Dimuth Karunaratne: 100ನೇ ಟೆಸ್ಟ್ ಬಳಿಕ ಕ್ರಿಕೆಟ್‌ಗೆ ದಿಮುತ್ ಕರುಣಾರತ್ನೆ ವಿದಾಯ
36 ವರ್ಷದ ದಿಮುತ್ ಕರುಣಾರತ್ನೆ ಕಳೆದೊಂದು ವರ್ಷದಿಂದ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿದ್ದರು. ಅವರು ತಮ್ಮ ಕೊನೆಯ ಏಳು ಟೆಸ್ಟ್ ಪಂದ್ಯಗಳಲ್ಲಿ 182 ರನ್ ಮಾತ್ರ ಗಳಿಸಿದ್ದರು. ಸೆಪ್ಟೆಂಬರ್ 2024 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಅವರ ಏಕೈಕ ಅರ್ಧಶತಕ ದಾಖಲಾಗಿತ್ತು.
ಗಾಲೆ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ದಿಮುತ್ ಕರುಣಾರತ್ನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದಾರೆ. ಗಾಲೆಯಲ್ಲಿ ಗುರುವಾರದಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯ ಕರುಣಾರತ್ನೆಗೆ ಕೊನೆಯ ಪಂದ್ಯವಾಗಲಿದೆ. ಇದು ಅವರ ನೂರನೇ ಟೆಸ್ಟ್ ಪಂದ್ಯವಾಗಿದೆ. ಈ ಮೂಲಕ ಲಂಕಾ ಪರ ನೂರನೇ ಟೆಸ್ಟ್ ಪಂದ್ಯವನ್ನಾಡಿದ 7ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
36 ವರ್ಷದ ದಿಮುತ್ ಕರುಣಾರತ್ನೆ ಕಳೆದೊಂದು ವರ್ಷದಿಂದ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿದ್ದರು. ಅವರು ತಮ್ಮ ಕೊನೆಯ ಏಳು ಟೆಸ್ಟ್ ಪಂದ್ಯಗಳಲ್ಲಿ 182 ರನ್ ಮಾತ್ರ ಗಳಿಸಿದ್ದರು. ಸೆಪ್ಟೆಂಬರ್ 2024 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಅವರ ಏಕೈಕ ಅರ್ಧಶತಕ ದಾಖಲಾಗಿತ್ತು.
Dimuth Karunaratne is set to retire from Test cricket after playing his 100th game this week, against Australia in Galle https://t.co/c4THvgQg5k #SLvAUS pic.twitter.com/li85gutomy
— ESPNcricinfo (@ESPNcricinfo) February 4, 2025
2012ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಕರುಣಾರತ್ನೆ ಒಂದು ಕಾಲದಲ್ಲಿ ಶ್ರೀಲಂಕಾದ ಅತ್ಯುತ್ತಮ ಟೆಸ್ಟ್ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದರು. ಅವರು ಲಂಕಾ ಪರ 99 ಟೆಸ್ಟ್ ಪಂದ್ಯಗಳನ್ನಾಡಿ 16 ಶತಕಗಳೊಂದಿಗೆ 7,172 ರನ್ ಗಳಿಸಿದ್ದಾರೆ. ನಾಯಕನಾಗಿಯೂ ಹಲವು ಸರಣಿ ಜಯಿಸಿದ ದಾಖಲೆಯೂ ಇವರ ಹೆಸರಿನಲ್ಲಿದೆ. 2021 ರಲ್ಲಿ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್‌ನಲ್ಲಿ 244 ರನ್ ಬಾರಿಸಿದ್ದು ಅವರ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. ಏಕದಿನದಲ್ಲಿ 50 ಮತ್ತು 34 T20 ಪಂದ್ಯಗಳನ್ನು ಆಡಿದ್ದಾರೆ. 2023 ರಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಏಕೈಕ ಏಕದಿನ ಶತಕವನ್ನು ದಾಖಲಿಸಿದ್ದರು.
ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ ಸಹಾ!
ಕಳೆದ ಶನಿವಾರ ಭಾರತ ಹಾಗೂ ಬಂಗಾಳದ ಹಿರಿಯ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ವೃದ್ದಿಮಾನ್ ಸಹಾ ಅವರು ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಭಾವನಾತ್ಮಕ ಪತ್ರದ ಮೂಲಕ ವೃದ್ದಿಮಾನ್ ಸಹಾ ತಮ್ಮ ಸುದೀರ್ಘ ಅವಧಿಯ ಕ್ರಿಕೆಟ್ ವೃತ್ತಿ ಜೀವನವನ್ನು ಮುಗಿಸಿದ್ದರು. ಭಾರತ ತಂಡದ ಪರ ವೃದ್ದಿಮಾನ್ ಸಹಾ ಅವರು 40 ಟೆಸ್ಟ್ ಪಂದ್ಯಗಳನ್ನು ಆಡಿ 1353 ರನ್‌ಗಳನ್ನು ಗಳಿಸಿದ್ದಾರೆ.
ಇದನ್ನೂ ಓದಿ IND vs ENG: ಸಚಿನ್ ತೆಂಡೂಲ್ಕರ್‌ರ 19 ವರ್ಷಗಳ ದಾಖಲೆ ಮೇಲೆ ವಿರಾಟ್ ಕೊಹ್ಲಿ ಕಣ್ಣು!
ವೃದ್ದಿಮಾನ್ ಸಹಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳನ್ನು ಪ್ರತಿನಿಧಿಸಿದ್ದರು. 2014ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ಶತಕ ಸಿಡಿಸಿದ್ದು ಸಹಾ ಪಾಲಿಗೆ ಅತ್ಯಂತ ಸ್ಮರಣೀಯ ಕ್ಷಣವಾಗಿದೆ. ಕಳೆದ ಐಪಿಎಲ್ ಟೂರ್ನಿಗಳಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಶುಭಮನ್ ಗಿಲ್ ನಾಯಕತ್ವದಲ್ಲಿ ಗುಜರಾತ್ ಟೈಟನ್ಸ್ ಪರ ಆಡಿದ್ದರು. ಅವರು 2023ರ ಟೂರ್ನಿಯಲ್ಲಿ 371 ರನ್‌ಗಳನ್ನು ಕಲೆ ಹಾಕಿದ್ದರು.