Saturday, 14th December 2024

ಪ್ರೇಮಿಗಳ ಜೀವಂತ ಸುಟ್ಟು ಹಾಕಿದ ಕುಟುಂಬಸ್ಥರು

ಲಕ್ನೋ : ಉತ್ತರ ಪ್ರದೇಶದ ಬಾಂಡಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಯುವತಿ ಮತ್ತು ಆಕೆಯ ಪ್ರಿಯಕರ ನನ್ನು ಹುಡುಗಿಯ ಕುಟುಂಬದವರೇ ಜೀವಂತ ವಾಗಿ ಸುಟ್ಟು ಹಾಕಲಾಗಿದೆ. ಪ್ರಿಯಾಂಕಾ ಮತ್ತು ಭೋಲಾ (23) ಮೃತ ಪ್ರೇಮಿಗಳು.

ಮಾತೌಂಡ್ ಪ್ರದೇಶದ ಕಾರ್ಚಾ ಗ್ರಾಮದಲ್ಲಿ ಸಂಜೆ ಸಂಭವಿಸಿದೆ. ಪ್ರಿಯಾಂಕಾ ತನ್ನ ಪ್ರಿಯಕರ ಭೋಲಾ ಜೊತೆ ಇದ್ದುದ್ದನ್ನು ಯುವತಿಯ ಕು ಟುಂಬದ ಸದಸ್ಯರು ನೋಡಿದ್ದು, ಗುಡಿಸಲಿಗೆ ಬೀಗ ಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

ಇಬ್ಬರ ಕಿರುಚಾಟ ಕೇಳಿ ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಭೋಲಾ ಮೃತಪಟ್ಟಿದ್ದಾನೆ. ಪ್ರಿಯಾಂಕಾ ಶೇ.80 ರಷ್ಟು ಸುಟ್ಟಗಾಯಗಳಿಗೆ ಬಳಲುತ್ತಿದ್ದು, ಆಕೆಯನ್ನು ಕಾನ್ಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗು ತ್ತಿದ್ದಾಗ ಮಾರ್ಗ ಮಧ್ಯೆದಲ್ಲಿಯೇ ಮೃತ ಪಟ್ಟಿದ್ದಾಳೆ.

ಎಫ್‍ಐಆರ್ ದಾಖಲಿಸಲಾಗಿದ್ದು, ಅವರಲ್ಲಿ ಮೂವರನ್ನು ಬಂಧಿಸಲಾಗಿದೆ. ಸದ್ಯಕ್ಕೆ ಇಬ್ಬರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸ ಲಾಗಿದೆ.