ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion: ಎಥ್ನಿಕ್‌ ಗೌನ್‌ನಲ್ಲಿ ನಟಿ ಮೋಕ್ಷಿತಾ ಪೈ ರಾಯಲ್‌ ಲುಕ್‌

Star Fashion: ನಟಿ ಹಾಗೂ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಮೋಕ್ಷಿತಾ ಪೈ, ಟ್ರೆಡಿಷನಲ್‌ ಲುಕ್‌ ನೀಡುವ ಎಥ್ನಿಕ್‌ ಸಿಲ್ಕ್‌ ಗೌನ್‌ನಲ್ಲಿ ರಾಯಲ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದ್ಯಾವ ಬಗೆಯ ಗೌನ್‌? ಈ ಕುರಿತಂತೆ ಖುದ್ದು ಅವರೇ ವಿಶ್ವವಾಣಿ ನ್ಯೂಸ್‌ಗೆ ವಿವರಿಸಿದ್ದಾರೆ. ಜತೆಗೆ ಈ ಎಲಿಗೆಂಟ್‌ ಲುಕ್‌ ಪಡೆಯಲು ಯಾವ ಬಗೆಯ ಟಿಪ್ಸ್‌ ಫಾಲೋ ಮಾಡಬೇಕು? ಎಂಬುದನ್ನು ಸಿಂಪಲ್ಲಾಗಿ ತಿಳಿಸಿದ್ದಾರೆ.‌

ಎಥ್ನಿಕ್‌ ಗೌನ್‌ನಲ್ಲಿ ನಟಿ ಮೋಕ್ಷಿತಾ ಪೈ ರಾಯಲ್‌ ಲುಕ್‌

ಚಿತ್ರಗಳು: ಮೋಕ್ಷಿತಾ ಪೈ ನಟಿ ಹಾಗೂ ಬಿಗ್‌ಬಾಸ್‌ ಮಾಜಿ ಸ್ಪರ್ಧಿ

| ಶೀಲಾ ಸಿ. ಶೆಟ್ಟಿ, ಬೆಂಗಳೂರು

ಟ್ರೆಡಿಷನಲ್‌ ಲುಕ್‌ ನೀಡುವ ಎಥ್ನಿಕ್‌ ಗೌನ್‌ನಲ್ಲಿ ನಟಿ ಹಾಗೂ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಮೋಕ್ಷಿತಾ ಪೈ ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಇವರ ಈ ರಾಯಲ್‌ ಲುಕ್‌ ಸಮ್ಮರ್‌ ಎಥ್ನಿಕ್‌ ಫ್ಯಾಷನ್‌ನಲ್ಲಿ (Star Fashion) ಟಾಪ್‌ ಲಿಸ್ಟ್‌ಗೆ ಸೇರಿದೆ. ನಟಿ ಮೋಕ್ಷಿತಾ ಪೈ ಹೇಳುವಂತೆ, ಈ ಗೌನ್‌ನನ್ನು ತಿಳಿ ವರ್ಣದ ಸೀರೆಯಲ್ಲಿ ವಿನ್ಯಾಸಗೊಳಿಸಲಾಗಿದೆ. ನೆಕ್‌ಲೈನನ್ನು ಸಿಂಪಲ್‌ ಹ್ಯಾಂಡ್‌ವರ್ಕ್‌ನಿಂದ ಡಿಸೈನ್‌ಗೊಳಿಸಲಾಗಿದೆ. ನೋಡಲು ರಾಯಲ್‌ ಲುಕ್‌ ನೀಡುವ ಈ ಗೌನ್‌ ರಿಚ್‌ ಆಗಿ ಕಾಣಿಸಬೇಕೆಂದು ಈ ಸೀಸನ್‌ನ ಪಾಸ್ಟೆಲ್‌ ಶೇಡ್‌ಗೆ ಹಾಗೂ ಗೋಲ್ಡ್‌ ಶೇಡ್‌ ಚೂಸ್‌ ಮಾಡಿದ್ದೇನೆ. ಇನ್ನು, ಈ ಗೌನ್‌ನ ಮತ್ತಷ್ಟು ಅಂದ ಹೆಚ್ಚಿಸಿರುವುದು ವೇಸ್ಟ್‌ ಬ್ಯಾಂಡ್‌ ಅಂದರೇ, ಕಮರ್‌ಬಾಂದ್‌. ಇದನ್ನು ಖುದ್ದು ನಾನೇ ಪ್ಲಾನ್‌ ಮಾಡಿ, ಕಸ್ಟಮೈಸ್ಡ್‌ ಮಾಡಿ, ವಿನ್ಯಾಸ ಮಾಡಿಸಿದ್ದೇನೆ. ಇದಕ್ಕೂ ಕೂಡ ಹ್ಯಾಂಡ್‌ ವರ್ಕ್‌ ಮಾಡಿಸಲಾಗಿದೆ. ನನ್ನ ಪ್ರಕಾರ, ಪಾಸ್ಟೆಲ್‌ ಕಲರ್‌ನ ಗೌನ್‌ಗಳು ಈ ಸಮ್ಮರ್‌ ಸೀಸನ್‌ನಲ್ಲಿ ಧರಿಸಿದಾಗ ರಿಚ್‌ ಲುಕ್‌ ನೀಡುತ್ತದೆ. ಹಾಗಾಗಿ ಈ ಶೇಡ್‌ನದ್ದನ್ನು ಆಯ್ಕೆ ಮಾಡಿದ್ದೇನೆ ಎಂದಿದ್ದಾರೆ.

