Wednesday, 11th December 2024

ತಮ್ಮ ಫೋಟೊಗಳನ್ನು ಡಿಪಿಗೆ ಬಳಸದಿರಿ: ತಮಿಳುನಾಡು ಮಹಿಳಾ ಆಯೋಗ

ಚೆನ್ನೈ: ತಮಿಳುನಾಡು ಮಹಿಳಾ ಆಯೋಗವು, “ಹೆಣ್ಣುಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೊಗಳನ್ನು ಡಿಪಿ ಇಡಬಾರದು” ಎಂದು ಸೂಚಿಸಿದೆ.

“ಹೆಣ್ಣುಮಕ್ಕಳು ತಮ್ಮ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳ ಡಿಪಿ ಇಡಬಾ ರದು. ಸೈಬರ್‌ ಅಪರಾಧಿಗಳು ನಿಮ್ಮ ಫೋಟೊಗಳನ್ನು ಡೌನ್‌ಲೋಡ್‌ ಮಾಡಿಕೊಂಡು, ಅವುಗಳನ್ನು ಅಶ್ಲೀಲವಾಗಿ ತಿರುಚಿ, ಜಾಲತಾಣಗಳಲ್ಲಿ ಹರಡುವ, ನಿಮಗೇ ಬ್ಲ್ಯಾಕ್‌ ಮೇಲ್‌ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ, ಹೆಣ್ಣುಮಕ್ಕಳು ಡಿಪಿ ಇಡಬಾರದು” ಎಂದು ತಮಿಳುನಾಡು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಎ.ಎಸ್‌.ಕುಮಾರಿ ಸಲಹೆ ನೀಡಿದ್ದಾರೆ.

ಚೆನ್ನೈನಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ತಮಿಳುನಾಡು ಮಹಿಳಾ ಆಯೋಗದಿಂದ ಜಂಟಿಯಾಗಿ ʼಮಹಿಳೆಯರ ಹಕ್ಕುಗಳು ಹಾಗೂ ಸಬಲೀಕರಣʼ ವಿಷಯದ ಕುರಿತು ಸೆಮಿನಾರ್‌ ನಡೆದಿದೆ. ಇದೇ ವೇಳೆ, ಸೈಬರ್‌ ಅಪರಾಧದ ಕುರಿತು ಕೂಡ ಜಗೃತಿ ಮೂಡಿಸಲಾಗಿದೆ. ಪೊಲೀಸ್‌ ಅಧಿಕಾರಿಗಳು, ವಕೀಲರು, ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿ, ಸೈಬರ್‌ ಅಪರಾಧ, ಆನ್‌ಲೈನ್‌ ದುರ್ಬಳಕೆ ಕುರಿತು ಮಹಿಳೆಯರಿಗೆ ಜಾಗೃತಿ ಮೂಡಿಸಲಾಗಿದೆ.

ಇದೇ ವೇಳೆ ಮಾತನಾಡಿದ ಎ.ಎಸ್.ಕುಮಾರಿ, “ಕಾಲೇಜು ವಿದ್ಯಾರ್ಥಿನಿಯರು ಹೆಚ್ಚಾಗಿ ಡಿಪಿಗಳನ್ನು ಚೇಂಜ್‌ ಮಾಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು ಅಪ್‌ಲೋಡ್‌ ಮಾಡುತ್ತಾರೆ. ಆದರೆ. ಸೈಬರ್‌ ಅಪರಾಧಿಗಳು ನಿಮ್ಮ ಫೋಟೊವನ್ನು ತಿರುಚಲು ಇದರಿಂದ ಆಸ್ಪದ ನೀಡಿದಂತಾಗುತ್ತದೆ. ಪ್ರೀತಿಯ ಹೆಸರಿನಲ್ಲಿ ಅವರು ಮಾಡುವ ತಂತ್ರಗಳಿಗೆ ಬಲಿಯಾಗಬಾರದು. ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಭಾರಿ ಎಚ್ಚರಿಕೆಯಿಂದ ಇರಬೇಕು” ಎಂದು ಸಲಹೆ ನೀಡಿದರು.