, ಮಗುವಿಗೆ ಜನ್ಮವಿತ್ತರು. ಇಬ್ಬರು ಸದ್ಯ ಆರೋಗ್ಯವಾಗಿದ್ದಾರೆ. ಈ ವೇಳೆಯಲ್ಲಿ ಕೊರೋನಾ ಥಾಮಸ್‌ ಹೆಸರು ಬೆಳಕಿಗೆ ಬಂದಿದೆ. ಅಂದ ಹಾಗೆ, ಕೊರೋನಾ ಥಾಮಸ್ ಪರಿ ಜಿನು ಸುರೇಶ್ ಸಕ್ರಿಯ ಬಿಜೆಪಿ ಕಾರ್ಯಕರ್ತರು ಕೂಡ ಹೌದು.

ಚುನಾವಣೆಗೆ ಸ್ಫರ್ಧಿಸುವ ಕುರಿತಂತೆ, ಕೊರೋನಾ ಥಾಮಸ್ ಅವರು, ಮೊದಲಿನಿಂದಲೂ ರಾಜಕೀಯದಲ್ಲಿ ನಿರಾಸಕ್ತಿ ಇತ್ತು. ಹೆರಿಗೆ ಆಗಿ ಗಂಡನ ಮನೆಗೆ ಬಂದ ಬಳಿಕ, ರಾಜಕೀಯದಲ್ಲಿ ಆಸಕ್ತಿ ಬಂದಿದೆ. ಈ ವಿಚಾರದಲ್ಲಿ ಪತಿಯ ಕುಟುಂಬದವರಿಂದಲೂ ಪ್ರೋತ್ಸಾಹ ದೊರಕುತ್ತಿದೆ. ಚುನಾವಣೆ ಪ್ರಚಾರ ಕೈಗೊಳ್ಳಲು ಯಾವುದೇ ತೊಂದರೆ ಆಗುತ್ತಿಲ್ಲ ಎಂದು ಕೊರೋನಾ ಥಾಮಸ್ ಹೇಳಿಕೆ ನೀಡಿದ್ದಾರೆ.

ಪ್ರಚಾರಕ್ಕೆ ತೆರಳಿದ ಸಂದರ್ಭ, ಹಲವಾರು ರೀತಿಯ ಪ್ರತಿಕ್ರಿಯೆ ಬಂದಿದೆ. ಆರಂಭದಲ್ಲಿ ಕೊರೋನಾ ಕೇಳಿದಾಗಲೇ ಆಘಾತ ಕ್ಕೀಡಾದವರು, ತಮಾಷೆತೂ ಮಾಡಿದ್ದಾರೆ. ಪ್ರಚಾರಕ್ಕಾಗಿಯೇ ಹೆಸರು ಬದಲಾಯಿಸಿಕೊಂಡಿದ್ದೀರಾ ಎಂದು ಪ್ರಶ್ನಿಸಿದವರಿದ್ದಾರೆ. ಇದಕ್ಕೆ ಮುಗುಳ್ನಗುವ ಕೊರೋನಾ ಥಾಮಸ್, ನಿಮಗೆ ಕೊರೋನಾ ಮಾಹಾಮಾರಿ ಬಗ್ಗೆ ಕಳೆದ ಎಂಟು ತಿಂಗಳ ಹಿಂದಷ್ಟೇ ತಿಳಿದಿರಬಹುದು. ಆದರೆ, ನನ್ನ ತಂದೆ ನನಗೆ ಈ ಹೆಸರನ್ನು ೨೪ ವರ್ಷ ಹಿಂದೆಯೇ ಇಟ್ಟಿದ್ದಾರೆ ಎಂದು ಉತ್ತರಿಸುತ್ತಾರೆ.

ಕೊರೋನಾ ಥಾಮಸ್ ತಂದೆ ಥಾಮಸ್ ಮ್ಯಾಥ್ಯೂ. ಅವರಿಗೆ ಇಬ್ಬರು ಮಕ್ಕಳು. ಕೋರಲ್ ಹಾಗೂ ಕೊರೋನಾ. ಕೊರೋನಾಳಿ ಗಿಂತ ಕೋರಲ್ ಕೇವಲ ೨೦ ನಿಮಿಷ ಹಿರಿಯ. ಪುತ್ರನಿಗೆ ಕೋರಲ್ ಎಂದು ನಾಮಕರಣ ಮಾಡಿದಾಗ, ಎರಡನೇಯಳಿಗೆ ರೈಮಿಂಗ್ ಶಬ್ದ ಬರುವಂತಹ ಹೆಸರು ಇಡಬೇಕೆಂದು ನಿರ್ಧರಿಸಿದ್ದರಂತೆ. ಕೊರೋನಾ ಎಂದರೆ, ದೀಪಗಳ ವೃತ್ತ ಎಂದರ್ಥ.

ಹೀಗಿದೆ ನೋಡಿ, ಕೇರಳದ ಕೊಲ್ಲಂನ ಕೊರೋನಾ ಕಥೆ.

 

 

Leave a Reply

Your email address will not be published. Required fields are marked *

error: Content is protected !!