Sunday, 19th May 2024

ಅಶೋಕ್ ಬೆಂಗಳೂರಿಗೆ ಸಾಮ್ರಾಟರಂತೆ ವರ್ತಿಸುತ್ತಾರೆ: ವಿ.ಸೋಮಣ್ಣ ವಾಗ್ದಾಳಿ

ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ವಸತಿ ಸಚಿವ ವಿ.ಸೋಮಣ್ಣ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರುಗಳು ಅಶೋಕ್ ಹಸ್ತಕ್ಷೇಪಕ್ಕೆ ಕಿಡಿಕಾರಿದ್ದರು. ಅಶೋಕ್ ಒಂದು ರೀತಿ ಬೆಂಗಳೂರಿಗೆ ಸಾಮ್ರಾಟರಂತೆ ವರ್ತಿಸುತ್ತಾರೆಂದು ನೇರವಾಗಿಯೇ ಆರೋಪಿಸಿದರು. ನಾನು ಬೆಂಗಳೂರಿನ ವಸತಿ ಇಲಾಖೆಗೆ ಸಂಬಂಧಿಸಿ ದಂತೆ ಸಭೆ ಕರೆದರೆ ಅಶೋಕ್ ಬರುವುದೇ ಇಲ್ಲ. ನಾನು ಕರೆದರೆ ಅಶೋಕ್ ಕೂಡ ಸಭೆಗೆ ಬರಲೇಬೇಕು. ನಾನೇನು ನನ್ನ ವೈಯಕ್ತಿಕ ಕೆಲಸಗಳಿಗೆ ಆಹ್ವಾನಿಸುವುದಿಲ್ಲ. ಬೆಂಗಳೂರಿನ ಸಚಿವರು ಮತ್ತು ಶಾಸಕರು ಬರುತ್ತಾರೆ. ಆದರೆ ಅಶೋಕ್ ಬರುವುದಿಲ್ಲವೆಂದರೆ ಏನರ್ಥ ಎಂದು ಪ್ರಶ್ನಿಸಿದರು.

ನಾನು ಕೂಡ ಪಕ್ಷದಲ್ಲಿ ಅತ್ಯಂತ ಹಿರಿಯನಾಗಿದ್ದೇನೆ. ಈಗಾಗಲೇ 70 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದೆ ನನಗೆ. ನಾನು ಜವಾಬ್ದಾರಿಯುತ ಸಚಿವನಾಗಿ ಸಭೆಗೆ ಬರುವಂತೆ ಕರೆದರೆ ಬರುವುದಿಲ್ಲ. ಇದು ಯಾರಿಗೂ ಶೋಭೆ ತರುವು ದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಶೋಕ್‍ಗೆ ಬೆಂಗಳೂರು ಉಸ್ತುವಾರಿ ಕೊಟ್ಟರೆ ನನ್ನದೇನೂ ಅಭ್ಯಂತರವಿಲ್ಲ. ಆದರೆ ಬೆಂಗಳೂರು ಉಸ್ತು ವಾರಿ ಕೊಡುವಾಗ ನನ್ನನ್ನು ಪರಿಗಣಿಸುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಮನವಿ ಮಾಡಿರುವು ದಾಗಿ ತಿಳಿಸಿದರು.

ಬೆಂಗಳೂರಿಗೆ ಉಸ್ತುವಾರಿ ಕೊಡುವಾಗ ಜ್ಯೇಷ್ಠತೆ ಪರಿಗಣಿಸಲಿ. ಇಬ್ಬರಿಗೆ ಉಸ್ತುವಾರಿ ಕೊಟ್ಟರೆ ಆಡಳಿತಾತ್ಮಕವಾಗಿ ಹೆಚ್ಚು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಐಟಿ ದಾಳಿ ನಡೆದಿರುವುದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

 

Leave a Reply

Your email address will not be published. Required fields are marked *

error: Content is protected !!