ಮುಡುಕುತೊರೆ ಜಾತ್ರಾ ಮಹೋತ್ಸವ: ಭಕ್ತರಿಗೆ ತೊಂದರೆಯಾಗದಂತೆ ಅಗತ್ಯ ಸಿದ್ಧತೆಗೆ ಸೂಚನೆ: ಜಿ.ಲಕ್ಷ್ಮೀ ಕಾಂತ ರೆಡ್ಡಿ
ಜ.31 ರಿಂದ ಫೆಬ್ರವರಿ 16ರವರೆಗೆ ಮುಡುಕುತೊರೆ ಜಾತ್ರಾ ಮಹೋತ್ಸವ ನಡೆಯಲಿದೆ, ಫೆಬ್ರವರಿ 7 ರಂದು ರಥೋತ್ಸವ, ಫೆಬ್ರವರಿ 10ಕ್ಕೆ ತೆಪ್ಪೋತ್ಸವ ಸಮಾರಂಭ. 17 ದಿನಗಳ ಕಾಲ ಜಾತ್ರಾ ಮಹೋ ತ್ಸವ ನಡೆಯಲಿದೆ. ಈ ಸಂಬಂಧ ಅಧಿಕಾರಿಗಳು ಯಾವುದೇ ತೊಂದರೆ ಆಗದಂತೆ ಮುಂಜಾಗೃತಾ ಕ್ರಮ ಕೈ ಗೊಳ್ಳಬೇಕು ಎಂದು ತಿಳಿಸಿದರು


ಮೈಸೂರು: ಐತಿಹಾಸಿಕ ಮುಡುಕುತೊರೆ ಜಾತ್ರಾ ಮಹೋತ್ಸವ ಜನವರಿ 31ರಿಂದ ಫೆಬ್ರವರಿ 16ರವರೆಗೆ ನಡೆಯಲಿದ್ದು ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳು ವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮೀ ಕಾಂತ ರೆಡ್ಡಿ ತಿಳಿಸಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಡುಕುತೊರೆ ಜಾತ್ರಾ ಮಹೋತ್ಸವ ಸಂಬಂಧ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಸಭೆ ನಡೆಸಿ ಮಾತನಾಡಿದರು.
ಇದನ್ನೂ ಓದಿ: Mysore News: ಮೈಸೂರು ಮಹಾರಾಣಿ ಕಾಲೇಜಿನ ಗೋಡೆ ಕುಸಿದು ಓರ್ವ ಸಾವು
ಜ.31 ರಿಂದ ಫೆಬ್ರವರಿ 16ರವರೆಗೆ ಮುಡುಕುತೊರೆ ಜಾತ್ರಾ ಮಹೋತ್ಸವ ನಡೆಯಲಿದೆ, ಫೆಬ್ರವರಿ 7 ರಂದು ರಥೋತ್ಸವ, ಫೆಬ್ರವರಿ 10ಕ್ಕೆ ತೆಪ್ಪೋತ್ಸವ ಸಮಾರಂಭ. 17 ದಿನಗಳ ಕಾಲ ಜಾತ್ರಾ ಮಹೋ ತ್ಸವ ನಡೆಯಲಿದೆ. ಈ ಸಂಬಂಧ ಅಧಿಕಾರಿಗಳು ಯಾವುದೇ ತೊಂದರೆ ಆಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಆರೋಗ್ಯ ಇಲಾಖೆಯಿಂದ ಆಂಬುಲೆನ್ಸ್ ಹಾಗೂ ವೈದ್ಯರು ತಂಡ ಜಾತ್ರಾ ಮಹೋತ್ಸವದಲ್ಲಿ ಇರಬೇಕು. ಚೆಸ್ಕಾಂ ಇಲಾಖೆಯಿಂದ ವಿದ್ಯುತ್ ದೀಪಾಲಂಕಾರ ಮಾಡಬೇಕು. ತಾತ್ಕಾಲಿಕ ಶೌಚಾ ಲಯ, ಮೊಬೈಲ್ ಶೌಚಾಲಯ ಹಾಗೂ ಬಟ್ಟೆ ಬದಲಿಸುವ ಕೊಠಡಿ ನಿರ್ಮಿಸಿ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದರು.
ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್, ಧ್ವನಿ ವರ್ಧಕ , ಸಿಸಿ ಕ್ಯಾಮೆರಾ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಜಾತ್ರಾ ಮಾಳದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಜಾತ್ರಾ ಪ್ರದೇಶದಲ್ಲಿ ಸ್ವಚ್ಚತೆ ಹಾಗೂ ನೈರ್ಮಲೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಉತ್ತಮ ರಾಸುಗಳಿಗೆ ಆಯ್ಕೆ ಸಂಬಂಧ ಜನವರಿ 31 ರಿಂದ ಫೆಬ್ರವರಿ 3 ವರೆಗೆ ರಾಸುಗಳ ರೈತರು ಸ್ಥಳದಲ್ಲಿದ್ದು ಆಯ್ಕೆ ಸಂಬಂಧ ನೊಂದಣಿ ಮಾಡಿಕೊಳ್ಳಬೇಕು. ಫೆಬ್ರವರಿ 5 ರಂದು ಉತ್ತಮ ರಾಸು ಗಳ ಆಯ್ಕೆ ನಡೆಯುತ್ತದೆ. ಆದರೆ ಕೊನೆಯ ಎರಡು ದಿನ ಅಥವಾ ಆಯ್ಕೆಯ ದಿನ ನೇರವಾಗಿ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ಪಶುಪಾಲನಾ ಇಲಾಖೆಯ ಸಹಾಯ ನಿರ್ದೇಶಕ ರಾದ ಡಾ ಲಿಂಗರಾಜು ಅವರು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಟಿ ನರಸೀಪುರ ತಹಶೀಲ್ದಾರ್ ಸುರೇಶ್ ಗರುಡಾಚಾರ್, ಮುಜರಾಯಿ ಇಲಾಖೆಯ ತಹಶೀಲ್ದಾರ್ ವಿದ್ಯುತ್ ಲತಾ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.