Viral Video: ಚೀನಾದ ಅತೀ ಎತ್ತರದ ಅಪಾರ್ಟ್‌ಮೆಂಟ್‌ನಲ್ಲಿರುವ ಅತ್ಯಾಧುನಿಕ ಸೌಲಭ್ಯ ನಿಜಕ್ಕೂ ಅದ್ಭುತ!
ರಿಜೆಂಟ್ ಇಂಟರ್ ನ್ಯಾಶನಲ್ ಅಪಾರ್ಟ್ ಮೆಂಟ್ ವಿಶ್ವದ ಅತೀ ಎತ್ತರದ ಕಟ್ಟಡವಾಗಿದೆ. ಇದು ಚೀನಾದಲ್ಲಿದ್ದು ಅತ್ಯಾಧುನಿಕ ಸೌಲಭ್ಯ ಒಳಗೊಂಡಂತೆ ಸಣ್ಣ ನಗರದ ಜನಸಂಖ್ಯೆಗೆ ಸಮಾನವಾದ ಈ ಕಟ್ಟಡದಲ್ಲಿ ಸುಮಾರು 20000 ಜನರು ವಾಸಿಸುತ್ತಿದ್ದಾರೆ. ಇದರ ಡ್ರೋನ್ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು ನೆಟ್ಟಿಗರು ಈ ವಿಡಿಯೊಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಬೀಜಿಂಗ್: ಉದ್ಯಾನವನ, ಶಾಲೆ, ಜಿಮ್, ಸೆಲೂನ್, ತರಕಾರಿ, ದಿನಸಿ ಎಂದು ನಿತ್ಯ ಕಿಲೋ ಮೀಟರ್ ಗಟ್ಟಲೆ ಪ್ರಯಾಣಿಸುವ ನಮಗೆ ಇವೆಲ್ಲ ಒಂದೇ ಸೂರಿ ನಡಿಯಲ್ಲಿ ಇದ್ದರೆ ಎಷ್ಟು ಒಳ್ಳೆಯದು ಎಂಬ ಕಲ್ಪನೆ ಹುಟ್ಟುವುದಿದೆ. ಆದರೆ ಇದೇ ಕಲ್ಪನೆ ನಿಜಕ್ಕೂ ಜನ್ಮತಾಳಿ ಚೀನಾದಲ್ಲಿ ಪುಟ್ಟ ನಗರವೇ ಸೃಷ್ಟಿಯಾಗಿದೆ. ಇಲ್ಲಿನ ನಿವಾಸಿಗಳು ಕಟ್ಟಡದಿಂದ ಒಂದು ಹೆಜ್ಜೆ ಹೊರಗಿಡದಂತೆ ಎಲ್ಲ ಸೌಕರ್ಯ ಕಟ್ಟಡದ ಒಳಗೆ ಪಡೆಯುತ್ತಿದ್ದು ಸದ್ಯ ವಿಶ್ವದ ಅತೀ ಎತ್ತರದ ಅಪಾರ್ಟ್‌ಮೆಂಟ್ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್(Viral Video) ಆಗುತ್ತಿದೆ.
ರಿಜೆಂಟ್ ಇಂಟರ್ ನ್ಯಾಶನಲ್ ಅಪಾರ್ಟ್ ಮೆಂಟ್ ವಿಶ್ವದ ಅತೀ ಎತ್ತರದ ಕಟ್ಟಡವಾಗಿದೆ. ಇದು ಚೀನಾದಲ್ಲಿದ್ದು ಅತ್ಯಾಧುನಿಕ ಸೌಲಭ್ಯ ಇದ್ದು, ಸುಮಾರು 20000 ಜನರು ವಾಸಿಸುತ್ತಿದ್ದಾರೆ. ಇದರ ಡ್ರೋನ್ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು ನೆಟ್ಟಿಗರು ಈ ವಿಡಿಯೊಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
इस बिल्डिंग का नाम "रीजेंट इंटरनेशनल अपार्टमेंट बिल्डिंग" है जो कि चीन के हांग्जो में स्थित है,
— Dr. Sheetal yadav (@Sheetal2242) February 2, 2025
इस बिल्डिंग में लगभग 20,000 लोग रहते हैं जो कि एक छोटे शहर की आबादी के बराबर है।
दुनिया की इस सबसे बड़ी आवासीय इमारत में 39 मंजिल है और कई सुविधाएं और व्यवसाय मौजूद हैं, जिसमें… pic.twitter.com/OomNuAkgj4
ಚೀನಾದ ಹ್ಯಾಂಗ್ ಝಾನ್ ನಲ್ಲಿ ಈ ರೀಜೆಂಟ್ ಇಂಟರ್ ನ್ಯಾಶನಲ್ ಅಪಾರ್ಟ್ ಮೆಂಟ್ ಅನ್ನು ಕಟ್ಟಲಾಗಿದ್ದು 39 ಮಹಡಿಗಳು ಈ ಕಟ್ಟಡದಲ್ಲಿದೆ. ಅಪಾರ್ಟ್‌ಮೆಂಟ್‌ನಲ್ಲಿ ಈಜುಕೊಳ, ದಿನಸಿ ಅಂಗಡಿ, ಸಲೂನ್ ಅಂಗಡಿ, ಕೆಫೆ , ಶಾಲೆ , ಜಿಮ್ ಇನ್ನಿತರ ಹೈಟೆಕ್ ಸೌಲಭ್ಯಗಳು ಇರಲಿದೆ. ಅಷ್ಟು ಮಾತ್ರವಲ್ಲದೆ ಪ್ರಾಕೃತಿಕ ವಿಪತ್ತನ್ನು ಕೂಡ ಸಮರ್ಥವಾಗಿ ತಡೆಹಿಡಿಯುವಂತಹ ಆಧುನಿಕ ತಂತ್ರಜ್ಞಾನ ವ್ಯವಸ್ಥೆ ಕೂಡ ಈ ಕಟ್ಟಡದಲ್ಲಿದ್ದು ಇದೊಂದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ನಿತ್ಯ ಸಾವಿರಾರು ಜನರು ಈ ಕಟ್ಟಡ ವೀಕ್ಷಿಸಲು ಭೇಟಿ ನೀಡುತ್ತಿರುತ್ತಾರೆ.
ಇದನ್ನು ಓದಿ: Viral Video: ಸಿಕ್ಕಾಪಟ್ಟೆ ಚಳಿಯ ಕಾರಣದಿಂದ ಬಾಲ್ಕನಿಯಲ್ಲಿ ಈ ಯುವಕ ಮಾಡಿದ್ದೇನು?ವಿಡಿಯೊ ವೈರಲ್
ಡಾಕ್ಟರ್ ಶೀತಲ್ ಯಾಧವ್ ಎನ್ನುವವರು ಈ ಕಟ್ಟಡದ ವಿಶೇಷತೆಯನ್ನು ತಿಳಿಸಿ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ವಿಡಿಯೊ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದ್ದು ಕೆಲವು ಬಳಕೆದಾರರು ಈ ರೀತಿಯ ಸೌಕರ್ಯವುಳ್ಳ ನಗರ ನಮ್ಮ ದೇಶದಲ್ಲೂ ಇರಬೇಕಿತ್ತು ಎಂದು ಕಮೆಂಟ್ ಮಾಡಿದ್ದಾರೆ.