ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಬೆಕ್ಕುಗಳಿಗೂ ಇಲ್ಲಿ ರಾಜಯೋಗ !

ಅವನ್ನು ಕೇವಲ ಸಾಕುಪ್ರಾಣಿಯಾಗಷ್ಟೇ ಅಲ್ಲ, ಸಂಪತ್ತು, ಧೈರ್ಯ ಮತ್ತು ರಕ್ಷಣೆಗಳ ಸಂಕೇತ ಗಳಾಗಿ ಕೂಡ ಪರಿಗಣಿಸಲಾಗುತ್ತದೆ. ಜಪಾನಿನ ಶಿಂಟೋ ಮತ್ತು ಬೌದ್ಧ ಧರ್ಮಗಳಲ್ಲಿ ಬೆಕ್ಕುಗಳಿಗೆ ವಿಶೇಷ ಸ್ಥಾನ. ಅಲ್ಲಿನ ಪುರಾಣಗಳಲ್ಲಿ ಬೆಕ್ಕುಗಳನ್ನು ಶಕ್ತಿಶಾಲಿ ಮತ್ತು ಅತೀಂದ್ರಿಯ ಪ್ರಾಣಿಯಂತೆ ಚಿತ್ರಿಸ ಲಾಗಿದೆ. ಕೆಲವೊಂದು ಕಥೆಗಳಲ್ಲಿ ಅವನ್ನು ಶಕ್ತಿಶಾಲಿ ದೇವತೆಗಳಂತೆ ಬಿಂಬಿಸಲಾಗಿದೆ.

ಬೆಕ್ಕುಗಳಿಗೂ ಇಲ್ಲಿ ರಾಜಯೋಗ !

ಸಂಪಾದಕರ ಸದ್ಯಶೋಧನೆ

ಜಪಾನಿನಲ್ಲಿ ಓಡಾಡುವಾಗ ಆಗಾಗ ಬೆಕ್ಕುಗಳ ದರ್ಶನವಾಗುವುದುಂಟು. ಜೀವಂತ ಬೆಕ್ಕು ಕಣ್ಣಿಗೆ ಕಾಣದಿದ್ದರೆ, ಬೆಕ್ಕುಗಳ ಗೊಂಬೆ, ಪ್ರತಿಮೆಯಾದರೂ ಕಣ್ಣಿಗೆ ಬೀಳುತ್ತವೆ. ಜಪಾನಿನ ಸಂಸ್ಕೃತಿಯು ಪ್ರಾಣಿಗಳಿಗೆ, ಅದರಲ್ಲೂ ವಿಶೇಷವಾಗಿ ಬೆಕ್ಕುಗಳಿಗೆ ಅಪಾರ ಪ್ರಾಮುಖ್ಯ ನೀಡುತ್ತದೆ. ಅಲ್ಲಿನ ಜನಜೀವನ, ಕಲೆ, ಪೌರಾಣಿಕತೆ, ಧರ್ಮ ಮತ್ತು ಆಧುನಿಕ ಸಾಂಸ್ಕೃತಿಕ ಪ್ರಭಾವಗಳಲ್ಲಿ ಬೆಕ್ಕುಗಳು ಒಂದು ವಿಶಿಷ್ಟ ಸ್ಥಾನವನ್ನು ಹೊಂದಿವೆ. ಅವನ್ನು ಕೇವಲ ಸಾಕುಪ್ರಾಣಿಯಾಗಷ್ಟೇ ಅಲ್ಲ, ಸಂಪತ್ತು, ಧೈರ್ಯ ಮತ್ತು ರಕ್ಷಣೆಗಳ ಸಂಕೇತಗಳಾಗಿ ಕೂಡ ಪರಿಗಣಿಸಲಾಗುತ್ತದೆ. ಜಪಾನಿನ ಶಿಂಟೋ ಮತ್ತು ಬೌದ್ಧ ಧರ್ಮಗಳಲ್ಲಿ ಬೆಕ್ಕುಗಳಿಗೆ ವಿಶೇಷ ಸ್ಥಾನ. ಅಲ್ಲಿನ ಪುರಾಣಗಳಲ್ಲಿ ಬೆಕ್ಕುಗಳನ್ನು ಶಕ್ತಿಶಾಲಿ ಮತ್ತು ಅತೀಂದ್ರಿಯ ಪ್ರಾಣಿಯಂತೆ ಚಿತ್ರಿಸಲಾಗಿದೆ. ಕೆಲವೊಂದು ಕಥೆಗಳಲ್ಲಿ ಅವನ್ನು ಶಕ್ತಿಶಾಲಿ ದೇವತೆಗಳಂತೆ ಬಿಂಬಿಸಲಾಗಿದೆ.

