#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಬೆಂಗಳೂರಿನಲ್ಲಿ ಹದಗೆಡುತ್ತಿದೆ ಗಾಳಿಯ ಗುಣಮಟ್ಟ

ಇತ್ತೀಚಿನ ಗ್ರೀನ್‌ಪೀಸ್ ಇಂಡಿಯಾ ವರದಿ "ಸ್ಪೇರ್ ದಿ ಏರ್-2" ಪ್ರಕಾರ ಬೆಂಗಳೂರಿನ ಗಾಳಿಯ ಗುಣ ಮಟ್ಟ ಬಹಳ ಕಡಿಮೆ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಗಾಳಿಯ ಗುಣಮಟ್ಟವನ್ನು ಪರ್ಟಿಕ್ಯು ಲೇಟ್ ಮ್ಯಾಟರ್ ಮೂಲಕ ಅಳೆಯಲಾಗುತ್ತಿದ್ದು, ಎಷ್ಟು ಮಾಲಿನ್ಯ ಉಂಟಾಗುತ್ತದೆ ಎಂಬುದನ್ನು ಪಿಎಂ2.5 ಮತ್ತು ಪಿಎಂ10 ಸಾಂದ್ರತೆಯ ಮೂಲಕ ಅಳೆಯಲಾಗುತ್ತದೆ. ಮಾನದಂಡಗಳ ಲೆಕ್ಕಾಚಾರ ಪ್ರಕಾರ ಬೆಂಗಳೂರಿನ ಮಾಲಿನ್ಯ ಜಾಸ್ತಿಯಾಗಿದೆ.

ಇವಿಗಳ ಅಳವಡಿಕೆಯೇ ಅಂತಿಮ ಪರಿಹಾರ: ಡಾ.ಗುಫ್ರಾನ್ ಬೇಗ್

Profile Ashok Nayak Jan 25, 2025 10:36 PM

ಚೇರ್ ಪ್ರೊಫೆಸರ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ಎನ್ಐ ಎಎಸ್), ಸಂಸ್ಥಾಪಕ ಯೋಜನಾ ನಿರ್ದೇಶಕ, ಸಫರ್ (ಎಸ್ಎಎಫ್ಎಆರ್)

ದಕ್ಷಿಣ ಭಾರತದಲ್ಲಿ ನೆಲೆಗೊಂಡಿರುವ ಅತ್ಯಂತ ಪ್ರಮುಖ ಮಹಾನಗರ ಬೆಂಗಳೂರು. ಬೆಂಗಳೂರಿಗೆ "ಭಾರತದ ಸಿಲಿಕಾನ್ ವ್ಯಾಲಿ" ಎಂದೂ ಕರೆಯಲಾಗುತ್ತದೆ. ಬೆಂಗಳೂರಿನಲ್ಲಿ ಅಂದಾಜು 12 ಮಿಲಿ ಯನ್ ಜನಸಂಖ್ಯೆ ಇದೆ ಎಂದು ಲೆಕ್ಕಾಚಾರ ಹೇಳುತ್ತದೆ. ಈ ನಗರದಲ್ಲಿ ಪ್ರಮುಖವಾಗಿ ಐಟಿ, ಜೈವಿಕ ತಂತ್ರಜ್ಞಾನ, ಏರೋಸ್ಪೇಸ್ ಮತ್ತು ಎಲೆಕ್ಟ್ರಾನಿಕ್ಸ್ ವಲಯಗಳು ಸೇರಿದಂತೆ ವೈವಿಧ್ಯಮಯ ವಲಯ ಗಳ ಪ್ರತಿಷ್ಠಿತ ಕಂಪನಿಗಳು ಕಾರ್ಯನಿರ್ವಹಿಸುತ್ತವೆ.

