Sunday, 19th May 2024

ಸ್ವಚ್ಛತೆಯಲ್ಲಿ ತುಮಕೂರು ಪಾಲಿಕೆಗೆ 2ನೇ ಸ್ಥಾನ: ಆಯುಕ್ತೆ ರೇಣುಕಾ

ತುಮಕೂರು: ಕೇಂದ್ರ ಸರಕಾರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಚ ಸರ್ವೇಕ್ಷಣೆಗೆ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ನೀಡಬೇಕು ಎಂಬ ಹಿನ್ನೆಲೆಯಲ್ಲಿ ಪದೇ ಪದೇ ಹೇಳುತ್ತಾ ಬಂದಿದೆ. ಹೀಗಾಗಿ ಸಮೀಕ್ಷೆಯಲ್ಲಿ 48ನೇ ಸ್ಥಾನ ದಲ್ಲಿದ್ದ ತುಮಕೂರು ಈಗ ಎರಡನೇ ಸ್ಥಾನಕ್ಕೆ ಬಂದಿರುವುದು ಹೆಮ್ಮೆ ತಂದಿದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು.

ನಗರದ ಟೌನ್‌ಹಾಲ್ ವೃತ್ತದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಏರ್ಪಡಿಸಿದ್ದ ಸ್ವಚ್ಚ ಸರ್ವೇಕ್ಷಣ್- 2021 ಅಂಗವಾಗಿ ಸೈಕ್ಲಾಥಾನ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಂಬರುವ ದಿನಗಳಲ್ಲಿ ಮೇಯರ್ ಅವರ ನಿರೀಕ್ಷೆಗೆ ಅನುಗುಣವಾಗಿ ಮೊದಲ ಸ್ಥಾನಕ್ಕೆ ತರುವುದರ ಜತೆಗೆ ಹಸಿರು ನಗರ ವನ್ನಾಗಿ ಮಾಡೋಣ. ಪ್ರತಿಯೂಂದು ಕುಟುಂಬದವರು ಮನೆಗೆ ಒಂದು ಸಸಿ ನೆಡುವ ಮೂಲಕ ನಗರವನ್ನು ಹಸಿರುನ್ನಾಗಿ ಸೋಣ. ನಗರದ ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡೋಣ. ಇದಕ್ಕೆ ಮಹಾನಗರ ಪಾಲಿಕೆಯ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ನಗರದ 35 ವಾರ್ಡ್ಗಳಲ್ಲಿ ದಿನನಿತ್ಯ ಪಾಲಿಕೆಯ ಕಾರ್ಪೋರೇಟರ್‌ಗಳು ಸೇರಿದಂತೆ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿ ಗಳು, ಸಿಬ್ಬಂದಿಗಳು, ಪೌರ ಕಾರ್ಮಿಕರು, ಕುಡಿಯುವ ನೀರು, ರಸ್ತೆಗಳು, ಚರಂಡಿ ವ್ಯವಸ್ಥೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ರೋಗ ಮುಕ್ತ ನಗರವನ್ನಾಗಿ ಮಾಡಲು ಪಾಲಿಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.

ಮೇಯರ್ ಫರೀದಾಬೇಗಂ ಮತನಾಡಿ, ಸ್ವಚ್ಚತೆಯಲ್ಲಿ 48ನೇ ಸ್ಥಾನದಲ್ಲಿದ್ದ ತುಮಕೂರು ಮಹಾನಗರ ಪಾಲಿಕೆ ಈಗ 2ನೇ ಸ್ಥಾನದಲ್ಲಿದೆ. ಇದು ಮೊದಲನೆ ಸ್ಥಾನಕ್ಕೆ ಬರಲು ಪಾಲಿಕೆಯ ಸಿಬ್ಬಂದಿಗಳು ಸೇರಿದಂತೆ ನಗರದ ನಾಗರಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ತುಮಕೂರು ಮಹಾನಗರ ಪಾಲಿಕೆ ಮೈಸೂರನ್ನು ಹಿಂದಿಕ್ಕಿ ಮೊದಲನೆಯಯ ಸ್ಥಾನಕ್ಕೆ ಬರುವವರೆಗೂ ನಾವು ವಿರಮಿಸುವು ದಿಲ್ಲ. ಪಾಲಿಕೆಯ 35 ವಾರ್ಡ್ ಸದಸ್ಯರೊಂದಿಗೆ ಐನೂರಕ್ಕೂ ಹೆಚ್ಚು ಮಂದಿ ಪೌರ ಕಾರ್ಮಿಕರು, ಅಧಿಕಾರಿಗಳು, ಸಿಬ್ಬಂದಿಗಳ ಜತೆಗೂಡಿ ಸ್ವಚ್ಚತೆಗೆ ನಗರದ ಪ್ರತಿಯೊಬ್ಬರೂ ಸಹಕರಿಸಿದರೆ ರೋಗ ಮುಕ್ತ ನಗರವನ್ನಾಗಿ ಮಾಡಬಹುದು ಎಂದರು.

ಜಾಥಾದಲ್ಲಿ ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಕೆಎಸ್‌ಆರ್‌ಪಿ ಘಟಕದ ಕಮಾಂಡೆAಟ್ ಯುವ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಕಾರ್ಪೋರೇಟರ್‌ಗಳಾದ, ಮಲ್ಲಿಕಾರ್ಜುನ್, ರಮೇಶ್, ಶ್ರೀನಿವಾಸ್, ಧರಣೇಂದ್ರಕುಮಾರ್, ಪರಿಸರ ಇಂಜಿನಿಯರ್ ಕೃಷ್ಣಮೂರ್ತಿ, ನಿಖಿತಾ ಮತ್ತಿತರರು ಭಾಗವಹಿಸಿದ್ದರು.

ನಗರದ ಟೌನ್‌ಹಾಲ್ ವೃತ್ತದಿಂದ ಆರಂಭವಾದ ಸೈಕಲ್ ಜಾಥಾ ಅಶೋಕ ರಸ್ತೆ, ಕೋತಿತೋಪು, ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಸರ್ಕಲ್ ಮುಖೇನ ಸಂಚರಿಸಿ ಎಸ್.ಎಸ್.ಪುರಂನ ಕೆಂಪಣ್ಣ ಅಂಗಡಿ ಸರ್ಕಲ್‌ನಲ್ಲಿ ಮುಕ್ತಾಯಗೊಂಡಿತು.

Leave a Reply

Your email address will not be published. Required fields are marked *

error: Content is protected !!