Wednesday, 11th December 2024

ಸೂರ್ಯರಶ್ಮಿ ಸ್ಪರ್ಶ: ಕಾಲಿನಿಂದ ಚಪ್ಪಲಿ ಕಳಚಿ, ಟ್ಯಾಬ್ಲೆಟ್‌’ನಲ್ಲಿ ವೀಕ್ಷಿಸಿದ ಪ್ರಧಾನಿ

ನವದೆಹಲಿ: ಪ್ರಧಾನಿ ಮೋದಿ ಅವರು ಇಂದು ಅಯೋಧ್ಯ ರಾಮಮಂದಿರದಲ್ಲಿ ರಾಮ ಲಲ್ಲಾನ ಮೇಲೆ ಸೂರ್ಯರಶ್ಮಿ ಸ್ಪರ್ಶಿಸಿದನ್ನು ವಿಮಾನದಲ್ಲಿ ಕುಳಿತು ಟ್ಯಾಬ್ಲೆಟ್‌ ಮೂಲಕ ವೀಕ್ಷಿಸಿದರು. ಕಾಲಿನಿಂದ ಚಪ್ಪಲಿ ಕಳಚಿ ಭಕ್ತಿಯಿಂದ ಈ ಕ್ಷಣಕ್ಕೆ ಸಾಕ್ಷಿಯಾದರು.

ಕೋಟ್ಯಾಂತರ ರಾಮ ಭಕ್ತರಂತೆ ನಾನು ಕೂಡ ಈ ಕ್ಷಣಕ್ಕೆ ಸಾಕ್ಷಿಯಾದೆ ಎಂದು ಪ್ರಧಾನಿ ಮೋದಿ ಅವರು ಎಕ್ಸ್​​​ನಲ್ಲಿ ಟ್ವೀಟ್​​ ಮಾಡಿದ್ದಾರೆ.

ಇಂದುರಾಮಮಂದಿರನಿರ್ಮಾಣವಾಗಿ ಮೊದಲು ರಾಮ ನವಮಿಯನ್ನು ಆಚರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ರಾಮಲಲ್ಲಾನ ಹಣೆಯ ಮೇಲೆ ಸೂರ್ಯರಶ್ಮಿಯ ಸ್ಪರ್ಶವಾಗಿದೆ. ಕ್ಷಣವನ್ನು ಕೋಟ್ಯಾಂತರ ಭಕ್ತರು ಕಣ್ತುಂಬಿಕೊಂಡರು.

ಕೋಟ್ಯಾಂತರ ರಾಮ ಭಕ್ತರಂತೆ ನಾನು ಕೂಡ ಈ ಕ್ಷಣಕ್ಕೆ ಸಾಕ್ಷಿಯಾದೆ ಎಂದು ಪ್ರಧಾನಿ ಮೋದಿ ಅವರು ಎಕ್ಸ್​​​ನಲ್ಲಿ ಟ್ವೀಟ್​​ ಮಾಡಿದ್ದಾರೆ. ಈ ಸೂರ್ಯರಶ್ಮಿ ನಮ್ಮ ಜೀವದಲ್ಲಿ ಶಕ್ತಿಯನ್ನು ತರಲಿ ಹಾಗೂ ವೈಭವದ ಹೊಸ ಎತ್ತರಗಳನ್ನು ಏರಲು ನಮ್ಮ ರಾಷ್ಟ್ರವನ್ನು ಪ್ರೇರೇಪಿಸಲಿ ಎಂದು ಹೇಳಿದರು. ಪ್ರಧಾನಿ ಮೋದಿ ಅವರು ರಾಮ ಲಲ್ಲಾನ ಮೇಲೆ ಸೂರ್ಯ ತಿಲಕ ಮೂಡುವ ಸಮಯದಲ್ಲಿ ತಮ್ಮ ಕಾಲಿನಲ್ಲಿದ್ದ ಚಪ್ಪಲಿಯನ್ನು ಕಳಚಿ, ಸೂರ್ಯರಶ್ಮಿ ಸ್ಪರ್ಶವನ್ನು ವೀಕ್ಷಿಸಿದ್ದಾರೆ.