Saturday, 27th April 2024

ದೇಗುಲದ ಆದಾಯವನ್ನು ಸರ್ಕಾರ ಒಳ್ಳೆಯ ಯೋಜನೆಗಳಿಗೆ ಬಳಸಿಕೊಳ್ಳಲಿ

ತುಮಕೂರು: ಹಿಂದೂ ದೇವಸ್ಥಾನಗಳಿಗೆ ಮುಜರಾಯಿ ಇಲಾಖೆಯಿಂದ ಮುಕ್ತಿ ನೀಡುವ ವಿಚಾರಕ್ಕೆ ಪ್ರತಿಕ್ರಿಯಿ ಸಿರುವ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮಿಜಿಗಳು, ದೇವಸ್ಥಾನಗಳನ್ನು ಸರ್ಕಾರದ ಹಿಡಿತದಿಂದ ಮುಕ್ತ ಗೊಳಿಸುವುದು ಸಂತಸದ ವಿಚಾರ. ಜೊತೆಗೆ ಹೆಚ್ಚು ಬರುವ ಆದಾಯ ವನ್ನು ಸರ್ಕಾರ ಒಳ್ಳೆಯ ಯೋಜನೆಗಳಿಗೆ ಬಳಸಿಕೊಳ್ಳಲಿ ಎಂದಿದ್ದಾರೆ.

ದೇವಸ್ಥಾನ ಒಬ್ಬರಿಗೆ ಸೇರಿದಂತಲ್ಲ. ಬೇರೆ ಬೇರೆ ಊರುಗಳಿಂದ ಭಕ್ತರು ಬಂದು ಭಕ್ತಿ ಸೇವೆ ಸಲ್ಲಿಸ್ತಾರೆ. ಹಾಗಾಗಿ ದೇವಸ್ಥಾನದ ಆದಾಯದಿಂದ ದೇವಸ್ಥಾನ ಮೂಲ ಸೌಕರ್ಯ ಹೆಚ್ಚಿಸಲಿ. ಅಲ್ಲಿ ಕಾರ್ಯನಿರ್ವಹಿಸುವ ಅರ್ಚಕರ ಜೀವನ ಭದ್ರತೆಗೆ ಅನುಕೂಲ ಆಗಲಿ. ಅದನ್ನೂ ಮೀರಿ ಆದಾಯ ಇದ್ದರೆ ಸರ್ಕಾರ ಸಾಮಾಜಿಕ ಕಾರ್ಯಕ್ಕೆ ಬಳಸಿಕೊಳ್ಳಲಿ.

ಈ ರೀತಿಯ ಕಾನೂನು ತರುವಂಥಹದ್ದು ಒಳ್ಳೆಯದು. ನೀರಾವರಿ ಯೋಜನೆ, ಬಡತನ ನಿರ್ಮೂಲನೆ, ಒಳ್ಳೆ ಕೆಲಸಕ್ಕೆ ದೇವಸ್ಥಾನದ ದುಡ್ಡು ವಿನಿಯೋಗ ಆಗಲಿ. ಈ ಹಣದಿಂದ ಮಾಡಿದ ಸಾಮಾಜಿಕ ಕೆಲಸ ಜನಜನಿತ ವಾಗುವಂತೆ ಉಳಿಯಲಿ. ಚರ್ಚ್, ಮಸೀದಿ‌ ಎಂದಲ್ಲ.

ಕಾನೂನು ಎಲ್ಲರಿಗೂ ಒಂದೇ‌ ರೀತಿ ಇರಬೇಕು. ಕಾನೂನು ಎಂದ ಮೇಲೆ ದೇಶದ ಪ್ರತಿಯೊಬ್ಬ ಪ್ರಜೆಗೂ ಅನ್ವಯಿಸುವಂತಿರಬೇಕು. ಮಠಗಳು ತಮ್ಮದೇ ಆದ ಅಸ್ಥಿತ್ವ ಹೊಂದಿದೆ. ತಮ್ಮದೇ ಸೇವೆ ಮಾಡಿಕೊಂಡು ಬಂದಿವೆ. ಸರ್ಕಾರ ಇದರಲ್ಲಿ ಮಧ್ಯಸ್ಥಿಕೆ ವಹಿಸುವಂತಹ ಅವಶ್ಯಕತೆ ಇರೋದಿಲ್ಲ ಎಂದಿದ್ದಾರೆ.

error: Content is protected !!