ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nikhil Kumaraswamy: ಜು.9ಕ್ಕೆ ಜೆಡಿಎಸ್ ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ ಜಿಲ್ಲಾ ಪ್ರವಾಸ : ಮುಕ್ತ ಮುನಿಯಪ್ಪ

ಜೆಡಿಎಸ್ ಪಕ್ಷವನ್ನು ಬಲಿಷ್ಟವಾಗಿ ಸಂಘಟನೆ ಮಾಡುವ ಮೂಲಕ ೨೦೨೮ಕ್ಕೆ ರಾಜ್ಯದಲ್ಲಿ  ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜುಲೈ.೯ರಂದು ಜಿಲ್ಲೆಯ ಗೌರಿಬಿದನೂರಿಗೆ ಆಗಮಿಸಲಿದ್ದು ಅಲ್ಲಿಂದ ಚಿಕ್ಕ ಬಳ್ಳಾಪುರಕ್ಕೆ ಆಗಮಿಸುವರು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲಕುಂಟಹಳ್ಳಿ ಮುನಿಯಪ್ಪ ತಿಳಿಸಿದರು.

ಜು.9ಕ್ಕೆ ಜೆಡಿಎಸ್ ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ ಜಿಲ್ಲಾ ಪ್ರವಾಸ

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಖಂಡರು ಮಾತನಾಡಿದರು.

Profile Ashok Nayak Jul 5, 2025 11:13 PM

ಚಿಕ್ಕಬಳ್ಳಾಪುರ :  ಜೆಡಿಎಸ್ ಪಕ್ಷವನ್ನು ಬಲಿಷ್ಟವಾಗಿ ಸಂಘಟನೆ ಮಾಡುವ ಮೂಲಕ ೨೦೨೮ಕ್ಕೆ ರಾಜ್ಯದಲ್ಲಿ  ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜುಲೈ.೯ರಂದು ಜಿಲ್ಲೆಯ ಗೌರಿಬಿದನೂರಿಗೆ ಆಗಮಿಸಲಿದ್ದು ಅಲ್ಲಿಂದ ಚಿಕ್ಕ ಬಳ್ಳಾಪುರಕ್ಕೆ ಆಗಮಿಸುವರು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲಕುಂಟಹಳ್ಳಿ ಮುನಿಯಪ್ಪ ತಿಳಿಸಿದರು.

ನಗರದ ಶನಿಮಹಾತ್ಮ ದೇವಾಲಯದ ಬಳಿಯಿರುವ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಶನಿವಾರ ನಡೆಸಿದ ನಿಖಿಲ್ ಕುಮಾರಸ್ವಾಮಿ ಆಗಮನದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಇದನ್ನೂ ಓದಿ: Chikkaballapur News: 14ನೇ ಸಚಿವ ಸಂಪುಟದ ತೀರ್ಮಾನಗಳಿಗೆ ಅಂತಿಮ ಗಡುವು ನೀಡಿ : ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ

ಮಾಜಿ ಪ್ರಧಾನಿ ದೇವೇಗೌಡರ ಮಾರ್ಗದರ್ಶನ, ಕೇಂದ್ರ ಸಚಿವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಆಶೀರ್ವಾದ,ನಿಖಿಲ್ ಕುಮಾರಸ್ವಾಮಿ ಅವರ ಸಂಘಟನೆಯ ನೇತೃತ್ವದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಉದ್ದೇಶವಾಗಿದೆ. ನಮ್ಮ ಪಕ್ಷದ ವರಿಷ್ಟರು ಹೇಳುವ ಮಾತಿನಂತೆ ಜಿಲ್ಲೆಯಲ್ಲಿ  ಪಕ್ಷದ ಸಂಘಟನೆಗೆ ಒತ್ತು ನೀಡಲಾಗಿದ್ದು ಜು.೯ ರಿಂದ ೧೩ರವರೆಗೆ ನಡೆಯುವ ಸದಸ್ಯತ್ವ ನೋಂದಣಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲು ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದರು.

ಚಿಕ್ಕಬಳ್ಳಾಪುರ ತಾಲ್ಲೂಕಿಗೆ ಜುಲೈ ೯ರಂದು ನಿಕಿಲ್ ಕುಮಾರಸ್ವಾಮಿ ಆಗಮಿಸಲಿದ್ದಾರೆ, ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಭಾಗವಹಿಸಬೇಕೆಂದು ಮನವಿ ಮಾಡಿದರು.

ಈ ವೇಳೆ, ಕಾರ್ಯಧ್ಯಕ್ಷ ಕೆ.ಆರ್.ರೆಡ್ಡಿ,ತಾಲೂಕು ಅಧ್ಯಕ್ಷ ಕೊಳವನಹಳ್ಳಿ ಮುನಿರಾಜು, ಬಂಡ್ಲು ಶ್ರೀನಿವಾಸ್, ಕಿಸಾನ್ ಕೃಷ್ಣಪ್ಪ, ಶಾಂತಮೂರ್ತಿ,ಪ್ರಭಾ ನಾರಾಯಣಗೌಡ, ಅಖಿಲ್‌ರೆಡ್ಡಿ ಮತ್ತಿತರೆ ಮುಖಂಡರು ಭಾಗಿವಹಿಸಿದ್ದರು.