Saturday, 27th April 2024

ಟೊರೊಂಟೋದಲ್ಲಿ ದೇವಸ್ಥಾನ ಧ್ವಂಸ ಪ್ರಕರಣ: ತನಿಖೆಗೆ ಮೇಯರ್ ಆದೇಶ

ಟೊರೊಂಟೊ: ಕೆನಡಾದ ಟೊರೊಂಟೋದಲ್ಲಿ ಧ್ವಂಸಗೊಳಿಸಲಾಗಿದ್ದ ಉದ್ಯಾನವನದ ಸ್ವಾಮಿನಾರಾಯಣ ದೇವಸ್ಥಾನ ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿದೆ ಎಂದು ಮೇಯರ್ ಪ್ಯಾಟ್ರಿಕ್ ಬ್ರೌನ್ ಹೇಳಿದ್ದಾರೆ.

ಇತ್ತೀಚೆಗೆ ಅನಾವರಣಗೊಂಡ ಶ್ರೀ ಭಗವದ್ಗೀತಾ ಪಾರ್ಕ್ ಫಲಕವನ್ನು ಧ್ವಂಸ ಗೊಳಿಸ ಲಾಗಿತ್ತು. ಕೆನಡಾದ ಸ್ವಾಮಿನಾರಾಯಣ ದೇವಾಲಯವನ್ನು ಭಾರತ ವಿರೋಧಿ ಗೋಡೆಬರಹದ ಮೂಲಕ ಹಾನಿಗೊಳಿಸಿದ ಕೆಲವೇ ದಿನಗಳಲ್ಲಿ ಈ ಘಟನೆಯು ಕೆನಡಾ ದಲ್ಲಿರುವ ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಭಾರತದ ರಾಯಭಾರ ಕಚೇರಿ ಸೂಚನೆ ನೀಡಿತ್ತು.

ಪ್ರಕರಣ ಬಗ್ಗೆ ಹೆಚ್ಚಿನ ತನಿಖೆಗಾಗಿ ಈ ವಿಷಯವನ್ನು ಈಗ ಪೀಲ್ ಪ್ರಾದೇಶಿಕ ಪೊಲೀಸ ರಿಗೆ ವಹಿಸಲಾಗಿದೆ. ನಮ್ಮ ಇಲಾಖೆಯು ಪ್ರಕರಣವನ್ನು ತನಿಖೆ ಮಾಡಲು ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಘಟನೆ ಖಂಡಿಸಿದ ಟ್ವಿಟರ್ ಬಳಕೆದಾರರಿಗೆ ಪ್ರತ್ಯುತ್ತರವಾಗಿ ಬ್ರೌನ್, “ಪೀಲ್ ಪ್ರಾದೇಶಿಕ ಪೊಲೀಸ್ ಮುಖ್ಯಸ್ಥ ನಿಶಾನ್ ದುರೈ ಯಪ್ಪ ಅವರು ಇಂತಹ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.

ಹಿಂದೂ ಸಮುದಾಯ ಮತ್ತು ನಗರಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲು ಈ ಉದ್ಯಾ ನವನವನ್ನು ಬ್ರಾಂಪ್ಟನ್‌ನ ಟ್ರಾಯರ್ಸ್ ಪಾರ್ಕ್‌ನಿಂದ ಶ್ರೀ ಭಗವದ್ಗೀತಾ ಪಾರ್ಕ್ ಎಂದು ಮರುನಾಮಕರಣ ಮಾಡಲಾಯಿತು.

ಕಳೆದ ತಿಂಗಳು ಕೆನಡಾದ ಟೊರೊಂಟೊದಲ್ಲಿರುವ ಬಾಪ್ಸ್‌ ಸ್ವಾಮಿನಾರಾಯಣ ಮಂದಿರವನ್ನು ಅದರ ಗೋಡೆಗಳ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಚಿತ್ರಿಸಿ ಗದ್ದಲವನ್ನು ಹೆಚ್ಚಿಸಲಾಯಿತು.

ಘಟನೆಯ ನಂತರ ಭಾರತೀಯ ಮೂಲದ ಕೆನಡಾ ಸಂಸದ ಚಂದ್ರ ಆರ್ಯ, ಕೆನಡಾದ ಖಲಿಸ್ತಾನಿ ಉಗ್ರಗಾಮಿಗಳು ದೇವಸ್ಥಾನ ವಿರೂಪಗೊಳಿಸುವಿಕೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದರು. 

 

error: Content is protected !!