Tuesday, 30th May 2023

ಆನೇಕಲ್‌ನಲ್ಲಿ ದಸರಾ ಪ್ರಯುಕ್ತ ಜಂಬೂ ಸವಾರಿ

ಇಡೀ ರಾಜ್ಯದಲ್ಲಿ ಮೈಸೂರು ದಸರಾ ಜಂಬೂ ಸವಾರಿಯಂತೆ ಆನೇಕಲ್ ಜಂಬೂ ಸವಾರಿಯನ್ನು ತೊಗಟವೀರ ಮಹಾಸಂಘ ನಡೆಸಿಕೊಂಡು ಬರುತ್ತಿದೆ ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು .

ದಸರಾ ಪ್ರಯುಕ್ತ ಚೌಡೇಶ್ವರಿ ಅಮ್ಮನವರ ಜಂಬೂ ಸವಾರಿಗೆ ಚಾಲನೆ ನೀಡಿ ಮಾತನಾಡಿ, ಮೈಸೂರು ಜಂಬೂ ಸವಾರಿ ಆನೇಕಲ್ ಜಂಬೂ ಸವಾರಿ ರಾಜ್ಯಕ್ಕೆೆ ಪ್ರಸಿದ್ಧವಾಗಿದೆ. ಹಲವರು ಮೈಸೂರಿಗೆ ಹೋಗಿ ನೋಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಬೆಂಗಳೂರಿನ ಸುತ್ತಮುತ್ತಲಿನ ಸಾರ್ವಜನಿಕರು ಇಲ್ಲಿಗೆ ಬಂದು ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳುತ್ತಾಾರೆ ಎಂದರು.

ಸಂಸದ ಎ.ನಾರಾಯಣಸ್ವಾಾಮಿ ಮಾತನಾಡಿ, ಪಟ್ಟಣದ ಹೃದಯ ಭಾಗದ ತಿಲಕ್ ವೃತ್ತದಲ್ಲಿರುವ ಚೌಡೇಶ್ವರಿ ದೇವಾಲಯಕ್ಕೆೆ 400 ವರ್ಷಗಳಿಗೂ ಹೆಚ್ಚಿಿನ ಇತಿಹಾಸವಿದೆ. ಚೌಡೇಶ್ವರಿ ದೇವಿಯು ತೊಗಟವೀರರ ಆರಾಧ್ಯದೈವವಾಗಿದ್ದರೂ ಸಹ ನಂದವರಿಕ ಬ್ರಾಾಹ್ಮಣರ ಕುಲದೇವತೆಯಾಗಿರುವುದು ವಿಶೇಷ. ಶಕ್ತಿಿ ದೇವತೆಯ ಆರಾಧನೆಯಲ್ಲಿ ಪಟ್ಟಣದ ಎಲ್ಲಾಾ ಜಾತಿ ಜನಾಂಗಗಳವರು ನಡೆದುಕೊಂಡು, ದೇವಿಗೆ ಮಡಿಲಕ್ಕಿಿ ತುಂಬುವ ಹಾಗೂ ನಿಂಬೆಹಣ್ಣು, ಬೆಲ್ಲದ ದೀಪಾರಾಧನೆ ಮಾಡುವ ಪರಿಪಾಠವಿದೆ. ನವರಾತ್ರಿಿ ಸಂದರ್ಭದಲ್ಲಿ ನೂರಾರು ಮಹಿಳೆಯರು ಪ್ರತಿದಿನ ದೇವಿಗೆ ದೀಪಾರಾಧನೆ ಮಾಡುವ ಮೂಲಕ ತಮ್ಮ ಭಕ್ತಿಿಯನ್ನು ಸಮರ್ಪಿಸುತ್ತಾಾರೆ. ಆನೇಕಲ್‌ನ ತೊಗಟವೀರ ಸಂಘದ ಪದಾಧಿಕಾರಿಗಳು ಸತತ 19 ವರ್ಷಗಳಿಂದ ಜಂಬೂ ಸವಾರಿಯನ್ನು ಯಶಸ್ವಿಿಯಾಗಿ ನಡೆಸಿಕೊಂಡು ಬಂದಿದ್ದಾಾರೆ ಅವರ ಕೆಲಸ ಶ್ಲಾಾಘನೀಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ನಗರ ಜಿಲ್ಲಾಾ ಪಂಚಾಯಿತಿ ಅಧ್ಯಕ್ಷ ಮುನಿರಾಜು ಮಾತನಾಡಿ, ಜಂಬೂ ಸವಾರಿ ನಾವು ಮೈಸೂರಿಗೆ ಹೋಗಬೇಕಾಗಿತ್ತು. ಆದರೆ, ಪಟ್ಟಣದ ಚೌಡೇಶ್ವರಿ ತಾಯಿ ಆ ಭಾಗ್ಯವನ್ನು ನಮಗೆ ಇಲ್ಲೇ ಕಣ್ತುಂಬಿಕೊಳ್ಳುವ ಭಾಗ್ಯ ಕರುಣಿಸಿದ್ದಾಾರೆ ಎಂದರು.

ದಸರಾ ಉತ್ಸವದಲ್ಲಿ ಕಲಾವಿದರಿಂದ ನೃತ್ಯ

error: Content is protected !!