#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral News: ಹಿಂದೂ ವಿದ್ಯಾರ್ಥಿ ಕೈಗೆ ಕಟ್ಟಿದ ಪವಿತ್ರ ದಾರವನ್ನು ಕಿತ್ತ ಶಿಕ್ಷಕ; ಕ್ರಮಕ್ಕೆ ಒತ್ತಾಯ!

ದಕ್ಷಿಣ ಆಫ್ರಿಕಾದ ಶಿಕ್ಷಕನೊಬ್ಬ ಹಿಂದೂ ವಿದ್ಯಾರ್ಥಿಯ ಮಣಿಕಟ್ಟಿನಿಂದ ಧಾರ್ಮಿಕ ದಾರವನ್ನು ಕತ್ತರಿಸಿರುವ ಘಟನೆ ನಡೆದಿದೆ. ಈ ಘಟನೆ ಕಳೆದ ವಾರ ಕ್ವಾಜುಲು-ನಟಾಲ್ ಪ್ರಾಂತ್ಯದ ಡ್ರೇಕೆನ್ಸ್‌ಬರ್ಗ್ ಮಾಧ್ಯಮಿಕ ಶಾಲೆಯಲ್ಲಿ ನಡೆದಿದ್ದು, ಇದೀಗ ತೀವ್ರ ಖಂಡನೆ ವ್ಯಕ್ತವಾಗಿದೆ. ಶಾಲೆಯಲ್ಲಿ ಸಾಂಸ್ಕೃತಿಕ ಅಥವಾ ಧಾರ್ಮಿಕ ಚಿಹ್ನೆಗಳನ್ನು ಧರಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿ, ಶಿಕ್ಷಕಿ ಹಿಂದೂ ವಿದ್ಯಾರ್ಥಿಯ ಮಣಿಕಟ್ಟಿನಿಂದ ಪವಿತ್ರ ದಾರವನ್ನು ಕತ್ತರಿಸಿದ್ದಾರೆ. ಈ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ.

ಹಿಂದೂ ವಿದ್ಯಾರ್ಥಿ ಕೈಗೆ ಕಟ್ಟಿದ ಪವಿತ್ರ ದಾರ ಕತ್ತರಿಸಿದ ಶಿಕ್ಷಕ!

Viral News

Profile Deekshith Nair Feb 4, 2025 3:15 PM

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ(South Africa) ಶಿಕ್ಷಕರೊಬ್ಬರು ಹಿಂದೂ ವಿದ್ಯಾರ್ಥಿಯ ಮಣಿಕಟ್ಟಿನಿಂದ ಧಾರ್ಮಿಕ ದಾರವನ್ನು ಕತ್ತರಿಸಿರುವ ಘಟನೆ ನಡೆದಿದೆ. ಈ ಘಟನೆ ಕಳೆದ ವಾರ ಕ್ವಾಜುಲು-ನಟಾಲ್(KwaZulu-Natal) ಪ್ರಾಂತ್ಯದ ಡ್ರೇಕೆನ್ಸ್‌ಬರ್ಗ್ ಮಾಧ್ಯಮಿಕ ಶಾಲೆಯಲ್ಲಿ ನಡೆದಿದ್ದು, ಇದೀಗ ತೀವ್ರ ಖಂಡನೆ ವ್ಯಕ್ತವಾಗಿದೆ. ಶಾಲೆಯಲ್ಲಿ ಸಾಂಸ್ಕೃತಿಕ ಅಥವಾ ಧಾರ್ಮಿಕ ಚಿಹ್ನೆಗಳನ್ನು ಧರಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿ ಶಿಕ್ಷಕ ಹಿಂದೂ ವಿದ್ಯಾರ್ಥಿಯ ಮಣಿಕಟ್ಟಿನಿಂದ ಪವಿತ್ರ ದಾರವನ್ನು ಕತ್ತರಿಸಿದ್ದಾರೆ. ಈ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ.

ದಕ್ಷಿಣ ಆಫ್ರಿಕಾದ ಹಿಂದೂ ಮಹಾಸಭಾ (SAHMS) ಕ್ರಮ ಕೈಗೊಳ್ಳಬೇಕೆಂದು ಶಿಕ್ಷಣ ಅಧಿಕಾರಿಗಳಿಗೆ ಒತ್ತಾಯಿಸಿದೆ. ಹಿಂದೂ ವಿದ್ಯಾರ್ಥಿಯ ಧಾರ್ಮಿಕ ದಾರವನ್ನು ಕತ್ತರಿಸಿದ ಶಿಕ್ಷಕನ ನಡೆಯು ಅಸಮಂಜಸ ಮತ್ತು ಬೇಜವಾಬ್ದಾರಿತನವಾಗಿದೆ. ಶಿಕ್ಷಕನ ಕ್ರಮವನ್ನು SAHMS ಬಲವಾಗಿ ಖಂಡಿಸುತ್ತದೆ ಎಂದು ಸಂಘಟನೆ ತಿಳಿಸಿದೆ.



ದಕ್ಷಿಣ ಆಫ್ರಿಕಾದ ಅತ್ಯುನ್ನತ ನ್ಯಾಯಾಂಗ ಪ್ರಾಧಿಕಾರವಾದ ಸಾಂವಿಧಾನಿಕ ನ್ಯಾಯಾಲಯವು ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಯರು ಮೂಗುತಿಯನ್ನು ಧರಿಸುವುದನ್ನು ನಿಷೇಧಿಸಿತ್ತು. ಈ ಪ್ರಕರಣವನ್ನು ತ್ರಿಕಾಮ್ಜಿ ಇದೀಗ ನೆನಪಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ:Mahakumbh 2025: ಇಂದು ಕುಂಭಮೇಳದ ಕೊನೆಯ ಅಮೃತಸ್ನಾನ; ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಲಕ್ಷಾಂತರ ಜನ

ದಕ್ಷಿಣ ಆಫ್ರಿಕಾದ ಹಿಂದೂ ಮಹಾಸಭಾದ ಅಧ್ಯಕ್ಷ ಅಶ್ವಿನ್ ತ್ರಿಕಮ್​ಜೀ ಈ ಬಗ್ಗೆ ಶಾಲೆಯ ಪ್ರಾಂಶುಪಾಲರು ಹಾಗೂ ಚೇರ್​ಮೆನ್​ರೊಂದಿಗೆ ಮಾತನಾಡಿದ್ದು, ನಾವೆಲ್ಲರೂ ಹಿಂದೂಗಳು, ನಿಮ್ಮ ಶಾಲೆಯಲ್ಲಿ ರಿಂಗು, ಸ್ಟ್ರಿಂಗು ಹಾಕಿಕೊಂಡು ಬರಲು ಉಳಿದ ವಿದ್ಯಾರ್ಥಿಗಳಿಗೆ ಅವಕಾಶವಿದೆ. ನಮ್ಮ ಹಿಂದೂ ವಿದ್ಯಾರ್ಥಿಗೆ ಪವಿತ್ರ ದಾರ ಕಟ್ಟಿಕೊಂಡು ಬರಲು ಯಾಕೆ ಅವಕಾಶವಿಲ್ಲ ಎಂದು ಕಿಡಿಕಾರಿದ್ದಾರೆ. ವಿದ್ಯಾರ್ಥಿಯ ನಂಬಿಕೆಯ ವಿರುದ್ಧ ಈ ರೀತಿ ನಡೆದುಕೊಂಡಿರುವುದು ನಿಜಕ್ಕೂ ಅನ್ಯಾಯ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.