ಜನಸಂಖ್ಯೆ ಹೆಚ್ಚಳ, ಕೈಗಾರಿಕೀಕರಣ ಮತ್ತು ಖಾಸಗಿ ವಾಹನಗಳ ಬಳಕೆಯ ಹೆಚ್ಚಳ ಇತ್ಯಾದಿ ಕಾರಣಗಳಿಂದ ನಗರದಲ್ಲಿ ಅಪಾಯಕಾರಿ ಅಂಶಗಳ ಬಿಡುಗಡೆ ಹೆಚ್ಚುತ್ತಿದೆ. ಇತ್ತೀಚಿನ ಗ್ರೀನ್‌ಪೀಸ್ ಇಂಡಿಯಾ ವರದಿ "ಸ್ಪೇರ್ ದಿ ಏರ್-2" ಪ್ರಕಾರ ಬೆಂಗಳೂರಿನ ಗಾಳಿಯ ಗುಣಮಟ್ಟ ಬಹಳ ಕಡಿಮೆ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಗಾಳಿಯ ಗುಣಮಟ್ಟವನ್ನು ಪರ್ಟಿಕ್ಯುಲೇಟ್ ಮ್ಯಾಟರ್ ಮೂಲಕ ಅಳೆಯಲಾಗುತ್ತಿದ್ದು, ಎಷ್ಟು ಮಾಲಿನ್ಯ ಉಂಟಾಗುತ್ತದೆ ಎಂಬುದನ್ನು ಪಿಎಂ2.5 ಮತ್ತು ಪಿಎಂ10 ಸಾಂದ್ರತೆಯ ಮೂಲಕ ಅಳೆಯಲಾಗುತ್ತದೆ. ಮಾನದಂಡಗಳ ಲೆಕ್ಕಾಚಾರ ಪ್ರಕಾರ ಬೆಂಗಳೂರಿನ ಮಾಲಿನ್ಯ ಜಾಸ್ತಿಯಾಗಿದೆ.

ಹೊರಸೂಸುವಿಕೆಯ ಮೂಲ ಮತ್ತು ಪಾಲು: ಸಾರಿಗೆ ವಲಯವು ಶೇ.39.11 ಪಾಲು ಹೊಂದಿದ್ದು, ಮುಂಚೂಣಿಯಲ್ಲಿದೆ.

ಕೋಷ್ಟಕ 1: ಬೆಂಗಳೂರಿನಲ್ಲಿರುವ ವಿವಿಧ ವಲಯಗಳು ವಾರ್ಷಿಕವಾಗಿ ಹೊರಸೂಸುವ ಕಣಗಳ ವಿವರ (2023) ಮೂಲಗಳು ವಾರ್ಷಿಕ ಹೊರಸೂಸುವಿಕೆ (Gg/year) ಸಂಬಂಧಿತ ಹೊರ ಸೂಸು ವಿಕೆಯ ಪಾಲು (%)

