Saturday, 14th December 2024

’ಕಮಲ’ ದತ್ತ ’ಮೆಟ್ರೋ ಮ್ಯಾನ್’ ಇ ಶ್ರೀಧರನ್ ?

ನವದೆಹಲಿ: ಮೆಟ್ರೋ ಮ್ಯಾನ್ ಎಂಬ ಖ್ಯಾತಿಯ ಇ ಶ್ರೀಧರನ್, ಕೇರಳ ಚುನಾವಣೆಗೂ ಮುನ್ನ ಬಿಜೆಪಿ ಸೇರಲಿದ್ದು, ಭಾನುವಾರ ಕೇರಳದಲ್ಲಿ ನಡೆಯಲಿರುವ ವಿಜಯ್ ಯಾತ್ರೆ ವೇಳೆ ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಲಿದ್ದಾರೆ.

88 ವರ್ಷದ ಶ್ರೀಧರನ್, ಕೇರಳ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಭಾರತದ ‘ಮೆಟ್ರೋ ಮ್ಯಾನ್’ ಎಂದೇ ಜನಪ್ರಿಯ ರಾಗಿರುವ ಶ್ರೀಧರನ್, 2011ರಲ್ಲಿ ದೆಹಲಿ ಮೆಟ್ರೋ ಮುಖ್ಯಸ್ಥರಾಗಿ ನಿವೃತ್ತ ರಾಗಿದ್ದರು. ದೇಶದ ಇತರ ಮೆಟ್ರೋ ಪ್ರಾಜೆಕ್ಟ್ʼಗಳಾದ ಜೈಪುರ, ಲಖನೌ ಮತ್ತು ಕೊಚ್ಚಿಯಲ್ಲಿ ಎಂಜಿನಿಯರ್ ಆಗಿಯೂ ಕೂಡ ಭಾಗಿಯಾಗಿದ್ದಾರೆ.

2001ರಲ್ಲಿ ಇವರಿಗೆ ಪದ್ಮಶ್ರೀ ಹಾಗೂ 2008ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಗೌರವ ಲಭಿಸಿದೆ.