Monday, 20th May 2024

ಕರ‍್ರಿ ಇಂಗ್ರಿಡಿಯೆಂಟ್ಸ್ ಕಂಪನಿಯಿಂದ 1050 ಪೌರಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ

ತುಮಕೂರು: ಕರ‍್ರಿ ಇಂಗ್ರಿಡಿಯೆಂಟ್ಸ್ ಪ್ರೈ ಲಿಮಿಟೆಡ್ ಸಿ.ಎಸ್.ಆರ್ ಚಟುವಟಿಕೆಯ ಅಡಿಯಲ್ಲಿ ತುಮಕೂರು ಮಹಾನಗರ ಪಾಲಿಕೆಯ 800 ಪೌರಕಾರ್ಮಿಕರು ಮತ್ತು 250 ಅಲೆಮಾರಿಗಳು ಮತ್ತು ಬಡವರಿಗೆ ಒಟ್ಟು 1050 ಜನರಿಗೆ ಉಚಿತ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಲಾಯಿತು.

ತುಮಕೂರು ಮಹಾನಗರ ಪಾಲಿಕೆಯ ಫ್ರಂಟ್‌ಲೈನ್ ವಾರಿರ‍್ಸ್ ಮತ್ತು ಎಲ್ಲಾ ಪೌರಕಾರ್ಮಿಕರಿಗೆ ಕಾರ್ಪೋರೇಟ್ ಸರ್ವೀಸ್ ರೆಸ್ಪಾನ್ಸಿಬಲಿಟಿ ಅಡಿಯಲ್ಲಿ ಬೆಂಗಳೂರಿನ ಕರ‍್ರಿ ಇಂಗ್ರಿಡಿಯಂಟ್ಸ್ ಪ್ರೈ ಲಿಮಿಟೆಡ್ ರವರು ತುಮಕೂರಿನ ಪೌರಕಾರ್ಮಿಕರನ್ನು ಪರಿಗಣಿಸಿ ಅವರಿಗೆ 1050 ಆಹಾರ ಧಾನ್ಯಗಳ ಕಿಟ್‌ಗಳನ್ನು ನೀಡಿದರು. ಈಗಾಗಲೇ ಹಲವಾರು ಸಮಾಜಮುಖಿ ಚಟುವಟಿಕೆ ಗಳನ್ನು ನಿರ್ವಹಿಸಿರುವ ಕಂಪನಿಯು ಈ ಬಾರಿ ತುಮಕೂರಿನಲ್ಲಿ ಈ ಕಾರ್ಯಕ್ರಮವನ್ನು ನಡೆಸಲು ಉದ್ದೇಶಿಸಿದರು.

ಕಾರ್ಯಕ್ರಮದ ಉದ್ಘಾಟನೆ ಮಾಡಿದ ಆಯುಕ್ತರಾದ ಶ್ರೀ ರೇಣುಕರವರು ಕಿಟ್ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ ದರು. ಕೊರೋನದಂತಹ ಕಷ್ಟದ ಸಮಯದಲ್ಲಿ ಫ್ರಂಟ್ ಲೈನ್ ವಾರಿರ‍್ಸ್ ಆಗಿ ಕೆಲಸ ನಿರ್ವಹಿಸಿದ ಎಲ್ಲಾ ಪೌರ ಕಾರ್ಮಿಕರಿಗೆ ನೆರವಾಗುವಂತಹ ಆಹಾರ ಧಾನ್ಯಗಳ ಕಿಟ್‌ಗಳನ್ನು ನೀಡುತ್ತಿರುವುದು ಪ್ರಶಂಸನೀಯ ಅದೂ ಕೂಡ ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ನೀಡಿರುವುದು ಎಲ್ಲರಲ್ಲೂ ಸಂತಸವನ್ನು ತಂದಿದೆ ಮತ್ತು ಎಲ್ಲಾ ಕಂಪನಿಗಳು ಇದೇ ತರಹದ ಕೆಲಸಮಾಡಿ ಸಮಾಜದಲ್ಲಿ ಅವಶ್ಯಕವಿರುವಂತವರನ್ನು ಗುರುತಿಸಿ ಕೆಲಸಮಾಡಬೇಕೆಂದರು.