  • ಪಿಎಂ2.5 ಪಿಎಂ10 ಪಿಎಂ2.5 ಪಿಎಂ10

ಸಾರಿಗೆ 26.84 26.84 39.11% 23.71%

ಉದ್ಯಮ 16.57 19.62 24.16% 17.34%

ರಸ್ತೆಯ ಧೂಳು 9.39 38.83 13.69% 34.31%

ಘನ ತ್ಯಾಜ್ಯ 5.46 5.88 7.95% 5.19%

ಡಿಜಿ ಸೆಟ್ ಗಳು 3.75 5.82 5.47% 5.14%

ಕೊಳಗೇರಿ 2.85 3.65 4.15% 3.23%

ಟೈರ್ ವೇರ್ 1.27 2.44 1.85% 2.15%

ಹೋಟೆಲ್‌ಗಳು 0.93 1.15 1.36% 1.02%

ನಿರ್ಮಾಣ ವಲಯ 0.64 6.37 0.93% 5.63%

ರೋಡ್ ವೇರ್ 0.62 1.14 0.90% 1.01%

ವಸತಿ 0.19 1.30 0.28% 1.14%

ಅಂತ್ಯಸಂಸ್ಕಾರ 0.10 0.15 0.15% 0.13%

ಒಟ್ಟು 68.61 113.18

ಬೆಂಗಳೂರಿನ ಸಾರಿಗೆ ವಲಯ: ಕಾರುಗಳು ಒಟ್ಟು ಹೊರಸೂಸುವಿಕೆಗೆ ಶೇ.22 ಕೊಡುಗೆ ನೀಡುತ್ತದೆ

ಸಾರಿಗೆ ವಲಯವು ಪಿಎಂ2.5 ಹೊರಸೂಸುವಿಕೆಗೆ ಪ್ರಮುಖ ಕೊಡುಗೆ ನೀಡುತ್ತಿದ್ದು, ಇದು ಶೇ.39.11 ರಷ್ಟಿದೆ. ಪಿಎಂ 10 ಹೊರಸೂಸುವಿಕೆಯ ಪಾಲು ಶೇ.23.71 ರಷ್ಟಿದೆ. ಕೈಗಾರಿಕಾ ವಲಯವು ಪಿಎಂ 2.5ಗೆ ಶೇ.24.16 ಮತ್ತು ಪಿಎಂ10ಗೆ ಶೇ.17.34 ಕೊಡುಗೆ ನೀಡುತ್ತಿದೆ. ರಸ್ತೆಯ ಧೂಳು ಪಿಎಂ10 ಹೊರ ಸೂಸುವಿಕೆಗೆ ಶೇ. 34.31 ರಷ್ಟು ಕೊಡುಗೆ ನೀಡುತ್ತಿದ್ದು, ಪಿಎಂ10 ಹೊರಸೂಸುವಿಕೆಯ ಪ್ರಮುಖ ಮೂಲವಾಗಿ ಹೊರಹೊಮ್ಮಿದೆ. ಆ ವಿಭಾಗದ ಪಿಎಂ2.5 ಹೊರಸೂಸುವಿಕೆಯ ಪಾಲು ಶೇ.13.69 ಆಗಿದೆ.

ಈ ಮಾಹಿತಿಯು ಇವಿ ಬಳಕೆಯನ್ನು ಹೆಚ್ಚಿಸಲು ಕಾರ್ಯನಿರ್ವಹಿಸುವಂತೆ ನೀತಿ ನಿರೂಪಕರಿಗೆ ಸ್ಪಷ್ಟವಾಗಿ ಸೂಚಿಸುತ್ತದೆ. ವಿಶೇಷವಾಗಿ ಸಾರ್ವಜನಿಕ ಸಾರಿಗೆ ವಿಭಾಗದಲ್ಲಿ ಇವಿ ಬಳಕೆ ಹೆಚ್ಚಿಸ ಬೇಕು ಅಥವಾ ಮಾಲಿನ್ಯ ನಿಯಂತ್ರಣ ವಿಚಾರದಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ತಿಳಿಸುತ್ತದೆ. ಈ ಮೂಲಕ ಪರಿಣಾಮಕಾರಿಯಾಗಿ ವಾಯು ಮಾಲಿನ್ಯವನ್ನು ತಗ್ಗಿಸಬಹುದು ಮತ್ತು ಗಾಳಿಯ ಗುಣಮಟ್ಟವನ್ನು ಹೆಚ್ಚಿಸಬಹುದು.

2023ರ ವೇಳೆಗೆ ಬೆಂಗಳೂರಿನಲ್ಲಿ ~9.7 ಮಿಲಿಯನ್ ನಷ್ಟು ವಾಹನ ಇತ್ತು. ಈ ಮೂಲಕ ಬೆಂಗಳೂರು ದೇಶದ ಅತ್ಯಂತ ವಾಹನಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಗಳಿಸಿತ್ತು (MoRTH, 2024). 6.7 ಮಿಲಿಯನ್ ದ್ವಿಚಕ್ರ ವಾಹನಗಳಿದ್ದು, ವಾಹನಗಳಲ್ಲಿ ಈ ವಿಭಾಗ ಪ್ರಾಬಲ್ಯ ಹೊಂದಿದೆ. ವಾಹನಗಳ ಒಟ್ಟು ಸಂಖ್ಯೆಯಲ್ಲಿ ಶೇ.70 ರಷ್ಟು ದ್ವಿಚಕ್ರವಾಹನಗಳಿವೆ. ಅದರ ಹಿಂದೆ ಕಾರುಗಳಿದ್ದು, 2 ಮಿಲಿಯನ್ ಕಾರುಗಳಿವೆ. ಶೇ.22ರಷ್ಟು ಪಾಲು ಹೊಂದಿವೆ. ತ್ರಿ-ಚಕ್ರ ವಾಹನಗಳ ಸಂಖ್ಯೆ ಶೇ.3 ರಷ್ಟಿದೆ.

ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಲ್ಲಿ ಶೇ.48ರಷ್ಟು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಾಹನ ಗಳಾಗಿವೆ. ಶೇ.37ರಷ್ಟು ವಾಹನಗಳು 5-15 ವರ್ಷಗಳ ವ್ಯಾಪ್ತಿಯಲ್ಲಿ ಬರುತ್ತವೆ ಮತ್ತು ಶೇ.15ರಷ್ಟು ವಾಹನಗಳು 15 ವರ್ಷಕ್ಕಿಂತ ಮೇಲ್ಪಟ್ಟವು. ಕಾರುಗಳಲ್ಲಿ ಶೇ.35ರಷ್ಟು 5 ವರ್ಷಕ್ಕಿಂತ ಕಡಿಮೆ ವಯಸ್ಸಿನವು. ಶೇ.34ರಷ್ಟು 5-15 ವರ್ಷಗಳ ವ್ಯಾಪ್ತಿಯಲ್ಲಿ ಬರುತ್ತವೆ ಮತ್ತು ಶೇ.32ರಷ್ಟು 15 ವರ್ಷ ಕ್ಕಿಂತ ಹಳೆಯದಾಗಿವೆ. ಬಸ್ಸುಗಳು ಮತ್ತು ಲಾರಿಗಳು ಇದೇ ಮಾದರಿಯನ್ನು ಅನುಸರಿಸಿವೆ. ಶೇ.42 ರಷ್ಟು ವಾಹನಗಳು 5 ವರ್ಷದೊಳಗಿನವಾಗಿದ್ದು, ಶೇ.38ರಷ್ಟು ವಾಹನಗಳು 5-15 ವರ್ಷಗಳ ವ್ಯಾಪ್ತಿಯಲ್ಲು ಬರುತ್ತದೆ ಮತ್ತು ಶೇ.20ರಷ್ಟು 15 ವರ್ಷಕ್ಕಿಂತ ಹಳೆಯ ವಾಹನಗಳಾಗಿವೆ.

ಈ ಮಾಹಿತಿಯು ಇತರ ವಾಹನ ಪ್ರಕಾರಗಳಿಗೆ ಹೋಲಿಸಿದರೆ ಹಳೆಯ ಕಾರುಗಳ ಪ್ರಮಾಣ ಹೆಚ್ಚಾ ಗಿರುವುದನ್ನು ಸೂಚಿಸುತ್ತದೆ. ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳ ಪ್ರಮಾಣ ತುಲನಾ ತ್ಮಕವಾಗಿ ಕಡಿಮೆ ಇವೆ. ಬಸ್ಸುಗಳು ಮತ್ತು ಲಾರಿಗಳ ಸಂಖ್ಯೆ ಸಮತೋಲಿತವಾಗಿದ್ದು, ಕಾಲಾನು ಕ್ರಮದಲ್ಲಿ ಬದಲಾವಣೆ ತರಬಹುದಾದ ನಿರೀಕ್ಷೆ ಉಂಟು ಮಾಡಿವೆ.

ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ (ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಆಂಡ್ ವೆದರ್ ಫೊರ್ ಕಾಸ್ಟಿಂಗ್ ಆಂಡ್ ರಿಸರ್ಚ್- ಎಸ್ಎಎಫ್ಎಆರ್) ಒದಗಿಸಿದ ಪ್ರಮಾಣಿತ ಕಾರ್ಯವಿಧಾನಗಳು ಮತ್ತು ಹೊರಸೂಸುವಿಕೆ ಅಂಶಗಳನ್ನು ಬಳಸಿಕೊಂಡು ಪಿಎಂ 2.5 ವಿಭಾಗದಲ್ಲಿನ ವಿವಿಧ ವಾಹನ ವರ್ಗಗಳ ಕೊಡುಗೆಯನ್ನು ಈ ಕೆಳಗೆ ನೀಡಲಾಗಿದೆ.

ಅಂದಾಜು ಹೊರಸೂಸುವಿಕೆಯ ಕುರಿತ ಕೆಲವು ಪ್ರಮುಖ ಅಂಶಗಳು:

  • ಸಾರಿಗೆ ವಲಯವು 2023ರಲ್ಲಿ 26.84 Gg ಪಿಎಂ2.5 ಅನ್ನು ಉತ್ಪಾದಿಸಿದೆ.
  • ಸಿವಿಗಳು ಒಟ್ಟು ಪಿಎಂ2.5 ಹೊರಸೂಸುವಿಕೆಯ ಶೇ.49% ರಷ್ಟು ಪಾಲನ್ನು ಹೊಂದಿದ್ದು, ಇದು ಮಾಲಿನ್ಯದ ಮಟ್ಟದಲ್ಲಿ ಆ ವಿಭಾಗದ ದೊಡ್ಡ ಪಾತ್ರವನ್ನು ಸೂಚಿಸುತ್ತದೆ.
  • ಕಾರುಗಳು ಹೊರಸೂಸುವಿಕೆಯಲ್ಲಿ ಶೇ.20 ಕೊಡುಗೆ ನೀಡುತ್ತಿದ್ದು, ಪಿಎಂ2.5 ಮಾಲಿನ್ಯದಲ್ಲಿ ಈ ವಿಭಾಗವು ಎರಡನೇ ಅತಿ ದೊಡ್ಡ ವಿಭಾಗವಾಗಿದೆ.

