ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರಾಜ್ಯಕ್ಕೂ ಹಕ್ಕಿ ಜ್ವರದ ಭೀತಿ ?

ರಾಜ್ಯಕ್ಕೂ ಹಕ್ಕಿ ಜ್ವರದ ಭೀತಿ ?

ರಾಜ್ಯಕ್ಕೂ ಹಕ್ಕಿ ಜ್ವರದ ಭೀತಿ ?

Profile Vishwavani News Jan 4, 2021 5:01 PM
ಬೆಂಗಳೂರು : ರಾಜಸ್ತಾನದಲ್ಲಿ 400ಕ್ಕೂ ಹೆಚ್ಚು ಕಾಗೆಗಳು ಹಕ್ಕಿಜ್ವರ, ಇಂದು ನೆರೆಯ ಕೇರಳದಲ್ಲೂ ಹಕ್ಕಿ ಜ್ವರದಿಂದಾಗಿ 12 ಸಾವಿರ ಬಾತುಕೋಳಿಗಳು ಸಾವನ್ನಪ್ಪಿವೆ. ಹೀಗಾಗಿ, ರಾಜ್ಯಕ್ಕೂ ಹಕ್ಕಿ ಜ್ವರದ ಭೀತಿ ಎದುರಾಗಿದೆ ಎನ್ನಲಾಗಿದೆ. ಕಳೆದ ಶನಿವಾರ ರಾಜಸ್ಥಾನದಲ್ಲಿ, ಭಾನುವಾರ ಜೋಧಪುರದಲ್ಲಿ 152 ಕಾಗೆಗಳು ಸತ್ತಿವೆ. ಇಂದು ಕೇರಳದ ಅಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ವೈರಸ್ ಪತ್ತೆಯಾಗಿದೆ. ಹಕ್ಕಿ ಜ್ವರದಿಂದಾಗಿ ಇದುವರೆಗೆ 12,000 ಬಾತುಕೋಳಿಗಳು ಸತ್ತಿವೆ. 36,000ಕ್ಕೂ ಹೆಚ್ಚು ಬಾತುಕೋಳಿಗಳು ಹರಡುವುದನ್ನು ತಪ್ಪಿಸಲು ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ರಾಜ್ಯಕ್ಕೂ ಹಕ್ಕಿ ಜ್ವರ ಹರಡುವ ಭೀತಿ ಎದುರಾಗಿದೆ. ಕೇರಳದಲ್ಲಿ ಕಾಣಿಸಿಕೊಂಡಿರುವಂತ ಹಕ್ಕಿ ಜ್ವರವು ರಾಜ್ಯಕ್ಕೂ ಕಾಲಿಡಲಿದೆ ಎನ್ನಲಾಗುತ್ತಿದೆ.