Saturday, 27th April 2024

“ನನ್ನ ಮತ ಮಾರಾಟಕ್ಕಿಲ್ಲ” ಅಭಿಯಾನ ಕೈಗೊಳ್ಳಲು ಕರೆ ನೀಡಿದ ಕಾಗೇರಿ

ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆಯ ಸಂವಾದ

ಕಲಬುರಗಿ: ಬುಧವಾರ ಇಲ್ಲಿನ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ವಿಧಾನಸಭೆಯ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನೇತೃತ್ವದಲ್ಲಿ “ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ” ಕುರಿತ ಕಾರ್ಯಕ್ರಮದಲ್ಲಿ ಮತದಾನ ಮತ್ತು ಚುನಾವಣೆಯ ಮಹತ್ವದ ಕುರಿತು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸಂವಾದದಲ್ಲಿ ಅರಿವು ಮೂಡಿಸಿದರು.

ಸದ್ಯ ಚುನಾವಣೆ ಆಯೋಗ ಮತದಾನ ಹಾಗೂ ಚುನಾವಣೆ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಆದರೆ, ಕೇವಲ ರಾಜಕೀಯ ನಾಯಕರಲ್ಲದೇ, ಸಾರ್ವಜನಿಕರು ಸಹ ಪಾರದರ್ಶಕ ಚುನಾವಣೆ ನಡೆಸಲು ಕೈಜೋಡಿಸಬೇಕು. ಹಣ, ಹಂಡೆ ಹಾಗೂ ಜಾತಿ ವ್ಯಾಮೋಹಕ್ಕೆ ಒಳಗಾಗದೆ. ಅರ್ಹ ಅಭ್ಯರ್ಥಿ ಆಯ್ಕೆಗೆ ನಾವೆಲ್ಲರೂ ಇಲ್ಲಿಂದಲೇ ಮುನ್ನುಡಿ ಬರೆಯಬೇಕು ಎಂದು ಸಲಹೆ ನೀಡಿದರು.

ಪ್ರಸ್ತುತ ರಾಜಕೀಯದಲ್ಲಿ ಹಣಬಲ, ತೋಳಬಲ ಹಾಗೂ ಜಾತಿಬಲದ ಪಾರುಪತ್ಯ ನಡೆಯುತ್ತಿದ್ದು, ನಮ್ಮ ಮತವನ್ನು ಯಾವುದೇ ಆಮಿಷಕ್ಕೆ ಬಲಿಯಾಗದೆ “ನನ್ನ ಮತ ಮಾರಾಟಕ್ಕಿಲ್ಲ” ಎಂದು ಊರು, ಕೇರಿ, ಹಳ್ಳಿ, ನಗರ ಹಾಗೂ ಜಿಲ್ಲೆಗಳಲ್ಲಿ ರಾಷ್ಟ್ರೀಯ ಅಭಿಯಾನದ ಮೂಲಕ ಪಾರದರ್ಶಕ ಚುನಾವಣೆ ನಡೆಸಲು ಒಗ್ಗೂಡಬೇಕು ಎಂದು ಸಭಾಪತಿ ಕಾಗೇರಿ ಅವರು ಕರೆ ನೀಡಿದರು.

