Viral Video: ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ನಡುವೆ ಮಾರಾಮಾರಿ; ಕಾರಣವೇನು?
ಜಾರ್ಜಿಯಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ನಡುವೆ ದೊಡ್ಡ ಗಲಾಟೆ ನಡೆದಿದೆ. ಪ್ರಯಾಣಿಕರು ಪರಿಸ್ಪರ ಕೈಕೈ ಮಿಲಾಯಿಸಿದ್ದಾರೆ. ಯಾವ ಕಾರಣಕ್ಕಾಗಿ ಈ ಲಭೆ ನಡೆದಿದೆ ಎನ್ನುವುದು ತಿಳಿದು ಬಂದಿಲ್ಲ. ಸದ್ಯ ಈ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

fight in flight viral

ವಾಷಿಂಗ್ಟನ್: ಜಾರ್ಜಿಯಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಜಗಳ ನಡೆದಿದ್ದು, ಪ್ರಯಾಣಿಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಸ್ಪಿರಿಟ್ ಏರ್‌ಲೈನ್ಸ್ ಟರ್ಮಿನಲ್‍ನಲ್ಲಿ ಈ ಘಟನೆ ನಡೆದಿದ್ದು,ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಸಹ ಪ್ರಯಾಣಿಕರೊಬ್ಬರು ಈ ಘಟನೆಯನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಬೋರ್ಡಿಂಗ್ ಗೇಟ್ ಬಳಿ ವ್ಯಕ್ತಿಗಳು ಘರ್ಷಣೆಗಳಲ್ಲಿ ತೊಡಗಿರುವುದು ಕಂಡು ಬಂದಿದೆ.
ಮಾಹಿತಿ ಪ್ರಕಾರ, ಟರ್ಮಿನಲ್‍ನ ವೈಟಿಂಗ್ ಪ್ರದೇಶದಲ್ಲಿ ಈ ವಾಗ್ವಾದ ನಡೆದಿದೆ. ಜಗಳದ ಹಿಂದಿನ ಕಾರಣ ಅಸ್ಪಷ್ಟವಾಗಿದೆ. ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ, ಜಗಳದಲ್ಲಿ ಭಾಗಿಯಾಗಿದ್ದವರೆಲ್ಲರೂ ಹೊರಟು ಹೋಗಿದ್ದರು. ಮುಂದಿನ ಕ್ರಮ ಕೈಗೊಳ್ಳಲು ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಪೊಲೀಸರು ವಿಡಿಯೊವನ್ನು ಪರಿಶೀಲಿಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಸೋಶಿಯಲ್ ಮಿಡಿಯಾ ನೆಟ್ಟಿಗರು ಶಂಕಿತರನ್ನು "ನೋ ಫ್ಲೈ ಲಿಸ್ಟ್"ನಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೆಲವರು ಅವರನ್ನು ಜೈಲಿಗಟ್ಟಬೇಕು ಎಂದಿದ್ದಾರೆ. ಕೆಲವು ಎಕ್ಸ್ ಬಳಕೆದಾರರು ವಿಮಾನ ನಿಲ್ದಾಣದಲ್ಲಿ ಜಗಳಕ್ಕೆ ಕಾರಣವೇನಾಗಿರಬಹುದು ಎಂದು ಕುತೂಹಲ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ವಿಮಾನ ನಿಲ್ದಾಣದ ಸಿಬ್ಬಂದಿ ಮೇಲೆ ಸ್ಯಾನಿಟರಿ ಪ್ಯಾಡ್ ಎಸೆದ ಮಹಿಳೆ; ಆಗಿದ್ದೇನು?
ನೈರೋಬಿಯ ಜೊಮೊ ಕೆನ್ಯಟ್ಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೈಜೀರಿಯಾದ ಮಹಿಳಾ ಪ್ರಯಾನಿಕರೊಬ್ಬರು ಗಲಭೆ ಎಬ್ಬಿಸಿದ್ದಾರೆ. ವೀಸಾ ಸಮಸ್ಯೆಯಿಂದಾಗಿ ವಿಮಾನ ಹತ್ತಲು ಸಾಧ್ಯವಾಗದ ಕಾರಣ ಸಿಬ್ಬಂದಿಯ ಮೇಲೆ ಕೋಪಗೊಂಡು ಆಕೆ ಬಳಸಿದ ಸ್ಯಾನಿಟರಿ ಪ್ಯಾಡ್‌ಗಳನ್ನು ಎಸೆದಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video) ಆಗಿದೆ.
