Saturday, 14th December 2024

ಜೈ ಶ್ರೀ ರಾಮ್ ಕೂಗಿದ್ದಕ್ಕೆ ಹಲ್ಲೆ: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಡಾರ್ಜಿಲಿಂಗ್‌: ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದಾರೆ.

ಈ ಹಿನ್ನಲೆ ಸಿಲಿಗುರಿಯ ಮಟಿಗರ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರು 12 ಗಂಟೆಗಳ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಪ್ರತಿಭಟನಾಕಾರರು ಎನ್‌ಎಚ್-31 ರಸ್ತೆಯನ್ನು ಗಂಟೆಗಳ ಕಾಲ ತಡೆದರು. ಅಲ್ಲದೇ, ಮಟಿಗಾರ ಪೊಲೀಸ್ ಠಾಣೆ ಎದುರು ಟೈರ್‌ಗಳನ್ನು ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಟಿಎಂಸಿ ಕಾರ್ಯಕರ್ತರ ದಾಳಿಯನ್ನು ಬಿಜೆಪಿ ಕಾರ್ಯಕರ್ತ ನಂದ ಕಿಶೋರ್ ಠಾಕೂರ್ ವಿವರಿಸಿದ್ದು, ಏ.26 ರಂದು ಮತದಾನದ ನಂತರ ನಾವು ಮನೆಗೆ ಹೋಗುವಾಗ ಬಿಜೆಪಿಯನ್ನು ಬೆಂಬಲಿಸಿದ್ದಕ್ಕಾಗಿ ಟಿಎಂಸಿ ಕಾರ್ಯಕರ್ತರು ಅವಾಚ್ಯವಾಗಿ ನಿಂದಿಸಿದ್ದಾರೆ ಮತ್ತು ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಈ ದಾಳಿಯಲ್ಲಿ 25-30 ಮಂದಿ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದು, ಇದರಲ್ಲಿ 7 ಮಂದಿ ಗಾಯಗೊಂಡಿದ್ದಾರೆ.