ಸಾರಿಗೆ ಕ್ಷೇತ್ರದಲ್ಲಿ ವಿದ್ಯುದೀಕರಣ: ಆರೋಗ್ಯ ವೆಚ್ಚಗಳು ಕಡಿಮೆ ಆಗುತ್ತವೆ, ಉತ್ತಮ ಜೀವನ ನಡೆಸಲು ಬೇಕಾದ ಪ್ರಯೋಜನ ದೊರೆಯುತ್ತವೆ.

* ಸಾರಿಗೆ ವಿಚಾರದಲ್ಲಿ ಇವಿ ಅಳವಡಿಕೆಯನ್ನು ಹೆಚ್ಚಿಸುವುದರಿಂದ ಆಗುವ ಲಾಭಗಳನ್ನು ನಾವು ಆರೋಗ್ಯ ಸೇವಾ ವೆಚ್ಚಗಳಲ್ಲಿ ಉಂಟಾಗಲಿರುವ ಕಡಿತದ ಮೂಲಕ ಅಲೆಯಲು ನಾವು ಪ್ರಯತ್ನಿಸಿ ದ್ದೇವೆ. 2023ರ ಪ್ರಕಾರ ಲೆಕ್ಕಹಾಕಿದ ಹೊರಸೂಸುವಿಕೆಯ ಆಧಾರದ ಮೇಲೆ ಇವಿ ಅಳವಡಿಕೆಯ ಪರಿಣಾಮ ಅಥವಾ ಲಾಭಗಳನ್ನು ನಿರ್ಣಯಿಸಲು ಮೂರು ಅಂಶಗಳನ್ನು ಪರೀಕ್ಷಿಸಲಾಯಿತು.

* ಆ ಮೂರು ಅಂಶಗಳು ಹೀಗಿವೆ, (ಎ) ಎಲ್ಲಾ ಕಾರುಗಳನ್ನು ಇವಿಗಳಾಗಿ ಬದಲಿಸುವುದು; (ಬಿ) ಎಲ್ಲಾ ಲಘು ವಾಣಿಜ್ಯ ವಾಹನಗಳು (ಎಲ್ ಸಿ ವಿ ಗಳು) ಮತ್ತು ಬಸ್ಸುಗಳನ್ನು ಇವಿ ಗಳಾಗಿ ಪರಿವ ರ್ತಿಸುವುದು, ಮತ್ತು (ಸಿ) ಎಲ್ಲಾ ವಾಹನಗಳನ್ನು ಇವಿಗಳಾಗಿ ಸಂಪೂರ್ಣವಾಗಿ ಬದಲಾಯಿಸು ವುದು.

ಇವಿಗಳ ಅಳವಡಿಕೆ: ಬೆಂಗಳೂರಿನಲ್ಲಿ ಖರ್ಚು ಮಾಡುವ ಆರೋಗ್ಯ ಸೇವೆ ವೆಚ್ಚದಲ್ಲಿ 5,300 ಕೋಟಿ ರೂಪಾಯಿಗಳನ್ನು ಉಳಿಸಬಹುದು. ಪ್ರತೀ ಸನ್ನಿವೇಶಕ್ಕೆ ಸಂಬಂಧಿಸಿದಂತೆ ಹೊರಸೂಸು ವಿಕೆಯ ಪ್ರಮಾಣದಲ್ಲಿನ ಕಡಿತದ ಅಂದಾಜು ಲೆಕ್ಕವನ್ನು ಹಾಕಲಾಗಿದೆ ಮತ್ತು ಕಣಗಳ ಸಾಂದ್ರತೆ ಗಳಲ್ಲಿ ಉಂಟಾಗುವ ಕಡಿತದ ಆಧಾರದ ಮೇಲೆ ಆರೋಗ್ಯ ವೆಚ್ಚದ ಉಳಿತಾಯವನ್ನು ಅಂದಾಜಿಸ ಲಾಗಿದೆ.