ಗ್ಲೋರಿಯಾ ಒಮಿಸೋರ್ ಎಂಬ ಮಹಿಳೆ ಫೆ. 3ರಂದು ನೈಜೀರಿಯಾದ ಲಾಗೋಸ್‍ನಿಂದ ಕೀನ್ಯಾದ ನೈರೋಬಿಗೆ ಹೋಗಿದ್ದಾಳೆ. ಅಲ್ಲಿಂದ ಆಕೆ ಇಂಗ್ಲೆಂಡ್‌ಗೆ ಹೋಗುವ ಯೋಜನೆ ಇತ್ತು. ಆದರೆ ಚೆಕ್-ಇನ್ ಸಮಯದಲ್ಲಿ, ವಿಮಾನಯಾನ ಸಿಬ್ಬಂದಿ ಫ್ರಾನ್ಸ್‌ಗೆ ತೆರಳಲು ಅಗತ್ಯವಾದ ವೀಸಾ ಇಲ್ಲ ಎಂದು ಮಾಹಿತಿ ನೀಡಿದ್ದಾರೆ. ಅದಕ್ಕೆ ಪರ್ಯಾಯವಾಗಿ ಆಕೆಗೆ ಲಂಡನ್‍ಗೆ ಹೋಗಲು ವಿಮಾನ ಸೌಲಭ್ಯವನ್ನು ನೀಡಲಾಯಿತು. ಇದರಿಂದ ಕೋಪಗೊಂಡ ಆಕೆ ಚೆಕ್-ಇನ್ ಏಜೆಂಟರ ಜತೆ ಕೆಟ್ಟದ್ದಾಗಿ ವರ್ತಿಸಿದ್ದಾಳೆ. ಅವರು ನೀಡಿದ ಪ್ರಯಾಣ ಸೌಲಭ್ಯವನ್ನು ನಿರಾಕರಿಸಿ ಅವರಿಂದ ಅಡ್ಡಿಯಾದ ಪ್ರಯಾಣಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾಳೆ.
ಅದೂ ಅಲ್ಲದೇ ಸಿಬ್ಬಂದಿಯ ಮೇಲೆ ತಾನು ಬಳಸಿದ್ದ ಮೂರು ಸ್ಯಾನಿಟರಿ ಪ್ಯಾಡ್‍ಗಳನ್ನು ತೆಗೆದು ಎಸೆದಿದ್ದಾಳೆ. ಇದರಿಂದ ಅಲ್ಲಿನ ಸಿಬ್ಬಂದಿ ಕೋಪಗೊಂಡು ವಾಗ್ವಾದ ನಡೆಸಿದ್ದಾರೆ. ಈ ಘಟನೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಹಿಳೆಯ ವರ್ತನೆಯಿಂದ ಸಿಬ್ಬಂದಿ ಸಿಕ್ಕಾಪಟ್ಟೆ ಸಿಟ್ಟಾಗಿ ಆಕೆಗೆ ಎಚ್ಚರಿಕೆಯನ್ನು ನೀಡಿದ್ದಾರೆ. ವೀಸಾ ಸಮಸ್ಯೆಗಳಿಂದಾಗಿ ಬೋರ್ಡಿಂಗ್ ನಿರಾಕರಿಸಿದ ಪ್ರಯಾಣಿಕರಿಗೆ ವಿಮಾನಯಾನ ವೆಚ್ಚವನ್ನು ಭರಿಸುವುದಿಲ್ಲ ಎಂದು ಕೀನ್ಯಾ ಏರ್‌ವೇಸ್ ಸ್ಪಷ್ಟಪಡಿಸಿದೆ. ತಮ್ಮ ಉದ್ಯೋಗಿಗಳ ಜತೆ ಮಹಿಳೆ ಅನುಚಿತ ವರ್ತನೆಯನ್ನು ತೋರಿಸಿದ್ದನ್ನು ಖಂಡಿಸಿದೆ. “ನಮ್ಮ ಸಿಬ್ಬಂದಿ ಸುರಕ್ಷಿತ ಮತ್ತು ಒಳ್ಳೆಯ ವಾತಾವರಣದಲ್ಲಿ ಕೆಲಸ ಮಾಡಲು ಅರ್ಹರು. ನಮ್ಮ ಸಿಬ್ಬಂದಿ ಅಥವಾ ಅತಿಥಿಗಳಿಂದ ಯಾವುದೇ ಅನುಚಿತ ವರ್ತನೆಯನ್ನು ನಾವು ಸಹಿಸುವುದಿಲ್ಲ” ಎಂದು ತಿಳಿಸಿದ್ದಾರೆ.