ಜಪಾನಿನ ಲೌಕಿಕ ಕಥೆಗಳಲ್ಲಿ ಬಾಕೆನೆಕೊ ಮತ್ತು ನೆಕೊಮಾತಾ ಎಂಬ ಬೆಕ್ಕುಗಳ ಪಾತ್ರಗಳು ಬರುತ್ತವೆ. ಬಾಕೆನೆಕೊ ಎಂಬುದು ಒಂದು ಮಾಯಾವಾದಿ ಬೆಕ್ಕಿನ ರೂಪವಾಗಿದ್ದು, ಈ ವಯಸ್ಸಾದ ಬೆಕ್ಕು ಮನುಷ್ಯನ ರೂಪವನ್ನು ತಳೆಯಬಲ್ಲದು ಎಂಬ ನಂಬಿಕೆ ಇದೆ. ನೆಕೊಮಾತಾ ಎಂಬ ಬೆಕ್ಕು ಎರಡು ಭುಜಗಳುಳ್ಳ ಬೆಕ್ಕಾಗಿ ಚಿತ್ರಿತವಾಗಿದ್ದು, ಇದಕ್ಕೆ ಮನುಷ್ಯರನ್ನು ನಿಯಂತ್ರಿಸುವ ಸಾಮರ್ಥ್ಯವಿದೆ ಎಂದು ನಂಬಲಾಗಿದೆ. ಶಿಂಟೋ ದೇವಾಲಯಗಳಲ್ಲಿ ಬೆಕ್ಕುಗಳನ್ನು ದೇವತೆಯ ದೂತರಾಗಿ ಚಿತ್ರಿಸಲಾಗಿದೆ.

ಇದನ್ನೂ ಓದಿ: Vishweshwar Bhat Column: ಚೌಕಾಕಾರದ ಕಲ್ಲಂಗಡಿಗಳು

ಜಪಾನಿನಲ್ಲಿ ಎಲ್ಲೂ ಕಾಣಸಿಗುವ ‘ಮನೇಕಿ ನೆಕೊ’ ಅಂದರೆ ‘ಅಲೆಯುವ ಬೆಕ್ಕು’ ಶುಭದ ಸಂಕೇತ ವಾಗಿದೆ. ಸಾಮಾನ್ಯವಾಗಿ ಅದು ಒಂದು ಕಾಲು ಎತ್ತಿ ನಿಂತಿರುವ ಬೆಕ್ಕಿನ ಪ್ರತಿಮೆ ಆಗಿದ್ದು, ವ್ಯಾಪಾರಸ್ಥರು ತಮ್ಮ ಅಂಗಡಿಗಳಲ್ಲಿ ಹಣ, ಗ್ರಾಹಕರ ಆಕರ್ಷಣೆಗಾಗಿ ಇದನ್ನು ಇಡುವುದನ್ನು ಗಮನಿಸಬಹುದು. ಜಗತ್ತಿನ ಇತರ ದೇಶಗಳಂತೆ, ಜಪಾನಿನಲ್ಲೂ ಬೆಕ್ಕುಗಳನ್ನು ಮನೆಗಳಲ್ಲಿ ಸಾಕುವುದು ಸಾಮಾನ್ಯ.

ಅಪಾರ್ಟ್ಮೆಂಟ್ ಜೀವನಕ್ಕೆ ಬೆಕ್ಕುಗಳು ಸೂಕ್ತವಾಗಿರುವುದರಿಂದ ಅವು ಹೆಚ್ಚು ಜನಪ್ರಿಯ. ಬೆಕ್ಕುಗಳ ಸಾಕಣೆಯು ಶಾಂತಿ, ಮಾನಸಿಕ ತೃಪ್ತಿಯನ್ನು ಅನುಭವಿಸುವುದಕ್ಕೆ ಮತ್ತು ಒಂಟಿತನದ ನಿವಾರಣೆಗೆ ಸಹಾಯಕವೆಂದು ಜಪಾನಿಯರು ನಂಬುತ್ತಾರೆ. ಬೆಕ್ಕು ಪ್ರಿಯರಿಗೆ ‘ನೆಕೊ ಕೆಫೆ’ಗಳು ಬಹಳ ಜನಪ್ರಿಯ. ಇಲ್ಲಿ ಜನರು ಬೆಕ್ಕುಗಳ ಜತೆ ಸಮಯ ಕಳೆಯಬಹುದು, ಅವಕ್ಕೆ ಆಹಾರ ನೀಡಬಹುದು ಮತ್ತು ಅವುಗಳ ಜತೆ ತಂಗಬಹುದು.

