Viral Video: ಗೆಳತಿಯನ್ನು ಸೂಟ್‍ಕೇಸ್‍ನಲ್ಲಿಟ್ಟು ಬಾಯ್ಸ್ ಹಾಸ್ಟಲ್‍ಗೆ ಕರೆತಂದ ವಿದ್ಯಾರ್ಥಿ; ಕೊನೆಗೆ ಆಗಿದ್ದೇನು?
ಹರಿಯಾಣದ ಸೋನಿಪತ್‍ನ ಒಪಿ ಜಿಂದಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ಸೂಟ್‍ಕೇಸ್‍ನಲ್ಲಿ ಬಚ್ಚಿಟ್ಟುಕೊಂಡು ಬಾಯ್ಸ್ ಹಾಸ್ಟಲ್‍ಗೆ ಕರೆತಂದಿದ್ದಾನೆ. ಆದರೆ ಕೊನೆ ಕ್ಷಣದಲ್ಲಿ ಆತನ ಅದೃಷ್ಟ ಕೈಕೊಟ್ಟಿದ್ದು. ಸೆಕ್ಯೂರಿಟಿ ಗಾರ್ಡ್ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಚಂಡೀಗಢ: ಮನೆಯವರ ಕಣ್ಣುತಪ್ಪಿಸಿ ಪ್ರೇಮಿಯನ್ನು ಭೇಟಿ ಮಾಡಲು ಬೀರುವಿನಲ್ಲಿ, ಸೂಟ್‍ಕೇಸ್‍ನಲ್ಲಿ ಬಚ್ಚಿಟ್ಟುಕೊಂಡು ಬರುವುದನ್ನು ನಾವು ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ತನ್ನ ಗೆಳತಿಯನ್ನು ಸೂಟ್‍ಕೇಸ್‍ನಲ್ಲಿ ಬಚ್ಚಿಟ್ಟುಕೊಂಡು ಬಾಯ್ಸ್ ಹಾಸ್ಟಲ್‍ಗೆ ಕರೆತಂದು ನಂತರ ಸೆಕ್ಯೂರಿಟಿ ಗಾರ್ಡ್ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ಹರಿಯಾಣದ ಸೋನಿಪತ್‍ನ ಒಪಿ ಜಿಂದಾಲ್ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ವೈರಲ್ ವಿಡಿಯೊದಲ್ಲಿ, ಹಾಸ್ಟೆಲ್‍ನ ಸೆಕ್ಯೂರಿಟಿ ಗಾರ್ಡ್ ಸೂಟ್‍ಕೇಸ್ ತೆರೆಯಲು ಪ್ರಯತ್ನಿಸುತ್ತಿರುವಾಗ ಅದರೊಳಗೆ ಹುಡುಗಿಯೊಬ್ಬಳು ಕುಳಿತಿರುವುದು ಸೆರೆಯಾಗಿದೆ. ಅಲ್ಲಿದ್ದ ವಿದ್ಯಾರ್ಥಿಗಳಲ್ಲಿ ಒಬ್ಬ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ. ಸೂಟ್‍ಕೇಸ್ ಒಳಗೆ ಹುಡುಗಿಯೊಬ್ಬಳು ಇದ್ದಾಳೆ ಎಂದು ಸೆಕ್ಯೂರಿಟಿ ಗಾರ್ಡ್ ಮತ್ತು ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಹೇಗೆ ತಿಳಿಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗೇ ಹುಡುಗಿ ಅದೇ ವಿಶ್ವವಿದ್ಯಾಲಯದವಳೇ ಅಥವಾ ಹೊರಗಿನವಳೇ ಎಂಬುದು ಸ್ಪಷ್ಟವಾಗಿಲ್ಲ. ಅಲ್ಲದೇ ಈ ಜೋಡಿ ವಿರುದ್ಧ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಯಾವ ಕ್ರಮ ಕೈಗೊಂಡಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ವಿಡಿಯೊ ಇಲ್ಲಿದೆ ನೋಡಿ...
A boy tried sneaking his girlfriend into a boy's hostel in a suitcase.
