ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Self Harming: ಕಿರಿಕ್‌ ಕಾಮಿಯ ಕಾಟಕ್ಕೆ ಅಂಜಿ ವಿವಾಹಿತೆ ಆತ್ಮಹತ್ಯೆ

ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನಂದಿನಿಯ ಹಿಂದೆ ವ್ಯಕ್ತಿಯೊಬ್ಬ ಬಿದ್ದಿದ್ದು, ತನ್ನನ್ನು ಪ್ರೀತಿಸು ಎಂದು ಕಾಡುತ್ತಿದ್ದ. ಗಂಡನನ್ನ ಬಿಟ್ಟು ಬರುವಂತೆಯೂ ಪೀಡಿಸುತ್ತಿದ್ದ. ನಂದಿನಿ ಪತಿಗೂ ಕರೆ ಮಾಡಿ ಆಕೆಯನ್ನು ಬಿಟ್ಟು ಬಿಡುವಂತೆ ಹೇಳುತ್ತಿದ್ದನಂತೆ. ಇದೇ ವಿಚಾರವಾಗಿ ಪತಿ-ಪತ್ನಿ ಮಧ್ಯೆ ಗಲಾಟೆ ಆಗಿತ್ತು.

ಕಿರಿಕ್‌ ಕಾಮಿಯ ಕಾಟಕ್ಕೆ ಅಂಜಿ ವಿವಾಹಿತೆ ಆತ್ಮಹತ್ಯೆ

ಮೃತ ನಂದಿನಿ

ಹರೀಶ್‌ ಕೇರ ಹರೀಶ್‌ ಕೇರ Feb 25, 2025 7:28 AM

ಬೆಂಗಳೂರು: ವಿವಾಹಿತೆಯೊಬ್ಬರು (Married woman) ಮೂರನೇ ವ್ಯಕ್ತಿಯ ಕಾಟಕ್ಕೆ ಅಂಜಿ ನೇಣು ಬಿಗಿದು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಮಹಿಳೆಗೆ ಗಂಡ- ಮಕ್ಕಳು ಇದ್ದರೂ ಈ ವ್ಯಕ್ತಿ (Psycho lover) ಅವರನ್ನು ಬಿಟ್ಟು ಬಂದು ತನ್ನ ಜೊತೆಗಿರುವಂತೆ ಪೀಡಿಸುತ್ತಿದ್ದ ಎಂದು ಗೊತ್ತಾಗಿದೆ. ಬೆಂಗಳೂರಿನ (Bengaluru Crime News) ಚಾಮರಾಜಪೇಟೆಯಲ್ಲಿ ಈ ದಾರುಣ ಘಟನೆ ನಡೆದಿದೆ. ಮೃತ ಮಹಿಳೆಯನ್ನು ನಂದಿನಿ ಎಂದು ಗುರುತಿಸಲಾಗಿದೆ.

ಸೂರ್ಯ ಮತ್ತು ನಂದಿನಿ ಅಕ್ಕ ಪಕ್ಕದ ಮನೆಯವರಾಗಿದ್ದು, ಇಬ್ಬರೂ ಎಂಟು ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ನಂದಿನಿ ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ, ಸೂರ್ಯ ಇನ್ವಿಟೇಷನ್ ಕಾರ್ಡ್ ಪ್ರಿಂಟ್ ಮಾಡೋ ಕೆಲಸ ಮಾಡುತ್ತಿದ್ದ. ಇವರ ಬಾಳಲ್ಲಿ ಈಗ ಬಿರುಗಾಳಿ ಎದ್ದಿದ್ದು, ಪತ್ನಿ ಸಾವಿನ ಮನೆ ಸೇರಿದ್ದಾರೆ. ಫೆ.23 ರಂದು ರಾತ್ರಿ 9.30ಕ್ಕೆ ಚಾಮರಾಜಪೇಟೆ ಏರಿಯಾದಲ್ಲಿರುವ ಮನೆಯಲ್ಲಿ ಪತ್ನಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾಳೆ.

ಗಂಡ ಮತ್ತು ಮಗ ಬೇಕರಿಗೆ ಹೋಗಿದ್ದರು. ಅಲ್ಲಿಂದ ಬಂದು ನೋಡುವಷ್ಟರಲ್ಲಿ ನಂದಿನಿ ನೇಣು ಹಾಕಿಕೊಂಡಿರುವುದು ಕಂಡಿದೆ. ರೂಂ ಲಾಕ್ ಆಗಿತ್ತು. ಹಗ್ಗಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ನಂದಿನಿ ಕಂಡಿದ್ದಾಳೆ. ಕೂಡಲೇ ತನ್ನ ಅಣ್ಣನನ್ನ ಕರಿಸಿಕೊಂಡ ಸೂರ್ಯ ಬಾಗಿಲು ಓಪನ್ ಮಾಡಿ ನಂದಿನಿಯನ್ನು ಕೆಳಗಿಳಿಸಿದ್ದಾರೆ‌‌.‌ ತಕ್ಷಣ ಚಾಮರಾಜಪೇಟೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನಂದಿನಿಯ ಹಿಂದೆ ವ್ಯಕ್ತಿಯೊಬ್ಬ ಬಿದ್ದಿದ್ದು, ತನ್ನನ್ನು ಪ್ರೀತಿಸು ಎಂದು ಕಾಡುತ್ತಿದ್ದ. ಗಂಡನನ್ನ ಬಿಟ್ಟು ಬರುವಂತೆಯೂ ಪೀಡಿಸುತ್ತಿದ್ದ. ನಂದಿನಿ ಪತಿಗೂ ಕರೆ ಮಾಡಿ ಆಕೆಯನ್ನು ಬಿಟ್ಟು ಬಿಡುವಂತೆ ಹೇಳುತ್ತಿದ್ದನಂತೆ. ಇದೇ ವಿಚಾರವಾಗಿ ಪತಿ-ಪತ್ನಿ ಮಧ್ಯೆ ಗಲಾಟೆ ಆಗಿತ್ತು. ಇದರಿಂದ ಬೇಸತ್ತ ನಂದಿನಿ ಮನೆಯಲ್ಲಿ ಯಾರೂ ಇಲ್ಲದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: Child Death: ಚಿಕ್ಕಬಳ್ಳಾಪುರದಲ್ಲಿ ತೆಂಗಿನ ಮರ ಮುರಿದು ಬಿದ್ದು 3 ವರ್ಷದ ಮಗು ಸಾವು