ಅಶಿಮಾ, ಟಾಷಿರೋಜಿಮಾ ಮುಂತಾದ ಕೆಲವು ದ್ವೀಪಗಳಲ್ಲಿ ಬೆಕ್ಕುಗಳ ಸಂಖ್ಯೆ ಹೆಚ್ಚು. ಇಲ್ಲಿ ಬೆಕ್ಕುಗಳು ಮನುಷ್ಯರೊಂದಿಗೇ ಸಹಜವಾಗಿ ಬದುಕುತ್ತವೆ. ಇವು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಗಳಾಗಿವೆ. ಜಪಾನಿನ ಚಿತ್ರಕಲೆ, ಮಂಗಾ, ಅನಿಮೆ ಮತ್ತು ಸಾಹಿತ್ಯದಲ್ಲಿ ಬೆಕ್ಕುಗಳದು ದೊಡ್ಡ ಪಾತ್ರ. ಜಪಾನಿ ಭಾಷೆಯ ಪ್ರಸಿದ್ಧ ಕವಿಗಳು ಬೆಕ್ಕುಗಳ ಬಗ್ಗೆ ಹೈಕು (ಹನಿಗವನ) ಬರೆದಿದ್ದಾರೆ.

ಕಟ್ಸುಶಿಕಾ ಹೋಕುಸೈ, ಉಟಾಗವಾ ಕುನಿಯೋಶಿ ಮುಂತಾದ ಕಲಾವಿದರು ಚಿತ್ರಕಲೆಯಲ್ಲಿ ಬೆಕ್ಕು ಗಳನ್ನು ವಿಭಿನ್ನ ಶೈಲಿಯಲ್ಲಿ ಚಿತ್ರಿಸಿzರೆ. ತಮಾಷೆಯೆಂದರೆ, ಆ ದೇಶದಲ್ಲಿ ಬೆಕ್ಕುಗಳಿಗೆ ಮೀಸಲಾದ ಕೆಲವು ಆಚರಣೆಗಳೂ ಇವೆ. ಫೆಬ್ರವರಿ 22ರಂದು ‘ಮಾರ್ಜಾಲ ದಿನ’ ( Cat Day) ಎಂದು ಆಚರಿಸಲಾಗುತ್ತದೆ. ಈ ದಿನವನ್ನು ‘ನಿನಿನಿ’ ( 2-2-2) ಎಂದು ಉಚ್ಚರಿಸುವುದರಿಂದ, ಅದು ಬೆಕ್ಕುಗಳ ‘ನಿಯಾನ್-ನ್ಯಾನ್ -ನ್ಯಾನ್’ ಶಬ್ದದಂತೆ ಕೇಳುತ್ತದೆ. ಇಷ್ಟೇ ಅಲ್ಲ, ಜಪಾನಿನಲ್ಲಿ ಬೆಕ್ಕುಗಳಿಗೆ ಮೀಸಲಾದ ದೇವಾಲಯಗಳೂ ಇವೆ. ಅಲ್ಲಿ ಬೆಕ್ಕುಗಳೇ ಪ್ರಧಾನ ದೇವರು.

ಜನ ಬೆಕ್ಕುಗಳನ್ನು ಪೂಜಿಸಿ, ನಮಸ್ಕರಿಸುತ್ತಾರೆ. ದೇವಾಲಯದ ಆವರಣದಲ್ಲಿ ಬೆಕ್ಕಿನ ಸಾವಿರಾರು ಪ್ರತಿಮೆಗಳನ್ನು ಕಾಣಬಹುದಾಗಿದೆ. ಅಲ್ಲಿನ ಆಧುನಿಕ ಸಾಂಸ್ಕೃತಿಕ ವಾತಾವರಣದಲ್ಲಿ ಬೆಕ್ಕುಗಳು ಬ್ರ್ಯಾಂಡ್ ಮಾಸ್ಕಾಟ್ ಗಳಿಂದ ಹಿಡಿದು ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳವರೆಗೆ ವ್ಯಾಪಿಸಿರುವುದನ್ನು ಕಾಣಬಹುದು.

ಇನ್ಸ್ಟಾಗ್ರಾಂ, ಯುಟ್ಯೂಬ್ ಮುಂತಾದ ಮಾಧ್ಯಮಗಳಲ್ಲಿ ಬೆಕ್ಕುಗಳ ಖಾತೆಗಳಿಗೆ ಲಕ್ಷಾಂತರ ಅನುಯಾಯಿಗಳಿದ್ದಾರೆ. ಇವುಗಳ ಮೂಲಕ ಅದನ್ನು ಸಾಕಿದವರು ಸಾಕಷ್ಟು ಆದಾಯ ಗಳಿಸು ತ್ತಿದ್ದಾರೆ. ಬೆಕ್ಕುಗಳು ಮಾನವ ಭಾವನೆಗಳಿಗೆ ಹತ್ತಿರವಾಗುವ ಪ್ರಾಣಿಗಳು. ಶಾಂತಿ ಮತ್ತು ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳುವಿಕೆ, ಒಂಟಿತನದ ನಿವಾರಣೆ, ಕೌಟುಂಬಿಕ ಸಂಬಂಧಗಳ ಒಡನಾಟ ವೃದ್ಧಿಗೆ ಅವು ಸಹಾಯಕ ಎಂಬ ಭಾವನೆ ಇರುವುದರಿಂದ ಬೆಕ್ಕುಗಳಿಗೂ ಅಲ್ಲಿ ರಾಜಯೋಗ.

Live News

No live news added yet