— Squint Neon (@TheSquind) April 12, 2025
Gets caught.
Location: OP Jindal University pic.twitter.com/Iyo6UPopfg
ಆದರೆ ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಸೂಟ್‍ಕೇಸ್ ಒಳಗೆ ಇರುವ ಹುಡುಗಿ ಆ ವಿದ್ಯಾರ್ಥಿಯ ಗೆಳತಿ ಎಂದು ಹೇಳಿದ್ದಾರೆ. ಇಡೀ ಘಟನೆಯನ್ನು ನೆಟ್ಟಿಗರು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. "ಈ ಸೂಟ್‍ಕೇಸ್‍ಗಳು ಈ ದಿನಗಳಲ್ಲಿ ಅನೇಕ ಉಪಯೋಗಗಳನ್ನು ಹೊಂದಿವೆ. ನನಗೆ ಅವರ ಆಲೋಚನೆ ಇಷ್ಟವಾಗಿದೆ. ಆದರೆ ನಾನು ಅದನ್ನು ಪ್ರಯತ್ನಿಸಲು ಸಾಧ್ಯವಿಲ್ಲ. ಯಾಕೆಂದರೆ ಅದಕ್ಕೆ ನನ್ನ ವಯಸ್ಸು ಮೀರಿದೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ, ವೈದ್ಯರಾಗಿರುವ ನೆಟ್ಟಿಗರೊಬ್ಬರು ತಮ್ಮ ಕಾಲೇಜಿನಲ್ಲಿಯೂ ಇದೇ ರೀತಿ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ. ಕೆಲವು ನೆಟ್ಟಿಗರು ಈ ಜೋಡಿ ಹೇಗೆ ಸಿಕ್ಕಿಬಿದ್ದರು ಎಂದು ತಿಳಿಯುವ ಕುತೂಹಲ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News: ಶ್ರೀಮಂತ ಪುರುಷರನ್ನು ಬುಟ್ಟಿಗೆ ಹಾಕೋಳೋದು ಹೇಗೆ? ಸೋಶಿಯಲ್ ಮೀಡಿಯಾದಲ್ಲಿ ಈ ಲವ್‌ಗುರುದ್ದೇ ಫುಲ್ ಹವಾ!
ಇದೇ ರೀತಿಯ ಘಟನೆ ಈ ಹಿಂದೆ ಕೂಡ ನಡೆದಿತ್ತು. 2022ರ ಫೆಬ್ರವರಿಯಲ್ಲಿ ವ್ಯಾಲೆಂಟೈನ್ಸ್ ಡೇ ದಿನ ಮಣಿಪಾಲದಲ್ಲಿ ಹುಡುಗನೊಬ್ಬ ತನ್ನ ಗೆಳತಿಯನ್ನು ಸೂಟ್‍ಕೇಸ್‍ನಲ್ಲಿ ಸಾಗಿಸುವಾಗ, ತಪಾಸಣೆಯ ಸಮಯದಲ್ಲಿ ಸಿಕ್ಕಿಬಿದ್ದಿದ್ದ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆತ ತನ್ನ ಗೆಳತಿಯನ್ನು ಸೂಟ್‍ಕೇಸ್‍ನಲ್ಲಿ ಅಡಗಿಸಿಟ್ಟು ಮಧ್ಯರಾತ್ರಿಯಲ್ಲಿ ಹಾಸ್ಟೆಲ್‍ನಿಂದ ಹೊರಹೋಗುತ್ತಿದ್ದ ಎಂದು ಆರೋಪಿಸಲಾಗಿತ್ತು. ಆಗ ಯಾರೋ ಸೆಕ್ಯೂರಿಟಿ ಗಾರ್ಡ್‍ಗೆ ಮಾಹಿತಿ ನೀಡಿದ್ದು, ಹಾಸ್ಟೆಲ್‍ನ ಗಾರ್ಡ್ ಸೂಟ್‍ಕೇಸ್ ಪರಿಶೀಲಿಸಿದಾಗ, ಅವನ ಕೃತ್ಯ ಬೆಳಕಿಗೆ ಬಂದಿತ್ತು.