Saturday, 18th May 2024

ಲೋಕಸಭೆ ಚುನಾವಣೆಯ ಎರಡನೇ ಹಂತ: ಶೇಕಡಾವಾರು ಮತದಾನ ಇಂತಿದೆ…

ಬೆಂಗಳೂರು: ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ, 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 88 ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ 11 ಗಂಟೆ ತನಕ ದೇಶಾದ್ಯಂತ ಉತ್ತಮ ಮಟ್ಟದಲ್ಲಿ ಮತದಾನ ನಡೆದಿದ್ದು, ತ್ರಿಪುರಾದಲ್ಲಿ 36.42%, ಛತ್ತೀಸ್‌ಗಢ- 35.47% ವೋಟಿಂಗ್ ಆಗಿದ್ದು, ಮಣಿಪುರದಲ್ಲಿ 33.22%, ಪಶ್ಚಿಮ ಬಂಗಾಳ- 31.25%, ಮಧ್ಯ ಪ್ರದೇಶ- 28.15% ಮತ್ತು ಅಸ್ಸಾಂನಲ್ಲಿ 27.43% ಮತದಾನ ವಾಗಿದೆ.

ರಾಜಸ್ಥಾನದಲ್ಲಿ 26.84%, ಜಮ್ಮು ಮತ್ತು ಕಾಶ್ಮೀರದಲ್ಲಿ 26.61%, ಕೇರಳ- 25.61%, ಉತ್ತರ ಪ್ರದೇಶ- 24.31%, ಕರ್ನಾಟಕ- 22.34%, ಬಿಹಾರ- 21.68% ಮತ್ತು ಮಹಾರಾಷ್ಟ್ರದಲ್ಲಿ 18.83% ಮತದಾನವಾಗಿದೆ. ದೇಶಾದ್ಯಂತ ಮತಗಟ್ಟೆಗಳಲ್ಲಿ ಜನರು ಬಿಸಿಲನ್ನೂ ಲೆಕ್ಕಿಸದೆ ತಮ್ಮ ಹಕ್ಕು ಚಲಾಯಿಸಲು ಮುಂದೆ ಬಂದಿದ್ದಾರೆ.

ಇಂದು ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ, 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 88 ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯುತ್ತಿದ್ದು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇಂದು ಬೆಳಗ್ಗಿನಿಂದಲೇ ಮತದಾನ ಆರಂಭವಾಗಿದ್ದು, ಜನರು ಬಿರುಸಿನಿಂದ ಮತದಾನ ಮಾಡಲು ಮತಗಟ್ಟೆ ಕೇಂದ್ರಗಳಿಗೆ ಬರುತ್ತಿದ್ದಾರೆ.

ಕೇರಳದ ಎಲ್ಲಾ 20 ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಕರ್ನಾಟಕದಲ್ಲಿ 14, ರಾಜಸ್ಥಾನದಲ್ಲಿ 13, ಉತ್ತರ ಪ್ರದೇಶದಲ್ಲಿ 8, ಮಹಾ ರಾಷ್ಟ್ರದಲ್ಲಿ 8, ಅಸ್ಸಾಂನಲ್ಲಿ 5, ಬಿಹಾರದಲ್ಲಿ 5, ಛತ್ತೀಸ್‌ಗಢದಲ್ಲಿ 3, ಪಶ್ಚಿಮ ಬಂಗಾಳದಲ್ಲಿ 3 ಮತ್ತು ತ್ರಿಪುರಾ, ಮಣಿಪುರ ಮತ್ತು ಜಮ್ಮುವಿನ ತಲಾ ಒಂದು ಸ್ಥಾನ ಸೇರಿದಂತೆ 88 ಲೋಕಸಭಾ ಸ್ಥಾನಗಳಿವೆ. ಮತ್ತು ಕಾಶ್ಮೀರದಲ್ಲಿ ಮತದಾನ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!