ಮುಂದಿನ ಯುವ ಪೀಳಿಗೆ ಸಂವಿಧಾನದ ರುಚಿ ನೋಡಬೇಕಾದರೆ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳು ಜವಾ ಬ್ದಾರಿ ಹೊತ್ತು ಕೆಲಸ ಮಾಡಬೇಕು. ಸಾರ್ವಜನಿಕರು ಪ್ರಜಾಪ್ರಭುತ್ವದ ಕಾವಲು ಗಾರರಾಗಿ ತಮ್ಮ ಕರ್ತವ್ಯ ನಿಭಾಯಿಸಬೇಕು. ಅಲ್ಲದೇ, ಹಿರಿಯ ನಾಗರೀಕರ ಮೌನವಾಗಿರದೆ ಸಮಾಜದ ಹಾಗೂ ಸರಕಾರದ ಆಗುಹೋಗುಗಳ ಕುರಿತು ಮಾತನಾಡಬೇಕು. ಅವರ ಮೌನದಿಂದ ಬೆಲೆ ತೆತ್ತುವ ಸನ್ನಿವೇಶ ಸೃಷ್ಟಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜಕೀಯ ಪಕ್ಷಗಳು ದೊಡ್ಡ ಜವಾಬ್ದಾರಿ ಹೊಂದಿವೆ. ಆಂತರಿಕ ಪ್ರಜಾ ಪ್ರಭುತ್ವ, ತತ್ವಸಿದ್ಧಾಂತ, ಸಾಮಾಜಿಕ ಕಳಕಳಿ ಹಾಗೂ ಬದ್ಧತೆ ಇರಿಸಿಕೊಂಡು. ಚುನಾವಣೆ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಅನುಷ್ಠಾನಗೊಳಿಸಬೇಕು. ಪ್ರಾದೇಶಿಕ ಭಾವನೆ, ವಂಶ ರಾಜಕಾರಣ ಹಾಗೂ ಸೀಮಿತ ರಾಜಕೀಯ ಕೊನೆಗೊಳಿಸಿ ಜವಾಬ್ದಾರಿಯುತವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಯಶವಂತ ಗುರುಕರ್ ಅವರು ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿ, ಸ್ವಚ್ಛ ಮತ್ತು ನ್ಯಾಯ ಸಮ್ಮತ ಚುನಾವಣೆ ಯಿಂದ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಇಂದಿಲ್ಲಿ ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯ ತೆಯ ಸಂವಾದ ಕಾರ್ಯಕ್ರಮದ ಮೂಲಕ ಅದನ್ನು ಅರಿಯುವ ಪ್ರಯತ್ನ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಹಾಗೂ ಕೃಷಿ, ಸಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ್ ಪಾಟೀಲ್ ಸೇಡಂ, ಶಾಸಕರಾದ ಎಂ. ವೈ ಪಾಟೀಲ್, ರಾಜಕುಮಾರ ಪಾಟೀಲ್ ತೆಲ್ಕೂರ್, ಬಸವರಾಜ್ ಮತ್ತಿಮಡು, ಎಂಎಲ್ಸಿ ಡಾ. ಬಿ.ಜಿ ಪಾಟೀಲ್, ನಗರ ಪೊಲೀಸ್ ಆಯುಕ್ತ ಡಾ.ವೈ ಎಸ್ ರವಿಕುಮಾರ್, ಜಿಲ್ಲಾಪಂಚಾಯತ್ ಸಿಇಓ ಡಾ. ಗೀರೀಶ್ ಬದೋಲೆ, ಡಿಸಿಪಿ ಅಡ್ದುರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ದೇವಿದಾಸ್ ಪಾಟೀಲ್, ಗುವಿವಿ ಕುಲಪತಿ ದಯಾನಂದ ಅಗಸರ ಸೇರಿದಂತೆ ಅನೇಕರು ಇದ್ದರು.

ರಂಗಮಂದಿರ ಹೌಸ್ ಫುಲ್ ಕಾಗೇರಿ ಪ್ರಶಂಸೆ: ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆಯ ಸಂವಾದ ಕಾರ್ಯ ಕ್ರಮದಲ್ಲಿ ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನೀಯರು, ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಕುಳಿತುಕೊಳ್ಳಲು ಸ್ಥಳವಿಲ್ಲದೆ ಡಾ. ಎಸ್.ಎಂ ಪಂಡಿತ್ ರಂಗ ಮಂದಿರದ ಸಂಪೂರ್ಣ ಭರ್ತಿಯಾಗಿದ್ದನ್ನು ಕಂಡ ವಿಧಾನಸಭೆಯ ಸಭಾಪತಿ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಅವರು ಜಿಲ್ಲಾಡಳಿತದ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

*

ಜನಗಳು ಹಣ, ಹೆಂಡ ಹಾಗೂ ಜಾತಿಯ ಆಮಿಷಕ್ಕೆ ಬಲಿಪಶು ಆಗದೆ. “ನನ್ನ ಮತ ಮಾರಾಟಕ್ಕಿಲ್ಲ” ಎಂಬ ಸಂದೇಶವನ್ನು ಸಾರುವ ಮೂಲಕ ಇಡೀ ರಾಜ್ಯಕ್ಕೆ ಕಲಬುರಗಿ ಜಿಲ್ಲೆ ಮಾದರಿಯಾಗಲಿ.

ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ಸಭಾಪತಿಗಳು

ಸಾರ್ವಜನಿಕರೊಂದಿಗೆ ಸಂವಾದ: ಪ್ರಮುಖವಾಗಿ ನಗರದಲ್ಲಿ ಬುಧವಾರ ನಡೆದ ಚುನಾವಣೆಯ ಸುಧಾರಣೆಯಲ್ಲಿನ ಅಗತ್ಯತೆ ಕುರಿತ ಸಂವಾದದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಕೇಳಿದ ಹಲವಾರು ಪ್ರಶ್ನೆಗಳಿಗೆ ಸಭಾಪತಿ ಕಾಗೇರಿ ಅವರು ಒಬ್ಬೊಬ್ಬ ರಂತೆ ಉತ್ತರಿಸಿ, ಅನೇಕರಿಗೆ ಚುನಾವಣೆ ಹಾಗೂ ಮತದಾನದ ಬಗ್ಗೆ ಇದ್ದ ಗೊಂದಲ ನೀವಾರಿಸಿದರು.

error: Content is protected !!