  • ವಾಯುಮಾಲಿನ್ಯದಿಂದ ಉಂಟಾಗುವ ಆರೋಗ್ಯ ಮತ್ತು ಆರ್ಥಿಕ ಪರಿಣಾಮಗಳನ್ನು ಅಂದಾಜಿ ಸಲಾಗಿದ್ದು, ಕಳೆದ ಮೂರು ದಶಕಗಳಲ್ಲಿ ಬೆಂಗಳೂರಿನಲ್ಲಿ ಪಿಎಂ2.5 ಸಾಂದ್ರತೆಯ ಶೇ.97ರಷ್ಟು ಹೆಚ್ಚಳವಾಗಿದ್ದು, ಅದರಿಂದ ಉಂಟಾದ ಅಕಾಲಿಕ ಮರಣದ ಕಾರಣಕ್ಕೆ ₹1922.83 ಕೋಟಿ ನಷ್ಟ, ಅನಾರೋಗ್ಯದಿಂದ ₹516.88 ಕೋಟಿ ನಷ್ಟ ಮತ್ತು ತಲಾವಾರು ಆರೋಗ್ಯ ರಕ್ಷಣೆಯ ವೆಚ್ಚದಲ್ಲಿ ಹೆಚ್ಚಳದಿಂದ ₹3309.6 ನಷ್ಟ ಉಂಟಾಗಿದೆ ಎಂದು ಊಹಿಸಲಾಗಿದೆ. (Pandey et al., 2021)

ಈ ವಿಧಾನದ ಮೂಲಕ ಬೆಂಗಳೂರಿನಲ್ಲಿ ಇವಿ ಅಳವಡಿಕೆಯಿಂದ ಉಂಟಾಗುವ ಪರಿಸರ ಲಾಭ ಮತ್ತು ಆರ್ಥಿಕ ಪ್ರಯೋಜನಗಳ ಸಮಗ್ರ ಮೌಲ್ಯಮಾಪನವನ್ನು ಮಾಡಬಹುದಾಗಿದೆ. ವಿಶೇಷವಾಗಿ ಉದ್ದೇಶಿತ ವಾಹನ ವಿಭಾಗವನ್ನು ವಿದ್ಯುದೀಕರಣ ಮಾಡುವ ಮೂಲಕ ಆರೋಗ್ಯ ಸೇವಾ ವೆಚ್ಚ ವನ್ನು ಕಡಿಮೆ ಮಾಡುವ ಮತ್ತು ಗಾಳಿಯ ಗುಣಮಟ್ಟವನ್ನು ಸುಧಾರಿಸಬಹುದಾದ ಸಾಧ್ಯತೆ ಯನ್ನು ತಿಳಿಯಬಹುದಾಗಿದೆ.

* ಪ್ರಸ್ತುತ ಸನ್ನಿವೇಶದಲ್ಲಿ ಆರೋಗ್ಯ ಸೇವಾ ವೆಚ್ಚದಲ್ಲಿ ಗಣನೀಯ ಹೆಚ್ಚಳ ಉಂಟಾಗಿದೆ. ಅದರಲ್ಲೂ ಮರಣ ಮತ್ತು ಅನಾರೋಗ್ಯದಿಂದ ಕ್ರಮವಾಗಿ ₹ 4,045.54 ಕೋಟಿ ಮತ್ತು ₹ 1,309.17 ಕೋಟಿ ನಷ್ಟ ಉಂಟಾಗುತ್ತಿದೆ. ಇದರಿಂದಾಗಿ ಪ್ರತಿಯೊಬ್ಬರ ತಲಾವಾರು ಆರೋಗ್ಯ ಸೇವಾ ವೆಚ್ಚ ₹ 3,179 ಆಗಿದೆ.

ಬೆಂಗಳೂರಿನಲ್ಲಿ ಇವಿ ಅಳವಡಿಕೆಯಿಂದ ಆಗಬಹುದಾದ ಪಿಎಂ2.5 ಕಡಿತ ಮತ್ತು ಅದಕ್ಕೆ ಸಂಬಂಧಿಸಿ ಕಡಿತಗೊಳ್ಳಬಹುದಾದ ಆರೋಗ್ಯ ಸೇವಾ ವೆಚ್ಚಗಳ ವಿವರ

ಕ್ರಮಗಳು ಪಿಎಂ2.5 ಸಾಂದ್ರತೆಯಲ್ಲಿ ಕಡಿತ % ಮರಣ ಪ್ರಮಾಣ ಕಡಿತದ ಪ್ರಯೋಜನಗಳು (ಕೋಟಿಗಳಲ್ಲಿ ರೂ./ ವಾರ್ಷಿಕ) ಅನಾರೋಗ್ಯದಲ್ಲಿ ಕಡಿತದಿಂದ ಉಂಟಾಗುವ ಪ್ರಯೋಜನ (ಕೋಟಿಗಳಲ್ಲಿ ರೂ./ ವಾರ್ಷಿಕ) ತಲಾವಾರು ಆರೋಗ್ಯ ಸೇವಾ ವೆಚ್ಚದಲ್ಲಿ ಉಂಟಾಗುವ ಕಡಿತ (ರೂಪಾಯಿ/ ವಾರ್ಷಿಕ)