ಕೆರ‍್ರೀ ಕಂಪನಿಯು ತುಂಬಾ ಅಚ್ಚುಕಟ್ಟಾಗಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಹಾಗೂ ಸಾಕಷ್ಟು ಮುಂಜಾಗೃತ ಕ್ರಮವನ್ನು ವಹಿಸಿಕೊಂಡು ಈ ಕಾರ್ಯವನ್ನು ನಡೆಸಿರುವುದಕ್ಕಾಗಿ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದರು. ತುಮಕೂರು ಜಿಲ್ಲೆಯಾದ್ಯಾಂತ ವಾಸವಿರುವ ಸುಮಾರು 100ಕ್ಕಿಂತ ಹೆಚ್ಚು ಅಲೆಮಾರಿ ಜನಾಂಗದವರ ಬದುಕು ಕಷ್ಟವಾಗಿರುವು ದನ್ನು ಮನಗಂಡಿರುವ ಕರ‍್ರಿ ಕಂಪನಿಯು ಅಂತಹ ಜನರನ್ನು ಗುರುತಿಸಿ ಅವರಿಗೆ ಅವಶ್ಯಕವಿರುವ ಆಹಾರಧಾನ್ಯಗಳನ್ನು ನೀಡುತ್ತಿರುವ ಮಹತ್ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದರು.

ಈಗಾಗಲೇ ಬೆಂಗಳೂರು ಬಿಬಿಎಂಪಿ ನೌಕರರಿಗೆ ಹಲವಾರು ಕಿಟ್‌ಗಳನ್ನು ವಿತರಿಸಿರುವ ಕರ‍್ರಿ ಕಂಪನಿಯು ಸಾಮಾಜಿಕ ಜವಾಬ್ದಾರಿ ಯನ್ನು ನಿರ್ವಹಿಸಿದೆಯೆಂದು ತಿಳಿಸಿದರು. ಎಲ್ಲಾ ನೌಕರರ ಪಟ್ಟಿ ತಯಾರಿಸಿ ತಂಡಗಳಾಗಿ ಸಮಯವನ್ನು ನಿಗಧಿಪಡಿಸಿ ಆ ಸಮಯದಲ್ಲಿ ಬಂದು ಕಿಟ್ ಪಡೆಯಬೇಕೆಂದು ಮಹಾನಗರ ಪಾಲಿಕೆ ಆವರಣದಲ್ಲಿರುವ ಉದ್ಯಾನವನದಲ್ಲಿ ಈ ಕಾರ್ಯಕ್ರಮ ವನ್ನು ನಡೆಸಿದರು.

