Wednesday, 9th October 2024

ಪಕ್ಷ ಭೇದ ಮರೆತು ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಿ: ಕಮಕನೂರ

ಚಿತ್ತಾಪೂರ: ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಸಾರ್ವಜನಿಕರ ಸಂಖ್ಯೆಯ ಅನುಗುಣವಾಗಿ ಚಿತ್ತಾಪುರ ಮತಕ್ಷೇತ್ರ ಮುಂಚೂಣಿಯಲ್ಲಿರುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮತ್ತು ಸಮಾರಂಭದ ವಕ್ತಾರ ತಿಪ್ಪಣ್ಣಪ್ಪ ಕಮಕೂರು ತಿಳಿಸಿದರು.

ಪಟ್ಟಣದ ಅಂಬೀಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ನೂತನ ಎಐಸಿಸಿ ಅಧ್ಯಕ್ಷ ರಾಗಿ ಇದೆ ಡಿ.10 ರಂದು ಕಲಬುರ್ಗಿ ಜಿಲ್ಲೆಗೆ ಪ್ರಥಮವಾಗಿ ಆಗಮಿಸುತ್ತಿರುವ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರ ಅಭಿನಂದನಾ ಸಮಾರಂಭ ಕುರಿತು ಪೂರ್ವಭಾವಿ ಸಭೆ ಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಮತ್ತು ಅಭಿನಂದನಾ ಸಮಾರಂಭದ ಉಸ್ತು ವಾರಿಯಾದ ಕಮಕ ನೂರ ಅವರು ಮಾತನಾಡಿ, ಸಮಾರಂಭದಲ್ಲಿ ಸುಮಾರು 60 ಸಾವಿರಕ್ಕು ಹೆಚ್ಚು ಜನರು ಪಾಲ್ಗೊಳ್ಳಲಿದ್ದು ಅದರಲ್ಲಿ ಚಿತ್ತಾಪೂರ ಮತಕ್ಷೇತ್ರವು ಮುಂಚುಣಿಯಲ್ಲಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸುವ ಯುವಕರಿಗೆ ಪ್ರಿಯಾಂಕ್ ಖರ್ಗೆ ಮತ್ತು ಡಾ.ಮಲ್ಲಿ ಕಾರ್ಜುನ ಅವರ ಚಿತ್ರವಿರುವ ಟೀ ಶರ್ಟ್ ವ್ಯವಸ್ಥೆ ಮಾಡಲಾಗುವುದು ಈ ಕಾರ್ಯ ಕ್ರಮಕ್ಕೆ ಪಕ್ಷ ಭೇದ ಮರೆತು ಸಮಾರಂಭದಲ್ಲಿ ಪಾಲ್ಗೊಂಡು ಮಲ್ಲಿಕಾರ್ಜುನ ಖರ್ಗೆ ಅವರ ಅಭಿಮಾನ ಮೆರೆಯಬೇಕು ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಶ್ರೀ ನಾಗರೆಡ್ಡಿ ಪಾಟೀಲ್ ಕರದಾಳ, ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಮಹಮೂದ್ ಸಾಹೇಬ್, ಮಹಿಳಾ ಅಧ್ಯಕ್ಷೆ ಸ್ವಪ್ನಾ ಜೆ ಪಾಟೀಲ, ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಶಿವಾನಂದ ಪಾಟೀಲ್, ರಮೇಶ್ ಮರಗೋಳ, ಅಜೀಜ್ ಸೇಠ ರಾವೂರ್, ಮುಕ್ತಾರ್ ಪಟೇಲ್, ಚಂದ್ರ ಶೇಖರ ಕಾಶಿ, ಶೀಲಾ ಕಾಶಿ, ವೀರಣ್ಣ ಗೌಡ, ಜಗಣಗೌಡ ಪಾಟೀಲ್, ಸೇರಿದಂತೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.