Sunday, 28th April 2024

ಎಲ್ಲರ ಚಿತ್ತ ಹಳ್ಳೂರ ಗ್ರಾಪಂ ಚುನಾವಣೆಯತ್ತ

ರಂಗೇರಿದ ಗ್ರಾಪಂ ಚುನಾವಣೆಯ ಕಾವು 

ಅವಿರೋಧ ಆಯ್ಕೆ ಮಾಡಲು ಪ್ರಯತ್ನ

ಮೂಡಲಗಿ: ಎಲ್ಲೆಡೇ ಗ್ರಾಪಂ ಚುನಾವಣೆಯೂ ಕಾವು ದಿನದಿಂದಕ್ಕೆ ಏರುತ್ತಿದ್ದು ಆದರೆ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಗ್ರಾಪಂ ಪತ್ರಿ ಚುನಾವಣೆಯಲ್ಲಿ ಬಾರಿ ಕುತುಹಲದಿಂದ ಹಾಗೂ ಜಿದ್ದಾಜಿದಿ ಕಣವಾಗಿ ಕಾಣುತ್ತಿತು. ಆದರೆ ಇದೇ ಗ್ರಾಮದಲ್ಲಿ ಡಿ.22ರಂದು ಜರಗುವ ಚುನಾವಣೆಯಲ್ಲಿ ಗ್ರಾಮದ ಶಾಂತಿ ಹಾಗೂ ಅಭಿವೃದ್ಧಿಗಾಗಿ ಅವಿರೋಧ ಆಯ್ಕೆಯಾಗುವ ಲಕ್ಷಣಗಳು ಕಂಡು ಬಂದಿವೆ.

ಸ್ಥಳೀಯ ಚುನಾವಣೆಗೆ ಆಖಾಡ ಸಿದ್ದವಾಗಿದ್ದು ಗ್ರಾಮ ಪಂಚಾಯಿತಿ ಚುನಾವಣೆಗೆ ಜನಪ್ರತಿನಿಧಿಗಳಾಗ ಬಯಸುವ ಅಭ್ಯರ್ಥಿಗಳು ತೆರೆಮರೆಯಲ್ಲಿ ಕಸರತ್ತುಗಳನ್ನು ನಡೆಸುತ್ತಾ ತರಾತುರಿಯಲ್ಲಿ ತಮ್ಮ ಸ್ಥಾನಕ್ಕೆ ಲಾಭಿ ನಡೆಸುತ್ತಿದ್ದಾರೆ. ಇನ್ನು ಕೆಲವರು ಈಗಲೇ ಚುನಾವಣಾ ಪ್ರಚಾರ, ಬಾಯಿ ಮಾತಿನ ಪ್ರಣಾಳಿಕೆಗಳು ಹೊರಹಾಕುತ್ತಾ ಚುನಾವಣಾ ತಯಾರಿ ನಡೆಸಿಕೊಳುತ್ತಿದ್ದಾರೆ.

ತಾಲೂಕಿನ ಗ್ರಾಮಗಳ ಪಂಚಾಯಿತಿ ಚುನಾವಣೆ ಯಾವುದೇ ಪಕ್ಷದ ಚಿಹ್ನೆಯಡಿಯಲ್ಲಿ ನಡೆಯದೇ ಇದ್ದರೂ ಹಳ್ಳೂರ ಗ್ರಾಮದ ಮಾಜಿ ಜಿಪಂ ಸದಸ್ಯ ಭೀಮಶಿ ಮಗದುಮ್ ಬಣ ಹಾಗೂ ಮಾಜಿ ಪಿಕೆಪಿಎಸ್ ಅಧ್ಯಕ್ಷ ಹಣಮಂತ ತೇರದಾಳ ಬಣ ಒಳ್ಳಳಗೆ ಅವಿರೋಧ ಆಯ್ಕೆ ಮಾಡುವುದು ವಿಶೇಷವಾಗಿದೆ. ಈ ವರ್ಷ ಎರಡು ಬಣದ ನಡುವೆ ತ್ರೀವ ಪೈಪೋಟಿ ನಡೆದುವ ಸಾಧ್ಯತೆ ವ್ಯಕ್ತವಾಗಿತ್ತು.

ಆದರೆ ಶುಕ್ರವಾರ ಗ್ರಾಮದ ಹಿರಿಯರ ಮಧ್ಯೆ ನಡೆದ ಸಭೆಯಲ್ಲಿ ಚರ್ಚೆಯಾಗಿ ಅವಿರೋಧ ಆಯ್ಕೆ ಮಾಡಲು ಎಲ್ಲರ ತರಹದ ಕಸರತ್ತುಗಳನ್ನು ಮಾಡಿದ್ದಾರೆ. ಆದರಿಂದ ಎಲ್ಲರ ಚಿತ್ತ ಗ್ರಾಪಂ ಚುನಾವಣೆಯ ನಾಮಪತ್ರ ಹಿಂತೆಗೆದುಕೊಳ್ಳವ ದಿನದತ್ತ ಹಳ್ಳೂರಿನ ಜನತೆ ಎದುರು ನೋಡಿದ್ದಾರೆ.

ಏನೇ ಇರಲಿ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಲ್ಲಿ ಅಥವ ಚುನಾವಣೆಗೆ ಸ್ಪರ್ಧಿಸಲ್ಲಿ ತಮ್ಮ ಗ್ರಾಮಗಳನ್ನು ಅಭಿವೃದ್ದಿ ಪಡಿಸಬೇಕೆನ್ನುವ ಕನಸು ಕಾಣುತ್ತಿದ್ದಾರೆ. ಒಟ್ಟಾರೆಯಾಗಿ ಚುನಾವಣೆಯ ಅಖಾಡಕ್ಕೆ ಸಿದ್ದತೆಗಳು ಬರದಿಂದ ಸಾಗುತ್ತಿದೆ ಎಂದು ಮೆಲ್ನೋಟಕ್ಕೆ ಕಂಡು ಬರುತ್ತಿದೆ.

ಅಲ್ಲದೇ ಈ ಬಾರಿಯ ಚುನಾವಣೆಯಲ್ಲಿ ವಿದ್ಯಾವಂತ ಯುವಕರು ಸ್ಪರ್ಧೆಗಿಳಿಯುವ ಸೂಚನೆಯೂ ಕಾಣುತ್ತಿದೆ. ಒಟ್ಟಿನಲ್ಲಿ, ಗ್ರಾಮ ಪಂಚಾಯಿತಿ ಚುನಾವಣೆಯ ಕಣ ರಂಗೇರುತ್ತಿದ್ದು ಮತದಾರನ ನಿರ್ಣಯವೇನು ಎಂಬುದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!