ಕಾರ್ಯಕ್ರಮದಲ್ಲಿ ಹಾಜರಾಗಿದ್ದ ರೋಟರಿ ತುಮಕೂರಿನ ಅಧ್ಯಕ್ಷರಾದ ಮಹೇಶ್ ಜಿ.ಎನ್. ರವರು ಕಂಪನಿಯ ಈ ಯೋಜನೆ ಯನ್ನು ತುಮಕೂರಿನಲ್ಲಿ ಯೋಜಿಸಿದ್ದಕ್ಕಾಗಿ ಹರ್ಷ ವ್ಯಕ್ತ ಪಡಿಸಿದರು. ಯಾವ ಜನರಿಗೂ ಸಮಸ್ಯೆಯಾಗದಂತೆ ಮಾಸ್ಕ್ ಧರಿಸಿ ಕೊಂಡು ಬರುವಂತೆ ಸೂಚಿಸಿ ಮತ್ತು 1050 ಜನರನ್ನು ಬ್ಯಾಚ್‌ಗಳ ಮುಖಾಂತರ ಬರುವಂತೆ ತಯಾರಿ ಮಾಡಲಾಗಿತ್ತು ಮತ್ತು ಕಂಪನಿಯಿಂದ ಆಗಮಿಸಿದ್ದ ಎಲ್ಲಾ ಸ್ವಯಂ ಸೇವಕರಂತೆ ಕೆಲಸ ಮಾಡಿ ಎಲ್ಲವನ್ನೂ ನಿಭಾಯಿಸಿದ ತಂಡದ ಕೆಲಸ ವನ್ನು ಎಲ್ಲರೂ ಪ್ರಶಂಸಿದರು. ಕಾರ್ಯಕ್ರಮದಲ್ಲಿ ಹಾಜರಾಗಿದ್ದ.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿದೇಶಕರಾದ ಶ್ರೀ ಪ್ರೇಮನಾಥ್ ರವರು ಮಾತನಾಡಿ ಈ ಯೋಜನೆಯಲ್ಲಿ ಹಲವಾರು ವಸತಿ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಡಿ ಗ್ರೂಪ್ ನೌಕರರಿಗೆ ಕೆಲವು ತಿಂಗಳುಗಳಿAದ ಶಾಲೆಗಳು ತೆರೆಯದೆ ಅವರುಗಳಿಗೆ ವೇತನವಿಲ್ಲದೆ ಬಹಳ ತೊಂದರೆಗೊಳಗಾಗಿದ್ದರು ಅಂತವರನ್ನು ಈ ಸಂದರ್ಭದಲ್ಲಿ ಗುರುತಿಸಿರುವುದಕ್ಕಾಗಿ ಸಂಸತ ವ್ಯಕ್ತ ಪಡಿಸಿದರು ಮತ್ತು ಪೌರಕಾರ್ಮಿಕರಿಗೆ ಸಹಾಯ ಮಾಡುತ್ತಿರುವ ಈ ಯೋಜನೆಯು ಪೌರಕಾರ್ಮಿಕರ ಕೆಲಸಕ್ಕೆ ಸಂದ ಗೌರವವೇ ಸರಿ ಎಂದರು. ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಆರೋಗ್ಯ ಅಧಿಕಾರಿಗಳು ವಿಶೇಷವಾಗಿ ಡಾ. ನಾಗೇಶ್ ಕುಮಾರ್ ರವರ ಅನುಪಸ್ಥಿತಿಯಲ್ಲಿ ವಂದಿಸಲಾಯಿತು.

ಈ ಕಾರ್ಯಕ್ರಮಕ್ಕೆ ಕಂಪನಿ ಮತ್ತು ಮಹಾನಗರ ಪಾಲಿಕಯೊಂದಿಗೆ ಸಂಯೋಜನೆ ಮಾಡಿದ ರೋಟರಿ ತುಮಕೂರಿನ ಕಾರ್ಯ ದರ್ಶಿ ಜನಾರ್ಧನ್ ಜಿ.ಎನ್. ರವರನ್ನು ಕಂಪನಿಯ ಎಲ್ಲಾ ಸ್ವಯಂಸೇವಕರು ನೆನಪಿನ ಕಾಣಿಕೆಯೊಂದಿಗೆ ಅಭಿನಂದಿಸಿದರು.
ಪ್ರತಿಯೊಂದು ಕಿಟ್‌ನಲ್ಲಿ ಗೋದಿ ಹಿಟ್ಟು-5ಕೆ.ಜಿ, ಅಡುಗೆ ಎಣ್ಣೆ–2ಲೀ, ಬೇಳೆ-2ಕೆಜಿ, ಸಕ್ಕರೆ 1ಕೆಜಿ, ಹ್ಯಾಂಡ್ ವಾಷ್, ಸ್ಯಾನಿಟೈಸರ್, ಮಾಸ್ಕ್-10, ಟೆಟ್ರಾಪ್ಯಾಕ್ ಹಾಲು-1ಲೀ, ಮೆಣಸಿನಪುಡಿ-100ಗ್ರಾ, ಅರಿಶಿನ ಪುಡಿ-100ಗ್ರಾಂ. ಎಲ್ಲವೂ ಗುಣಮಟ್ಟದ ಪದಾರ್ಥ ಗಳನ್ನೇ ನೀಡಲಾಯಿತು.

Leave a Reply

Your email address will not be published. Required fields are marked *

error: Content is protected !!