Sunday, 19th May 2024

ಕೆಲವೆಡೆ ಬಸ್ ಗಳಿಗೆ ಕಲ್ಲು ತೂರಾಟ, ಉಡುಪಿಯಲ್ಲಿ ನೀರಸ ಬಂದ್

ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಖಂಡಿಸಿ ಕನ್ನಡ ಪರ ಸಂಘಟನೆಗಳು ಶನಿವಾರ “ಕರ್ನಾಟಕ ಬಂದ್‌’ಗೆ ಕರೆ ನೀಡಿವೆ. ಬೆಂಗಳೂರಿನ ಕೆಲವೆಡೆ ಬಸ್ ಗಳಿಗೆ ಕಲ್ಲು ತೂರಾಟ ನಡೆಸಿದ ಘಟನೆಗಳು ವರದಿಯಾಗಿದೆ. ಉಡುಪಿಯಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

“ಕರ್ನಾಟಕ ಬಂದ್‌’ ವೇಳೆ ಉಂಟಾಗುವ ಆರ್ಥಿಕ ನಷ್ಟಕ್ಕೆ ಆಯೋಜಕರೇ ಹೊಣೆಗಾರರಾಗಬೇಕಾಗುತ್ತದೆ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಪಿಐಎಲ್‌ ಒಂದನ್ನು ವಿಚಾರಣೆ ನಡೆಸಿದ ವಿಭಾಗೀಯ ನ್ಯಾಯ ಪೀಠ ಶುಕ್ರವಾರ ಈ ಅಭಿಪ್ರಾಯಪಟ್ಟಿತು. ಮಾಸ್ಕ್ ಹಾಕದೆ ಬಂದ್‌, ರ್ಯಾಲಿ, ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರನ್ನೂ ಬಿಡದೆ ದಂಡ ಹಾಕಿ ಎಂದು ನ್ಯಾಯ ಪೀಠ ಪೊಲೀಸರಿಗೆ ತಾಕೀತು ಮಾಡಿತು

Leave a Reply

Your email address will not be published. Required fields are marked *

error: Content is protected !!