ಎಲ್ಲಾ ಕಾರುಗಳೂ ಇವಿ 7.67% 224.24 65.51 393.68

ಎಲ್ಲಾ ಎಲ್ ಸಿ ವಿ ಮತ್ತು ಬಸ್ ಗಳು ಇವಿ 21.83% 638.50 186.56 1120.96

ಎಲ್ಲಾ ವಾಹನಗಳೂ ಇವಿ 39.11% 1144.03 334.26 2008.48

ವಿವಿಧ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹೊಂದಬಹುದಾದ ಗಾಳಿಯ ಗುಣಮಟ್ಟ ಸುಧಾರಣೆ ಮತ್ತು ಸಂಬಂಧಿತ ಆರೋಗ್ಯ ಸೇವಾ ವೆಚ್ಚದ ಪ್ರಯೋಜನಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

  • ಬೆಂಗಳೂರಿನ ಎಲ್ಲಾ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ (ಇವಿ) ಪರಿವರ್ತಿಸುವುದರಿಂದ ಪಿಎಂ2.5 ಸಾಂದ್ರತೆಯಲ್ಲಿ (ಶೇ.33.8) ಅತ್ಯಧಿಕ ಕಡಿತ ಉಂಟಾಗುವಂತೆ ನೋಡಿಕೊಳ್ಳಬಹುದು. ಎಲ್ಲಾ ಲಘು ವಾಣಿಜ್ಯ ವಾಹನಗಳು (ಎಲ್‌ಸಿವಿಗಳು) ಮತ್ತು ಬಸ್‌ಗಳನ್ನು ಇವಿಗಳಾಗಿ ಪರಿವರ್ತಿ ಸುವುದರಿಂದ ಶೇ.18.9ರಷ್ಟು, ಮತ್ತು ಎಲ್ಲಾ ಕಾರುಗಳನ್ನು ಇವಿ ಮಾಡುವುದರಿಂದ ಶೇ.6.6 ರಷ್ಟು ಕಡಿತ ಮಾಡಬಹುದು.
  • ಎಲ್ಲಾ ವಾಹನಗಳನ್ನು ಇವಿಗಳಾಗಿ ಪರಿವರ್ತಿಸಿದಾಗ ಮರಣದಿಂದ ಉಂಟಾಗುವ ನಷ್ಟದ ಪ್ರಮಾಣದಲ್ಲಿಯೂ ಕಡಿತ ಉಂಟಾಗಿರುವುದನ್ನು ಗಮನಿಸಲಾಗಿದ್ದು, ಇದರ ಪರಿಣಾಮವಾಗಿ ರೂ. 1144.03 ಕೋಟಿ ಲಾಭ ಗಳಿಸಬಹುದಾಗಿದೆ. ಎಲ್ ಸಿ ವಿ ಗಳು ಮತ್ತು ಬಸ್‌ಗಳ್ನು ಇವಿ ಮಾಡಿದರೆ ರೂ. 638.5 ಕೋಟಿ ಪ್ರಯೋಜನ ಮತ್ತು ಕಾರುಗಳನ್ನು ಇವಿಗೆ ಬದಲಿಸಿದರೆ ರೂ. 224.24 ಕೋಟಿ ಪ್ರಯೋಜನ ಹೊಂದಬಹುದಾಗಿದೆ.
  • ಎಲ್ಲಾ ವಾಹನಗಳನ್ನು ಇವಿಗಳಾಗಿ ಪರಿವರ್ತಿಸುವುದರಿಂದ ಅನಾರೋಗ್ಯ ಸಂಬಂಧಿತ ವೆಚ್ಚ ಗಳಲ್ಲಿ ರೂ. 334.26 ಕೋಟಿಯಷ್ಟು ಪ್ರಯೋಜನಗಳನ್ನು ಪಡೆಯಬಹುದಾಗಿದ್ದು, ಎಲ್ ಸಿ ವಿಗಳು ಮತ್ತು ಬಸ್‌ ಗಳನ್ನು ಇವಿಗಳಾಗಿ ಬದಲಿಸಿದರೆ ರೂ. 186.56 ಕೋಟಿ ಪ್ರಯೋಜನ ಮತ್ತು ಕಾರುಗಳನ್ನು ಇವಿಯಾಗಿ ಪರಿವರ್ತಿಸಿದರೆ ರೂ. 65.51 ಕೋಟಿಗಳಷ್ಟು ಪ್ರಯೋಜನ ಹೊಂದ ಬಹುದಾಗಿದೆ.
  • ಎಲ್ಲಾ ವಾಹನಗಳನ್ನು ಇವಿಗಳಾಗಿ ಪರಿವರ್ತಿಸಿದರೆ ತಲಾವಾರು ಆರೋಗ್ಯದ ವೆಚ್ಚವು ರೂ. 2008 ರಷ್ಟು ಕಡಿಮೆಯಾಗಲಿದೆ. ಎಲ್ ಸಿ ವಿಗಳು ಮತ್ತು ಬಸ್‌ ಗಳನ್ನು ಇವಿಗಳಾಗಿ ಪರಿವರ್ತಿಸಿ ದರೆ ರೂ. 1120.6) ರಷ್ಟು ಮತ್ತು ಕಾರುಗಳನ್ನು ಮಾತ್ರ ಇವಿ ಮಾಡಿದರೆ ರೂ.393.68 ರಷ್ಟು ಕಡಿತ ಉಂಟಾಗಬಹುದಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಬೆಂಗಳೂರಿನಲ್ಲಿರುವ ಎಲ್ಲಾ ವಾಹನಗಳನ್ನು ಇವಿಗಳಾಗಿ ಬದಲಾ ಯಿಸುವುದರಿಂದ ಪಿಎಂ2.5 ಹೊರಸೂಸುವಿಕೆಯಲ್ಲಿ ಬಹಳಷ್ಟು ಕಡಿತ ಉಂಟಾಗಲಿದೆ. ಅದರಿಂದ ಆರೋಗ್ಯ ಸಂಬಂಧಿತ ಆರ್ಥಿಕ ವೆಚ್ಚಗಳು ಕಡಿಮೆ ಆಗುತ್ತವೆ. ವಾಹನಗಳನ್ನು ಸಂಪೂರ್ಣವಾಗಿ ವಿದ್ಯುದೀಕರಣ ಮಾಡುವುದರಿಂದ ಹೆಚ್ಚಿನ ಆರ್ಥಿಕ ಪ್ರಯೋಜನಗಳನ್ನು ಗಳಿಸಬಹುದಾಗಿದ್ದು, ಜೊತೆಗೆ ಗಾಳಿಯ ಗುಣಮಟ್ಟ ಸುಧಾರಿಸುತ್ತದೆ ಮತ್ತು ಸಾರ್ವಜನಿಕ ಆರೋಗ್ಯ ಕೂಡ ಸುಧಾರಿಸ ಲಿದೆ.

