Wednesday, 11th December 2024

ಪಬ್‌ ಜಿ ಆಡದಂತೆ ತಡೆದ ತಾಯಿಯನ್ನೇ ಕೊಂದ ಪುತ್ರ

ಲಖನೌ: ಆನ್‌ಲೈನ್ ಗೇಮ್ ಪಬ್‌ ಜಿ ಆಡದಂತೆ ತಡೆದ ತಾಯಿಯನ್ನು ಸ್ವತಃ ಪುತ್ರನೇ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

16 ವರ್ಷ ವಯಸ್ಸಿನ ಬಾಲಕ ಪಬ್‌ ಜಿ ಆಡುವುದನ್ನು ಗೀಳಾಗಿ ಮಾಡಿಕೊಂಡಿ ದ್ದ. ಸಂಪೂರ್ಣ ಮುಳಗಿ ಹೋಗುವುದನ್ನು ತಡೆಯಲು ಅವನ ತಾಯಿ ಪ್ರಯ ತ್ನಿಸುತ್ತಿದ್ದರು. ಇದು ವಾಗ್ವಾದಕ್ಕೆ ಕಾರಣವಾಗುತ್ತಿತ್ತು.

ತಾಯಿ ಮೇಲೆ ಕೋಪಗೊಂಡ ಆತ ತನ್ನ ತಂದೆಯ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ತಾಯಿಯ ಮೃತದೇಹವನ್ನು ಹವಾನಿಯಂತ್ರಿತ ಕೊಠಡಿಯಲ್ಲಿ ಬಚ್ಚಿಟ್ಟು, ದುರ್ವಾಸನೆ ಬರದಂತೆ ರೂಮ್ ಫ್ರೆಶ್ನರ್ ಸಿಂಪಡಿಸಿ ತನ್ನ 10 ವರ್ಷದ ಸಹೋ ದರಿಯನ್ನು ಬೆದರಿಸಿದ್ದಾನೆ.

ಪಶ್ಚಿಮ ಬಂಗಾಳದಲ್ಲಿ ನಿಯೋಜಿತವಾಗಿರುವ ಸೇನಾ ಅಧಿಕಾರಿಯಾಗಿರುವ ಬಾಲಕನ ತಂದೆಗೆ ನೆರೆಹೊರೆಯವರಿಂದ ದುರ್ವಾ ಸನೆಯ ಬಗ್ಗೆ ಮಾಹಿತಿ ನೀಡಲಾಯಿತು.

ನಕಲಿ ಕಥೆ ಕಟ್ಟಿ ಪೊಲೀಸರ ತನಿಖೆ ದಿಕ್ಕು ತಪ್ಪಿಸಲು ಮಗ ಯತ್ನಿಸಿದ್ದಾನೆ. ಪೊಲೀಸರು ವಿವರವಾಗಿ ಪ್ರಶ್ನಿಸಿದಾಗ ಆತನೇ ಕೊಂದಿ ರುವುದು ಬೆಳಕಿಗೆ ಬಂದಿದೆ. ತನಿಖೆ ನಡೆಸಿದಾಗ ಬಾಲಕ ಆಟದ ಚಟಕ್ಕೆ ಬಿದ್ದಿರುವುದು ಬೆಳಕಿಗೆ ಬಂದಿದೆ.