5

ಸಮ್ಮರ್‌ಗೆ ಲೈಟ್‌ ಶೇಡ್‌ ಗೌನ್‌

ಈ ಸೀಸನ್‌ನಲ್ಲಿ ಆದಷ್ಟೂ ಡಾರ್ಕ್‌ ಶೇಡ್‌ ಆಯ್ಕೆ ಮಾಡುವುದಕ್ಕಿಂತ ತಿಳಿ ವರ್ಣವನ್ನು ಚೂಸ್‌ ಮಾಡುವುದು ಉತ್ತಮ. ಡಿಸೈನ್‌ ಕೂಡ ಅಷ್ಟೇ! ಸಿಂಪಲ್‌ ಲುಕ್‌ ನೀಡುವ ಹ್ಯಾಂಡ್‌ವರ್ಕ್‌ ಮಾಡಿಸಿದಾಗ ಎಂತಹ ಗೌನ್‌ಗಳು ಕೂಡ ಸಖತ್ತಾಗಿ ಕಾಣಿಸುತ್ತವೆ. ನೋಡಲು ರಾಯಲ್‌ ಲುಕ್‌ ನೀಡುತ್ತವೆ ಎನ್ನುತ್ತಾರೆ ಮೋಕ್ಷಿತಾ. ಇನ್ನು, ಇದರೊಂದಿಗೆ ಗೌನ್‌ಗೆ ತಕ್ಕಂತೆ ಆಭರಣಗಳನ್ನು ಧರಿಸಿದಾಗ ಅತ್ಯಾಕರ್ಷಕವಾಗಿ ಕಾಣಿಸುವುದರಲ್ಲಿ ಯಾವುದೇ ಸಂಶಯವಿಲ್ಲ! ಎನ್ನುತ್ತಾರೆ.

6

ಎಥ್ನಿಕ್‌ ಗೌನ್‌ ಪ್ರಿಯರಿಗೆ ಮೋಕ್ಷಿತಾ 7 ಟಿಪ್ಸ್‌

  • ನಿಮ್ಮ ಸ್ಕಿನ್‌ಟೋನ್‌ಗೆ ಹೊಂದುವಂತಹ ಲೈಟ್‌ ವರ್ಣವನ್ನು ಚೂಸ್‌ ಮಾಡಿ.
  • ಸಿಂಗಲ್‌ ಪೀಸ್‌ ಆಗಿರುವುದರಿಂದ ಸಮ್ಮರ್‌ನಲ್ಲಿ ಎಥ್ನಿಕ್‌ ಗೌನ್‌ ಕಂಫರ್ಟಬಲ್‌ ಎಂದೆನಿಸುವುದು.
  • ಗೋಲ್ಡನ್‌ ಹ್ಯಾಂಡ್‌ವರ್ಕ್‌ ವಿನ್ಯಾಸ ಮಾಡಿಸುವುದರಿಂದ ಎಥ್ನಿಕ್‌ ಗೌನ್‌ ರಾಯಲ್‌ ಲುಕ್‌ ಪಡೆಯುತ್ತದೆ.
  • ಕಸ್ಟಮೈಸ್ಡ್‌ ಕಮರ್‌ಬಾಂದ್‌ ಗೌನ್‌ನ ಅಂದ ಹೆಚ್ಚಿಸಬಲ್ಲದು.
  • ಮೇಕಪ್‌, ಹೇರ್‌ಸ್ಟೈಲ್‌ ಹಾಗೂ ಆಕ್ಸೆಸರೀಸ್‌ ಗೌನ್‌ಗೆ ಹೊಂದುವಂತಿರಲಿ.
  • ರಾಯಲ್‌ ಲುಕ್‌ಗಾಗಿ ಆದಷ್ಟೂ ಸೂಕ್ತ ಫ್ಯಾಬ್ರಿಕ್‌ ಚೂಸ್‌ ಮಾಡಿ.
  • ಆದಷ್ಟೂ ಸೀಸನ್‌ಗೆ ತಕ್ಕಂತೆ ಲೈಟ್‌ವೈಟ್‌ ಬ್ರಿಥೆಬಲ್‌ ಗೌನ್‌ ಆಯ್ಕೆ ಮಾಡಿ, ಧರಿಸಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Resortwear Fashion: ಸಮ್ಮರ್‌ನಲ್ಲಿ ರೆಸಾರ್ಟ್‌ವೇರ್‌ ಫ್ಯಾಷನ್‌ ಹಂಗಾಮ