ಇವೆಲ್ಲವೂ ದೊಡ್ಡ ಪ್ರಮಾಣದ ವಿದ್ಯುದೀಕರಣ ಆಗಬೇಕಾದ ಮಹತ್ವವನ್ನು ತೋರಿಸುತ್ತದೆ. ಬೆಂಗಳೂರಿನಲ್ಲಿನ ವಾಹನಗಳ ಸಂಪೂರ್ಣ ವಿದ್ಯುದ್ದೀಕರಣದಿಂದ ಹೊರಸೂಸುವಿಕೆ, ಪಿಎಂ ಮಟ್ಟಗಳು ಮತ್ತು ಆರೋಗ್ಯದ ವೆಚ್ಚ ಎಲ್ಲವೂ ಕಡಿಮೆ ಆಗಲಿದೆ ಎಂದು ಸಂಶೋಧನೆಗಳು ತಿಳಿಸಿವೆ.

ಈ ಬದಲಾವಣೆಯಿಂದ ಡಿಸೇಬಿಲಿಟಿ ಅಡ್ಜಸ್ಟೆಡ್ ಲೈಫ್ ಯಿಯರ್ಸ್ (ಒಂದು ವರ್ಷದ ಸಂಪೂರ್ಣ ಆರೋಗ್ಯ ನಷ್ಟವನ್ನು ಸೂಚಿಸುವ ಆರೋಗ್ಯ ಮಾಪನ)ನಲ್ಲಿ ಕಡಿತ, ಗಾಳಿಯ ಗುಣ ಮಟ್ಟದಲ್ಲಿ ಸುಧಾರಣೆ ಮತ್ತು ಪ್ರತೀ ವ್ಯಕ್ತಿಯ ಆರೋಗ್ಯ ವೆಚ್ಚದಲ್ಲಿ ಗಣನೀಯವಾ ಮಟ್ಟದಲ್ಲಿ ಕಡಿತ ಉಂಟಾಗಲಿದೆ.